ಚನ್ನಮ್ಮನ ಕಿತ್ತೂರು: ಕರ್ನಾಟಕ ಸರ್ಕಾರ ಕಳೆದ ಮೂರು ತಿಂಗಳಿಂದ ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ವಿಧವಾ ವೇತನ, ಜಮಾ ಆಗಿಲ್ಲ ಸರ್ಕಾರದ ಈ ವಿಳಂಬ ಧೊರಣೆ ಖಂಡಿಸಿ ಬುಧವಾರ ಮುಂಜಾನೆ 10 ಘಂಟೆಗೆ ತಹಶೀಲ್ದಾರ್ ಕಚೇರಿ ಮುಂದೆ ರಾಣಿ ಚನ್ನಮ್ಮ ನವಭಾರತ ಸೇನೆಯ ರಾಜ್ಯ ಸಂಚಾಲಕರು ಏಕಾಂಗಿ ಹೋರಾಟಗಾರರು ಜಗದೀಶ ಕಡೋಲಿ ಹಾಗೂ ಬಸವರಾಜ ಭೀಮರಾಣಿ ರಾಜ್ಯ ಯುವ ಕಾರ್ಯದರ್ಶಿ ಇವರ ಸಮ್ಮುಖದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.
ಆದ ಕಾರಣ ವೃದ್ದಾಪ್ಯ ವೇತನ, ಅಂಗವಿಕಲರ ವೇತನ, ವಿಧವಾ ವೇತನ ಪಡೆಯುವ ಫಲಾನುಭವಿಗಳು, ಸಾರ್ವಜನಿಕರು ಕಿತ್ತೂರು ತಹಶೀಲ್ದಾರ್ ಕಚೇರಿಯ ಮುಂದೆ ಬುಧವಾರ ಮನವಿ ಪತ್ರ ಸಲ್ಲಿಸಿ ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ನವಭಾರತ ಸೇನೆಯ ರಾಜ್ಯ ಸಂಚಾಲಕರು ಏಕಾಂಗಿ ಹೋರಾಟಗಾರರು ಜಗದೀಶ ಕಡೋಲಿ ಹಾಗೂ ಬಸವರಾಜ ಭೀಮರಾಣಿ ರಾಜ್ಯ ಯುವ ಕಾರ್ಯದರ್ಶಿ ಇವರ ಹೇಳಿಕೆ ನೀಡಿದ್ದಾರೆ…
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
8217576162 -ಜಗದೀಶ ಕಡೋಲಿ, ರಾಣಿ ಚನ್ನಮ್ಮ ನವಭಾರತ ಸೇನೆ ರಾಜ್ಯ ಸಂಚಾಲಕರು ಏಕಾಂಗಿ ಹೋರಾಟಗಾರರು.
8867521132 -ಬಸವರಾಜ ಭೀಮರಾಣಿ, ರಾಣಿ ಚನ್ನಮ್ಮ ನವಭಾರತ ಸೇನೆಯ ರಾಜ್ಯ ಯುವ ಕಾರ್ಯದರ್ಶಿ ..
ವರದಿ: ಭರತ ಪೂಜಾರ
ಸಂಪಾದಕರು:ರಾಮಚಂದ್ರಪ್ಪ ಪೂಜೇರ
