Tuesday, August 11, 2026
Homeಅಪಘಾತಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ಧಾರವಾಡಕ್ಕೆ ಬಂದಿದ್ದ ಯುವಕ ಹೃದಯಾಘಾತಕ್ಕೆ ಬಲಿ...

ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ಧಾರವಾಡಕ್ಕೆ ಬಂದಿದ್ದ ಯುವಕ ಹೃದಯಾಘಾತಕ್ಕೆ ಬಲಿ…

ಧಾರವಾಡ: ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗಾಗಿ ಧಾರವಾಡಕ್ಕೆ ಬಂದಿದ್ದ ಯುವಕನೋರ್ವ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.
ಯಾದಗಿರಿ ಜಿಲ್ಲೆಯ ಸುರಪುರದ ಮೂಲದ ಮಾರುತಿ (25) ಎಂಬ ಯುವಕನೇ ಹೃದಯಾಘಾತಕ್ಕೆ ಬಲಿಯಾದ ಯುವಕ.


ಸ್ಪರ್ಧಾತ್ಮಕ ಪರೀಕ್ಷೆ ಕುರಿತು ತರಬೇತಿ ಪಡೆಯಲು ಮಾರುತಿ ಧಾರವಾಡಕ್ಕೆ ಬಂದಿದ್ದ. ಕಳೆದ ಮೂರು ವರ್ಷದಿಂದ ಧಾರವಾಡದಲ್ಲೇ ಇದ್ದು ತರಬೇತಿ ಪಡೆಯುತ್ತಿದ್ದ. ಧಾರವಾಡದಲ್ಲೇ ರೂಮ್ ಮಾಡಿಕೊಂಡು ವಾಸವಿದ್ದ ಮಾರುತಿಗೆ ಮಂಗಳವಾರ ರಾತ್ರಿ ರೂಮ್‌ನಲ್ಲೇ ಹೃದಯಾಘಾತವಾಗಿದೆ.ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವರದಿಗಾರರು : ಹನಮಂತ ಬಿರಾದಾರಪಾಟೀಲ

ಹೆಚ್ಚಿನ ಸುದ್ದಿ