ಜಿಲ್ಲಾ ಜನ ಜಾಗೃತಿ ವೇದಿಕೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್(ರಿ) ದಾರವಾಡ ಜಿಲ್ಲೆಯ ಸಹಯೋಗದಲ್ಲಿ ದಿ. 6 ರ ಮಂಗಳವಾರದಂದು ಹುಬ್ಬಳ್ಳಿ ವಿದ್ಯಾನಗರದಲ್ಲಿನ ಮರಾಠಾ ಭವನದಲ್ಲಿ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ಗಾಂಧೀಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಜರುಗಲಿದೆ.
ತನ್ನಿಮಿತ್ತ ಅಂದು ಬೆಳಿಗ್ಗೆ 10.00 ಘಂಟೆಗೆ ಹುಬ್ಬಳ್ಳಿ ಕಿಮ್ಸ್ ಪ್ರಧಾನ ದ್ವಾರದ ಎದುರಿನ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಜಿಲ್ಲಾ ಮಟ್ಟದ ಬೃಹತ್ ಜನ ಜಾಗೃತಿ ಜಾಥಾಕ್ಕೆ ಜನ ಜಾಗ್ರತಿ ವೇದಿಕೆಯ ನಿಕಟಪೂರ್ವ ರಾಜ್ಯ ಸಂಘಟನಾ ಅಧ್ಯಕ್ಷ ರಾಜಣ್ಣ ಕೊರವಿ ಚಾಲನೆ ನೀಡುವರು. ಜಾಥಾ ಗುರುದತ್ತ ಭವನದ ಎದುರಿನ ಶ್ರೀ ಭಾರತಿ ಮಠ ಕಲ್ಯಾಣ ಮಂಟಪ ತಲುಪಿದ ನಂತರ 11 ಘಂಟೆಗೆ ಮರಾಠಾ ಭವನದಲ್ಲಿ ಸಭಾ ಕಾರ್ಯಕ್ರಮ ನೆರವೇರಲಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಣಕವಾಡ ಅನ್ನದಾನೇಶ್ವರ ಮಠದ ಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಶಾಸಕ ಮಹೇಶ ತೆಂಗಿನಕಾಯಿ ಉದ್ಘಾಟಿಸಲಿದ್ದು, ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ವಸಂತ ಅರ್ಕಾಚಾರಿ ಅಧ್ಯಕ್ಷತೆ ವಹಿಸಲಿರುವರು.
ಮುಖ್ಯ ಅತಿಥಿಗಳಾಗಿ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ದಯಾಶೀಲ, ಪೊಲೀಸ್ ಆಯುಕ್ತ ಬೊರಸೆ ಭೂಷಣ ಗುಲಾಬರಾವ್, ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ್ ಘಾಳಿ ಪಾಲ್ಗೊಳ್ಳಲಿದ್ದು ಪ್ರೊ. ಕೆ.ಎಸ್.ಕೌಜಲಗಿ ದಿಕ್ಸೂಚಿ ಮಾತುಗಳನ್ನು ಆಡಲಿದ್ದಾರೆ ಎಂದು ಜಿಲ್ಲಾ ನಿರ್ದೇಶಕ ಹನುಮಂತ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
