ರಾಯಬಾಗ: ತಾಲೂಕಿನ ಹಂದಿಗುಂದ ಗ್ರಾಮದಲ್ಲಿರುವ ಶ್ರೀ ಸಿದ್ದೇಶ್ವರ ವಿದ್ಯಾವರ್ಧಕ ಸಂಘ, ಕನ್ನಡ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಆದರ್ಶ ಶಿಕ್ಷಕರು ಮುಖ್ಯೋಪಾಧ್ಯಾಯ ಶ್ರೀ ಗಂಗಪ್ಪ.ಕೃ. ಗಾಯಕವಾಡ ಗುರುಗಳು ನಿವೃತ್ತಿಯಾದ ಪ್ರಯುಕ್ತ ಪ್ರೌಢಶಾಲೆಯ ಎಲ್ಲ ವಿದ್ಯಾರ್ಥಿಗಳು ಸೇರಿಕೊಂಡು ಜುಲೈ 12ರಂದು ರವಿವಾರ ಮುಂಜಾನೆ 10ಗಂಟೆಗೆ ಶ್ರೀ ಸಿದ್ದೇಶ್ವರ ಸಾಂಸ್ಕೃತಿಕ ಭವನದಲ್ಲಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ.

ಶ್ರೀ ಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಚಿಮ್ಮಡ ವಿರಕ್ತ ಮಠದ ಪ್ರಭು ಮಹಾ ಸ್ವಾಮಿಗಳು, ಗುರುಲಿಂಗಯ್ಯ ಹಿರೇಮಠ ಸ್ವಾಮೀಜಿ ಸಾನಿಧ್ಯವಹಿಸುವರು. ನಿವೃತ್ತ ಮುಖ್ಯೋಪಾಧ್ಯಾಯರು ಎಸ್.ಎಸ್.ಕೆ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ವಿಜಯಕುಮಾರ ಮಠ, ಮಹಾಲಿಂಗಪುರ ಕೆಎಲ್‌ಇ ವಿದ್ಯಾ ಸಂಸ್ಥೆಯ ಉಪನ್ಯಾಸಕ ಶಿವಲಿಂಗ ಸಿದ್ದಾಳ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಜುಲೈ 12ರಂದು ರವಿವಾರ ಮುಂಜಾನೆ 10ಗಂಟೆಗೆ ಕನ್ನಡ ಪ್ರೌಢಶಾಲೆಯಿಂದ ಸಿದ್ದೇಶ್ವರ ಸಂಸ್ಕೃತಿಕ ಭವನದವರೆಗೆ ಗುರುಗಳನ್ನ ಬೆಳ್ಳಿಯ ರಥದ ತೆರೆದ ವಾಹನದಲ್ಲಿ ಕುಳ್ಳಿರಿಸಿಕೊಂಡು ಹಳೆಯ ವಿದ್ಯಾರ್ಥಿಗಳಿಂದ ಭವ್ಯ ಮೆರವಣಿಗೆ ಜರುಗಲಿದೆ.
11 ಜುಲೈ 1990 ರಿಂದ 30 ಜೂನ್ 2026ನೇ ಸಾಲಿನ ಎಲ್ಲಾ ಪ್ರೀತಿಯ ವಿದ್ಯಾರ್ಥಿಗಳಿಂದ ನಿವೃತ್ತ ಮುಖ್ಯೋಪಾಧ್ಯಾಯ ಜಿ.ಕೆ.ಗಾಯಕೋಡ ಗುರುಗಳಿಗೆ ಗೌರವ ಪೂರ್ವಕ ಪುಷ್ಪ ನಮನ ಮಾಡುತ್ತ ವಿವಿಧ ವಾದ್ಯ ಮೇಳದೊಂದಿಗೆ ಭವ್ಯ ಮೆರವಣಿಗೆ ನಡೆಯುವುದು. ಸತತ 33 ವರ್ಷಗಳ ಕಾಲ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಗುರುಗಳಿಗೆ ಎಲ್ಲಾ ಸಾಲಿನ/ಬ್ಯಾಚಿನ ವಿದ್ಯಾರ್ಥಿಗಳು ಗುರುಗಳನ್ನ ಗೌರವಿಸಿ ಅಭಿನಂದಿಸಲಿದ್ದಾರೆ
ನಂತರ ಸಿದ್ದೇಶ್ವರ ದಾಸೋಹ ನಿಲಯದಲ್ಲಿ ಅನ್ನ ಸಂತರ್ಪಣೆ ನೆರವೇರುವುದು ಎಂದು ಹಿರಿಯ ಶಿಕ್ಷಕ ಬಿ.ಎಸ್.ಕರಾಳೆ, ಟಿ.ಜಿ. ದಾಸಪ್ಪನವರ ಪ್ರಕಟಿನಲ್ಲಿ ತಿಳಿಸಿದ್ದಾರೆ.
ವರದಿಗಾರರು : ಹನಮಂತ ಬಿರಾದಾರ ಪಾಟೀಲ
