ಕಲಬುರಗಿ: ನಗರದ ನಿವಾಸಿ, ಜೈನ ಸಮಾಜದ ವಿನಯಕುಮಾರ್ ಮೆಹ್ತಾ (58) ಅವರು ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಗುರುವಾರ ನಿಧನರಾದರು.
ಅವರಿಗೆ ಪತ್ನಿ, ಪುತ್ರ, ಹಿರಿಯ ಸಹೋದರ, ಎಚ್‌ಕೆಇ ಸೊಸೈಟಿ ಸದಸ್ಯ ವಜ್ರಕುಮಾರ್ ಮೆಹ್ತಾ ಇದ್ದಾರೆ.
ಹಲವು ದಿನಗಳಿಂದ ಕ್ಷಯ ರೋಗದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೇ ನಿಧನರಾದರು. ಮೆಹ್ತಾ ಅವರು ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ದಾನ, ಧರ್ಮ ಮಾಡುವುದರಲ್ಲಿ ಹೆಸರಾಗಿದ್ದ ಮೆಹ್ತಾ ಅವರು ಬಡ ಕುಟುಂಬದ ಮದುವೆ, ಮತ್ತಿತರ ಕಾರ್ಯಗಳಿಗೆ ಆರ್ಥಿಕ ನೆರವು ನೀಡುತ್ತಿದ್ದರು.
ಅಂತ್ಯಕ್ರಿಯೆ ಸೇಡಂ ರಸ್ತೆಯ ಜೈನಮಂದಿರ ಸಮೀಪದ ಮನೆಯಿಂದ ಹೊರಟು ಶುಕ್ರವಾರ ಬೆಳಿಗ್ಗೆ 10ಕ್ಕೆ ಗಂಜ್ ಬಳಿ ಇರುವ ವೈಕುಂಠಧಾಮದಲ್ಲಿ ನೆರವೇರಲಿದೆ.
