ಮುಂಡಗೋಡ: ದಿನಾಂಕ 17-07-2026 ರಂದು ಮುಂಡಗೋಡ ವಲಯದ ಇಂದೂರ ಶಾಖೆಯ ನಂದಿಕಟ್ಟ ಗಸ್ತಿನಲ್ಲಿ ನಡೆದ ಜಿಂಕೆ ಮಾಂಸದ ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲೆಗೆ ಪರಾರಿ ಆಗಿದ್ದ ಮುಖ್ಯ ಆರೋಪಿ ವಸಂತ ಕೊರವರ್ ಸಾ ॥ ಗಾಂಧಿನಗರ ಮುಂಡಗೋಡ ಈತನು ಶಿವಮೊಗ್ಗ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ತಲೆ ಮರೇಸಿಕೊಂಡಿದ್ದ ಈತನನ್ನು ಕೊನೆಗೂ ಅರಣ್ಯಾಧಿಕಾರಿಗಳು ಖಚಿತ ಮಾಹಿತಿ, ಹಾಗೂ ಹಗಲು ರಾತ್ರಿ ಆರೋಪಿಯ ಚಲನವಲನವನ್ನು ಗಮನಿಸಿ, ಸಂಘಟಿತ ಕಾರ್ಯಾಚರಣೆಯ ಮೂಲಕ ದಿನಾಂಕ 19-07-2026 ರಂದು ಶಿವಮೊಗ್ಗ ಜಿಲ್ಲೆಯಲ್ಲಿ ತಲೆ ಮರೆಸಿಕೊಂಡಿದ್ದ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಂಗ ಪ್ರಕ್ರಿಯೆಗೆ ಒಳಪಡಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಡಿಸಿಎಫ್ ಶ್ರೀ ಅಜೀಜ್ ಶೇಕ್ ಮತ್ತು ಎಸಿಎಫ್ ಶ್ರೀ ಈರೇಶ್ ಕಬ್ಬಿನ ಇವರ ಮಾರ್ಗದರ್ಶನಲ್ಲಿ ಹಾಗೂ ಮುಂಡಗೋಡ ವಲಯ ಅರಣ್ಯಾಧಿಕಾರಿಗಳಾದ ಶ್ರೀ ಅಪ್ಪಾರಾವ್ ಕಲಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿ. ಆರ್. ಎಫ್.ಒ ಗಳಾದ ಕು. ಸುನೀತಾ ಬಿ. ಎಂ, ರಾಕೇಶ ಆನವೇರಿ, ಅರ್ಜುನ್ ಮೊರಬ , ಗಸ್ತು ಅರಣ್ಯ ಪಾಲಕರುಗಳಾದ ಅಮಿತ ಸಣ್ಣಕ್ಕಿ, ಹೇಮಾ,ಮುಸ್ತಾಕ ಅಲಿ, ಮರ್ದಾನ ಅಲಿ, ಸಂತೋಷ್ , ರಾಘವೇಂದ್ರ, ಶಿವಾನಂದ, ಇನ್ನು ಮುಂತಾದ ಸಿಬ್ಬಂದಿಗಳು ಭಾಗವಹಿಸಿದ್ದರು..
ವರದಿಗಾರರು: ಬಸಯ್ಯ ತೋಟಯ್ಯನವರ
