Thursday, May 28, 2026
Homeಜಿಲ್ಲಾ ಸುದ್ದಿಗಳುಉತ್ತರ ಕನ್ನಡಕರುನಾಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನ ಬಳಗ ಬೆಂಗಳೂರ ಇವರು ಹಾವೇರಿಯಲ್ಲಿ ಹಮ್ಮಿಕೊಂಡಿದ್ದ 2ನೇ ರಾಜ್ಯಮಟ್ಟದ...

ಕರುನಾಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನ ಬಳಗ ಬೆಂಗಳೂರ ಇವರು ಹಾವೇರಿಯಲ್ಲಿ ಹಮ್ಮಿಕೊಂಡಿದ್ದ 2ನೇ ರಾಜ್ಯಮಟ್ಟದ ಸಮ್ಮೇಳದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಒಟ್ಟು 56 ಸಾಧಕರಿಗೆ ಸನ್ಮಾನಿಸಿ ಗೌರವಿಸಿ ರಾಜ್ಯಮಟ್ಟದ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ಉತ್ತರ ಕನ್ನಡ: ಮುಂಡಗೋಡ : ಕರುನಾಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನ ಬಳಗ ಬೆಂಗಳೂರವರು ಇವರಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮ ಸೋಮವಾರ ಹಾವೇರಿಯಲ್ಲಿ ೨ನೇ ರಾಜ್ಯಮಟ್ಟದ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಒಟ್ಟು ೫೬ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಿ ರಾಜ್ಯಮಟ್ಟದ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಉತ್ತರಕನ್ನಡ ಜಿಲ್ಲೆಯ ಒಟ್ಟು ೫ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪಡೆದವರಲ್ಲಿ ೪ ಜನರು ಶಿಕ್ಷಣ ಇಲಾಖೆಯಲ್ಲಿ ಸೇವೆ ಮಾಡುತ್ತಿರುವ ಸರ್ಕಾರಿ ಜ್ಯೂನಿಯರ ಕಾಲೇಜ್‌ ಪ್ರಾಂಶುಪಾಲ ಜಿ.ಡಿ.ಕಡೇಮನಿ, ಬಿಇಒ ಕಚೇರಿಯ ಶಿಕ್ಷಣ ಸಂಯೋಜಕ ಪಾಂಡುರಂಗ ಟಿಕ್ಕೋಜಿ, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಾಲಚಂದ್ರ ಹೆಗಡೆ ಹಾಗೂ ಶಿರಸಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಗಣೇಶ ಭಟ್ಟ ಪ್ರಶಸ್ತಿ ಪಡೆದವರಾಗಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಸಾಗರ ಸಾಮ್ರಾಟ ಪತ್ರಿಕಾ ವರದಿಗಾರ ನಜೀರುದ್ದಿನ ತಾಡಪತ್ರಿ ಯವರಿಗೆ ಪತ್ರಿಕಾ ರಂಗದಲ್ಲಿ ಮಾಡಿದ ಸಾಧನೆಗೆ ಸಮ್ಮೇಳನದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯಮಟ್ಟದ ೨ನೇ ಕರುನಾಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನದಲ್ಲಿ ನಜೀರುದ್ದಿನ ತಾಡಪತ್ರಿ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ಪತ್ರಕರ್ತರು ಎಂದು ರಾಜ್ಯಾಧ್ಯಕ್ಷ ಎಸ್‌.ಡಿ. ಮುಡೇಣ್ಣವರ ತಿಳಿಸಿದ್ದಾರೆ.

ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ನಜೀರುದ್ದಿನ ತಾಡಪತ್ರಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿವರುವುದು ಜಿಲ್ಲೆಗೆ ಹಾಗೂ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಡಿ.ಎಸ್‌.ಎಸ್‌ ರಾಜ್ಯ ಸಂಚಾಲಕ ಎಸ್‌. ಫಕ್ಕಿರಪ್ಪ ತಿಳಿಸಿದ್ದಾರೆ

ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ ಕರುನಾಡ ಸಾಹಿತ್ಯ ಮತ್ತು; ಸಾಂಸ್ಕೃತಿ ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಸ್‌.ಡಿ.ಮುಡೆಣ್ಣವರ, ಬ್ಯಾಡಗಿ ಕ್ಷೇತ್ರದ ಮಾಜಿ ಶಾಸಕ ಶಿವರಾಜ ಸಜ್ಜನ, ಸಾಹಿತಿ ಸತೀಶ ಕುಲಕರ್ಣಿ, ಡಿಎಸ್‌ಎಸ್‌ ರಾಜ್ಯ ಸಂಚಾಲಕ ಹಾಗೂ ಮುಂಡಗೋಡ ತಾಲೂಕಾ ನಿಕಟಪೂರ್ವ ಕಸಾಪ ಸಮ್ಮೇಳನಾಧ್ಯಕ್ಷ ಎಸ್‌.ಫಕ್ಕಿ;ರಪ್ಪ, ಪ್ರಿಕಾಂಕ ನಡುವಿನಮನಿ, ಸರಸ್ವತಿ ಬೊಮ್ಮನಾಳ, ಡಾ.ಶೆಲ್ವಿ, ಕುಮಾರ ತಳವಾರ ಸೇರಿದಂತೆ ತಾಲೂಕಿನ ಕಸಾಪ ಅಧ್ಯಕ್ಷರು ವಸಂತ ಕೊಣಸಾಲಿ, ಡಾ.ಪಿ.ಪಿ.ಛಬ್ಬಿ ಎಸ್‌.ಕೆ.ಬೋರ್ಕರ, ಗೌರಮ್ಮಾ ಕೊಳ್ಳಾನವರ, ಎಮ್‌.ಎಚ್‌.ಕಲಾಲ್‌ ಸೇರಿದಂತೆ ಇಂದೂರ ಪ್ರೌಢಶಾಲಾ ಶಿಕ್ಷಕ ಕೃಷ್ಣ ಗುಜಮಾಗಡಿ, ಡಿಎಸ್‌ಎಸ್‌ ಸಂಘಟನೆಯ ಲಕ್ಷ್ಮಣ ವಾಯ್‌.ಬಿ. ಮುಂತಾದವರು ಇದ್ದರು.

ವರದಿಗಾರರು: ಬಸಯ್ಯ ತೋಟಯ್ಯನವರ

ಹೆಚ್ಚಿನ ಸುದ್ದಿ