ಶಿಗ್ಗಾಂವಿ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ 2025-26ನೇ ಸಾಲಿನ ಸಾಕ್ಷ್ಯಚಿತ್ರ ನಿರ್ಮಾಣದ ನಿರ್ದೇಶಕರಾಗಿ ತಾಲೂಕಿನ ಕುನ್ನೂರ ಗ್ರಾಮದ ಶಿವಾನಂದ ದೊಡ್ಡಮನಿ ಆಯ್ಕೆ ಆಗಿದ್ದಾರೆ.
ಇಲಾಖೆಯು ಎಸ್.ಸಿ, ಎಸ್.ಟಿ, ಟಿಎಸ್‌ಪಿ ವಿಶೇಷ ಘಟಕ ವತಿಯಿಂದ ವಿವಿಧ ವಿಷಯಗಳ ಕುರಿತು ಸಾಕ್ಷ್ಯಚಿತ್ರ ನಿರ್ಮಿಸಲು ಅರ್ಜಿ ಆಹ್ವಾನಿಸಲಾಗಿತ್ತು.
ಪರಿಣಿತ ತಾಂತ್ರಿಕ ಮೌಲ್ಯಮಾಪನ ಸಮಿತಿಯಲ್ಲಿ ಶಿವಾನಂದ ದೊಡ್ಡಮನಿ ಅವರು ಆಯ್ಕೆಯಾಗಿರುವ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಛಾಯಾ ಮತ್ತು ಚಲನಚಿತ್ರ ಶಾಖೆ ಜಂಟಿ ನಿರ್ದೇಶಕರಾದ ಮಂಜುನಾಥ ಡೊಳ್ಳಿನ್ ಅವರು ಕಾರ್ಯಾದೇಶ ನೀಡಿದ್ದಾರೆ.
ಈ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ರಾಜ್ಯದ ಕಲೆ, ಸಂಸ್ಕೃತಿ, ಜನಪದ ಕಲೆ, ವಿಶಿಷ್ಟ ಸಾಧನೆ ಮಾಡಿದ ಪರಿಶಿಷ್ಟ ಜಾತಿ ವ್ಯಕ್ತಿಗಳು, ಸಾಧಕರ ಜನರಿಗಾಗಿ ಸರ್ಕಾರ ರೂಪಿಸಿರುವ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಸಾಕ್ಷ್ಯ ಚಿತ್ರವನ್ನು ನಿರ್ದೇಶಿಸುವ ಮತ್ತು ನಿರ್ಮಿಸುವ ಜವಾಬ್ದಾರಿ ಈಗ ಇವರ ಮೇಲೆ ಇದೆ..
ಶಿವಾನಂದ ದೊಡ್ಡಮನಿ ಅವರ ನಿರ್ದೇಶನದ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ.ವೆಂಕನಗೌಡ ಪಾಟೀಲ ಅವರು ಮಾರ್ಗದರ್ಶನ ನೀಡುತ್ತಿದ್ದಾರೆ.
ಗ್ರಾಮೀಣ ಭಾಗದ ಪ್ರತಿಭೆಯೊಬ್ಬರು ರಾಜ್ಯ ಮಟ್ಟದ ಈ ಜವಾಬ್ದಾರಿಗೆ ಆಯ್ಕೆಯಾಗಿರುವುದು ಹೆಮ್ಮೆ ತಂದಿದೆ.
ಸಂಪಾದಕರು: ರಾಮಚಂದ್ರ ಪೂಜೇರ
