ಮುಂಡಗೋಡ :ಮುಂಡಗೋಡ್ ತಾಲೂಕಿನ ಅಗಡಿಯ ಊರಿನ ಉದ್ಯಮಿಗಳು ಹಾಗೂ ಅಗಡಿಯ ಶ್ರೀ ಶಾಂತದುರ್ಗ ರೈಸ್ ಮಿಲ್ ಮಾಲೀಕರಾದ ಆರ್. ವಿ. ಪಾಳೇಕರ್ ಇಂದು ಮಂಗಳವಾರ ನಿಧನರಾಗಿದ್ದಾರೆ .
ಸ್ನೇಹಮಯ ವ್ಯಕ್ತಿತ್ವ ಹೊಂದಿದ್ದ ಆರ್. ವಿ. ಪಾಳೇಕರ್. ಅವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಾಗೂ ಸಮಾಜ ಸೇವೆಯಲ್ಲಿ ಸದಾಕಾಲ ಮುಚ್ಚುಣಿಯಲ್ಲಿರುತ್ತಿದ್ದರು.
ಆರ್ ವಿ ಪಾಳೇಕರ್ ಅವರ ನಿಧನಕ್ಕೆ ಹಲವಾರು ಗಣ್ಯರು ರಾಜಕೀಯ ಮುಖಂಡರು ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ….
ವರದಿ ಬಿ ಎಸ್ ತೋಟಯ್ಯನವರ
