ಲೇಖಕರು - ಭಾಸ್ಕರ ಮುದೇನೂರು ನ್ಯಾಯವಾದಿಗಳು ಹಾಗೂ
ರಾಜ್ಯಾಧ್ಯಕ್ಷರು, ಅನುಚ್ಛೇದ 171(3) ತಿದ್ದುಪಡಿ ಹೋರಾಟ ಸಮಿತಿ- ಕರ್ನಾಟಕ.
ಒಂದಾನೊಂದು ಕಾಲದಲ್ಲಿ ‘ಚಿಂತಕರ ಛಾವಡಿ’ ಯಾಗಿದ್ದ ವಿಧಾನ ಪರಿಷತ್ತು, ಇಂದು ಕೇವಲ ‘ರಾಜಕೀಯ ನಿರಾಶ್ರಿತರ ಶಿಬಿರ’ವಾಗಿ ಬದಲಾಗಿದೆಯೇ? ಎಂಬ ಪ್ರಶ್ನೆ ಕಾಡುತ್ತಿದೆ. ನಮ್ಮದು ಪ್ರಜೆಗಳಿಂದ, ಪ್ರಜೆಗಳಿಗಾಗಿ ಇರುವ ವ್ಯವಸ್ಥೆ. ಆದರೆ, ಜನಪ್ರತಿನಿಧಿಗಳೇ (MLAs) ತಮ್ಮ ಪರವಾಗಿ ಮತ್ತೊಬ್ಬ ಪ್ರತಿನಿಧಿಯನ್ನು ಮೇಲ್ಮನೆಗೆ ಆರಿಸುವುದಾದರೆ, ಅಲ್ಲಿ ಸಾಮಾನ್ಯ ಪ್ರಜೆಯ ಧ್ವನಿ ಎಲ್ಲಿದೆ?
ನಮ್ಮ ಹೋರಾಟ ಮತ್ತು ಪ್ರಶ್ನೆಗಳು:
ಯಾರಿಗೆ ಬೇಕಿದೆ ಈ ವ್ಯವಸ್ಥೆ?: ಶಾಸಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಪ್ರತಿನಿಧಿಗಳನ್ನು ಆರಿಸುವುದಾದರೆ, ಅಲ್ಲಿ ಜನಸಾಮಾನ್ಯರ ಸಮಸ್ಯೆಗಳ ಚರ್ಚೆ ಸಾಧ್ಯವೇ?
ದೂರ ಉಳಿದಿರುವ ಬಹುಸಂಖ್ಯಾತ ವರ್ಗಗಳು: ವಯೋಮಿತಿ ಮೀರುತ್ತಿರುವ ಪದವೀಧರರು, ನೇಮಕಾತಿ ನಿರೀಕ್ಷೆಯಲ್ಲಿರುವ ಪ್ರಶಿಕ್ಷಣಾರ್ಥಿಗಳು ಮತ್ತು ಅತಿಥಿ ಉಪನ್ಯಾಸಕರು ಇಂದಿಗೂ ಚುನಾವಣಾ ಪ್ರಕ್ರಿಯೆಯಿಂದ ಹೊರಗಿದ್ದಾರೆ!
ತಜ್ಞರ ಕೊರತೆ: ಅನುಚ್ಛೇದ 171(3)(a) ಮತ್ತು (d) ಅಡಿಯಲ್ಲಿ ಆಯ್ಕೆಯಾಗುವವರಲ್ಲಿ ಎಷ್ಟು ಜನ ಸಂಶೋಧಕರು ಅಥವಾ ವಿಷಯ ತಜ್ಞರಿದ್ದಾರೆ? ಅಧಿಕಾರ ವಂಚಿತ ರಾಜಕಾರಣಿಗಳೇ ಇಲ್ಲಿ ಹೆಚ್ಚಾಗಿ ಕಾಣಿಸುತ್ತಿಲ್ಲವೇ?
”ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಪರವಾಗಿ ಪ್ರತಿನಿಧಿಗಳು ಇರಬೇಕೇ ಹೊರತು, ಪ್ರತಿನಿಧಿಗಳ ಪರವಾಗಿ ಪ್ರತಿನಿಧಿಗಳಲ್ಲ!”
ನಮ್ಮ ಆಗ್ರಹ:
ಸಂವಿಧಾನದ ಅನುಚ್ಛೇದ 171(3) ತಕ್ಷಣವೇ ತಿದ್ದುಪಡಿಯಾಗಬೇಕು. ರೈತರು, ವೈದ್ಯರು, ನ್ಯಾಯವಾದಿಗಳು ಮತ್ತು ನಿರುದ್ಯೋಗಿ ಪದವೀಧರರ ಧ್ವನಿ ವಿಧಾನ ಪರಿಷತ್ತಿನಲ್ಲಿ ಕೇಳಿಸುವಂತಾಗಬೇಕು.
ಯೋಚಿಸಿ, ಈ ಬದಲಾವಣೆಯ ಹೋರಾಟಕ್ಕೆ ಕೈಜೋಡಿಸಿರಿ.
