ಮುಂಡಗೋಡ: ದಿನಾಂಕ : 5-6-2026 ರಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಪಾಳದಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಕಾತುರ ವಲಯದ ಅರಣ್ಯ ಇಲಾಖೆ ವತಿಯಿಂದ ಶಾಲೆಯ ಆವರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು, ಮುಂಡಗೋಡ ತಾಲೂಕ BEO ಅಧಿಕಾರಿಗಳು ರವರು,ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಹಾಗೂ SDMC ಕಮಿಟಿಯ ಅಧ್ಯಕ್ಷರು ವ ಸದಸ್ಯರು, ಊರಿನ ಮುಖಂಡರು ಸೇರಿಕೊಂಡು ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಂಡಗೋಡ ತಾಲೂಕಿನ BEO ಅಧಿಕಾರಿಗಳಾದ ಶ್ರೀಮತಿ ಸುಮಾಜಿ ರವರು ಪರಿಸರ ದಿನಾಚರಣೆಯ ಕುರಿತು ಕೆಲವು ಹಿತ ನುಡಿಗಳನ್ನು ಹೇಳುವ ಮೂಲಕ ಮಕ್ಕಳು ಮತ್ತು ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರು.
ನಂತರ ಅಲ್ಲಿಂದ ಸರ್ಕಾರಿ ಉರ್ದು ಪ್ರೌಢ ಶಾಲೆ ಪಾಳ ದಲ್ಲಿ ಶಾಲಾ ಶಿಕ್ಷಕ ವೃಂದ ಮತ್ತು SDMC ಕಮಿಟಿಯವರು, ವಿದ್ಯಾರ್ಥಿ ಗಳೊಂದಿಗೆ ಸೇರಿ ಶಾಲಾ ಆವರಣದಲ್ಲಿ ಸಸಿ ನೆಟ್ಟು ಪರಿಸರ ದಿನಾಚರಣೆ ಆಚರಿಸಲಾಯಿತು. ಅಲ್ಲಿಂದ ಮಹಾತ್ಮಾಜಿ ಪ್ರೌಢ ಶಾಲೆ ಪಾಳದಲ್ಲಿ ಸಸಿಗಳನ್ನು ನೆಟ್ಟು ಕಾರ್ಯಕ್ರಮ ಮಾಡಲಾಯಿತು.
ಹಾಗೂ ಸರಕಾರಿ ಮಾದರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಆವರಣದಲ್ಲಿಯೂ ಸಹ ಶಿಕ್ಷಣ ಇಲಾಖೆಯ BEO ಅಧಿಕಾರಿಗಳ ಸಮ್ಮುಖದಲ್ಲಿ ಶಾಲಾ ಮಕ್ಕಳು, ಶಿಕ್ಷಕರು, ಅರಣ್ಯ ಇಲಾಖೆಯ ಸಿಬ್ಬಂದಿ ಯವರಾದ ಪಾಳಾ ಉಪ ವಲಯ ಅರಣ್ಯಾಧಿಕಾರಿ ಶ್ರೀ ಸುನೀಲ್ ಹೊನ್ನಾವರ, ಗಸ್ತು ವನಪಾಲಕ ರಾದ ಜಯವಂತ ಬೋವಿ, ಅರಣ್ಯ ವೀಕ್ಷಕ ರಾದ ನಾರಾಯಣ್, ಬಸವರಾಜ್, ಪ್ರಕಾಶ್, ವಿರೇಶ್, ಜಗದೀಶ್ ಗೌಡ ಹಾಗೂ ಊರ ನಾಗರೀಕರೊಂದಿಗೆ ಸೇರಿ ಸಸಿ ನೆಟ್ಟು ಪರಿಸರ ದಿನಾಚರಣೆ ಆಚರಿಸಲಾಯಿತು..
ಈ ಕಾರ್ಯಕ್ರಮ ದಲ್ಲಿ BEO ಅಧಿಕಾರಿಗಳು ಅರಣ್ಯ ಇಲಾಖೆಯ ಕುರಿತು ಕೆಲವು ಮೆಚ್ಚುಗೆಯ ಮಾತುಗಳನ್ನಾಡಿ ಶಾಲಾ ಮಕ್ಕಳಿಗೆ ಪರಿಸರ ಜಾಗೃತಿಯ ಕುರಿತು ಹಿತನುಡಿಗಳನ್ನಾಡಿ ಅರಿವು ಮೂಡಿಸಿದರು..
[ ಕಾಡನ್ನು ಬೆಳೆಸಿ ನಾಡನ್ನು ಉಳಿಸಿ ]
ವರದಿಗಾರರು: ಬಸಯ್ಯ ತೋಟಯ್ಯನವರ
