Sunday, June 14, 2026
Homeಜಿಲ್ಲಾ ಸುದ್ದಿಗಳುಉತ್ತರ ಕನ್ನಡತಹಶೀಲ್ದಾರ ನೇತೃತ್ವದಲ್ಲಿ ತಂಬಾಕು ಉತ್ಪನ ಮಾರಾಟ ಅಂಗಡಿಗಳ ಮೇಲೆ ದಾಳಿ ಮತ್ತು ಜಾಗೃತಿ ಮೂಡಿಸುವ ಕೆಲಸ.....

ತಹಶೀಲ್ದಾರ ನೇತೃತ್ವದಲ್ಲಿ ತಂಬಾಕು ಉತ್ಪನ ಮಾರಾಟ ಅಂಗಡಿಗಳ ಮೇಲೆ ದಾಳಿ ಮತ್ತು ಜಾಗೃತಿ ಮೂಡಿಸುವ ಕೆಲಸ…..

ವರದಿ: ಬಸಯ್ಯ ತೋಟಯ್ಯನವರ


ಮುಂಡಗೋಡ : ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ತಾಲೂಕಿನಲ್ಲಿ ಕೋಟ್ಪ 2003 ಕಾಯ್ದೆಯಡಿಯಲ್ಲಿ ತಾಲೂಕಿನಲ್ಲಿ ತಂಬಾಕು ಸೇವನೆಯಿಂದ ಆಗುವಂತ ಆರೋಗ್ಯದ ಗಂಭೀರ ಪರಿಣಾಮದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ತಹಶೀಲ್ದಾರ ಪ್ರಸಾದ ಎಸ್‌.ಎ. ನೇತೃತ್ವದಲ್ಲಿ ತಾಲೂಕಾ ಮಟ್ಟದ ತನಿಖಾದಳದ ಸದಸ್ಯರು ತಂಬಾಕು ಉತ್ಪನ ಮಾರಾಟ ಮಾಡುವ ಹಾಗೂ ಶೇಖರಣೆ ಮಾಡಿದ ಅಂಗಡಿ ಮುಗ್ಗಟ್ಟುಗಳ ಮೇಲೆ ದಾಳಿನಡೆಸಲಾಯಿತು ಕೋಟ್ವಾ ಕಾಯ್ದೆ ಸೆಕ್ಷನ್ 4 ಮತ್ತು ಸೆಕ್ಷನ್ 6 ಎ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಸೂಚಿಸಲಾಯಿತು. ತಂಬಾಕು ಉತ್ಪನ್‌ ಹಾಗೂ ಮಾರಾಟ ಹಾಗೂ ತಂಬಾಕು ನಿಷೇಧಿಸಿದೆ ಎಂಬ ಸೂಚನಾ ಫಲಕಗಳು ಅಂಗಡಿಗಳ ಹೊರಗಡೆ ಗ್ರಾಹಕರಿಗೆ ಕಾಣುವಂತೆ ಅಳವಡಿಸದ ಅಂಗಡಿಕಾರರಿಗೆ ದಂಡ ವಿಧಿಸಿ ದಂಡದ ರೂಪವಾಗಿ ಒಟ್ಟು 11೦೦ ರೂ ಗಳನ್ನು ವಸೂಲಿ ಮಾಡಲಾಯಿತು.ದಂಡದ ಹಣವನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಜಂಟಿ ಖಾತೆಗೆ ಜಮಾ ಮಾಡಲಾಯಿತ. ತಂಬಾಕು ದಾಳಿಯಲ್ಲಿ ತಹಶೀಲ್ದಾರ ಪ್ರಸಾದ್ ಎಸ್. ಎ . ಸಿಡಿಪಿಒ ಸಂಜೀವ್ ಕುಮಾರ್ ಸದಲಗಿ, ಪಟ್ಟಣ ಪಂಚಾಯತ್‌ ಸಂಘಟನಾ ಸಮೂಹ ಅಧಿಕಾರಿ ಕುಮಾರ ನಾಯಕ್‌ ಬಿ.ಆರ್‌.ಸಿ ರಮೇಶ ಅಂಬಿಗೇರ, ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಎಸ್ ಪಟ್ಟಣಶೆಟ್ಟಿ ಹಿರಿಯ ಆರೋಗ್ಯ ನಿರೀಕ್ಷನಾಧಿಕಾರಿ ಎನ್ ಎಚ್ ಹಿರೇಮಠ . ಆರೋಗ್ಯ ನಿರೀಕ್ಷೆನಾಧಿಕಾರಿ ಪ್ರಸಾದ್ ಎ. ಆರೋಗ್ಯ ನಿರೀಕ್ಷೆನಾಧಿಕಾರಿ ಅಶೋಕ್ ಎ, ತಹಶೀಲ್ದಾರ ಕಚೇರಿಯ ಶ್ರೀಕಾಂತ ಹೊಸಮನಿ ಸಮಾಜ ಕಲ್ಯಾಣ ಇಲಾಖೆಯ ಕೃಷ್ಣ ನಾಯಕ, ಪೊಲೀಸ ಇಲಾಖೆಯ ಅರುಣಕುಮಾರ ಬಾಗೇವಾಡಿ ಮುಂತಾದವರು ದಾಳಿಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು

ಹೆಚ್ಚಿನ ಸುದ್ದಿ