Monday, October 5, 2026
Homeಕ್ರೀಡೆಚಿನ್ನ ಗೆದ್ದ ಕ್ಷಣದಲ್ಲಿ ಒಂದೇ ಒಂದು ಅಭಿನಂದನೆಯ ಕರೆ ಇಲ್ಲ! 23 ವರ್ಷ ಕರ್ನಾಟಕ ಪ್ರತಿನಿಧಿಸಿದ...

ಚಿನ್ನ ಗೆದ್ದ ಕ್ಷಣದಲ್ಲಿ ಒಂದೇ ಒಂದು ಅಭಿನಂದನೆಯ ಕರೆ ಇಲ್ಲ! 23 ವರ್ಷ ಕರ್ನಾಟಕ ಪ್ರತಿನಿಧಿಸಿದ ಪೂವಮ್ಮ ಕಣ್ಣಲ್ಲಿ ನೋವು

ಮಂಗಳೂರು: ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಹಾಗೂ ಕರ್ನಾಟಕಕ್ಕೆ ಹೆಮ್ಮೆ ತಂದಿರುವ ಅಥ್ಲೀಟ್ ಎಂ.ಆರ್. ಪೂವಮ್ಮ, ಗೆಲುವಿನ ಕ್ಷಣದಲ್ಲಿ ರಾಜ್ಯ ಸರ್ಕಾರದಿಂದ ನಿರೀಕ್ಷಿತ ಗೌರವ ಮತ್ತು ಅಭಿನಂದನೆ ಸಿಗಲಿಲ್ಲ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಕಳೆದ 23 ವರ್ಷಗಳಿಂದ ಕರ್ನಾಟಕವನ್ನು ಪ್ರತಿನಿಧಿಸಿ ದೇಶಕ್ಕಾಗಿ ಹಲವು ಪ್ರಮುಖ ಸ್ಪರ್ಧೆಗಳಲ್ಲಿ ಪದಕ ಗೆದ್ದಿದ್ದರೂ, ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ತಕ್ಷಣ ರಾಜ್ಯದ ಮುಖ್ಯಮಂತ್ರಿಗಳು ಅಥವಾ ಕ್ರೀಡಾ ಸಚಿವರಿಂದ ಅಭಿನಂದನೆಯ ಕರೆ ಬರಲಿಲ್ಲ ಎಂದು ಪೂವಮ್ಮ ಹೇಳಿದ್ದಾರೆ.

ಇತರ ರಾಜ್ಯಗಳ ಕ್ರೀಡಾಪಟುಗಳು ಪದಕ ಗೆದ್ದ ಕೂಡಲೇ ಅವರ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕ್ರೀಡಾ ಸಚಿವರು ಕರೆ ಮಾಡಿ ಅಭಿನಂದಿಸುತ್ತಿದ್ದರು. ಈ ವೇಳೆ ಅಲ್ಲಿದ್ದ ಇತರ ಕ್ರೀಡಾಪಟುಗಳು “ನಿಮ್ಮ ರಾಜ್ಯದಿಂದ ಯಾರು ಕರೆ ಮಾಡಿದರು?” ಎಂದು ಕೇಳಿದಾಗ ತಮಗೆ ಉತ್ತರಿಸಲಾಗದೆ ತೀವ್ರ ನಿರಾಶೆಯಾಯಿತು ಎಂದು ಅವರು ತಿಳಿಸಿದ್ದಾರೆ.

ಭಾರತಕ್ಕೆ ಮರಳಿದ ಬಳಿಕ ನಿನ್ನೆ ಸಿಎಂ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೇರಿದಂತೆ ಹಲವು ಗಣ್ಯರು ಕರೆ ಮಾಡಿ ಮಾತನಾಡಿದ್ದಾರೆ ಎಂದು ಎಂ.ಆರ್. ಪೂವಮ್ಮ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಹೆಚ್ಚಿನ ಸುದ್ದಿ