Saturday, July 4, 2026
Homeಜಿಲ್ಲಾ ಸುದ್ದಿಗಳುಉತ್ತರ ಕನ್ನಡಬೆಳೆ ವಿಮೆ: ಅರ್ಜಿ ಆಹ್ವಾನ ಮತ್ತು ಬೆಳೆ ಸಾಲ ಪಡೆಯುವ ಹಾಗೂ ಪಡೆಯದ ರೈತರು ವಿಮಾ...

ಬೆಳೆ ವಿಮೆ: ಅರ್ಜಿ ಆಹ್ವಾನ ಮತ್ತು ಬೆಳೆ ಸಾಲ ಪಡೆಯುವ ಹಾಗೂ ಪಡೆಯದ ರೈತರು ವಿಮಾ ಕಂತು ಪಾವತಿ ಮಾಡಲು ಜುಲೈ 31 ಅಂತಿಮ ದಿನ…

ಮುಂಡಗೋಡ: ಬೆಳೆ ಸಾಲ ಪಡೆಯುವ ಹಾಗೂ ಪಡೆಯದ ರೈತರು ವಿಮಾ ಕಂತು ಪಾವತಿ ಮಾಡಲು ಜುಲೈ 31 ಅಂತಿಮ ದಿನವಾಗಿರುತ್ತದೆ. ಮುಂಡಗೋಡ ತಾಲೂಕಿನಲ್ಲಿ ಮಾವು ಶುಂಠಿ ಅಡಿಕೆ ಬೆಳೆ ವಿಮೆಗೆ ಅರ್ಹವಾಗಿರುತ್ತವೆ.

ವಿಮಾ ಚಂದಾದಾರರಾಗಲು ಎಫ್ ಐ ಡಿ ಕಡ್ಡಾಯವಾಗಿರುತ್ತದೆ. ನಿಗದಿತ ಅರ್ಜಿ ನಮೂನೆ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಬೆಳೆ ನಮೂದಿರುವ ಪಹಣಿ ಪತ್ರಿಕೆ, ಸ್ವಯಂ ದೃಢೀಕರಣ, ನಾಮಿನಿ ವಿವರ ಹಾಗೂ ಆಧಾರ ಕಾರ್ಡ್ ಪ್ರತಿಯೊಂದಿಗೆ ಹತ್ತಿರದ ಸೇವಕೇಂದ್ರಗಳನ್ನು ನಿಗದಿತ ದಿನಾಂಕ ದೊಳಗೆ ಸಂಪರ್ಕಿಸಲು ತೋಟಗಾರಿಕೆ ಇಲಾಖೆಯ ಸಹಾಯಕ ಉಪ ನಿರ್ದೇಶಕರು ಪ್ರಕಟಣೆಯಲ್ಲಿ  ತಿಳಿಸಿರುತ್ತಾರೆ.

ವರದಿಗಾರರು:ಬಸಯ್ಯ ತೋಟಯ್ಯನವರ

ಹೆಚ್ಚಿನ ಸುದ್ದಿ