ಚಿಕ್ಕೋಡಿ/ಅಥಣಿ : ಚಿಕ್ಕೋಡಿ ವಿಭಾಗ ಕೋಳಿ ಸಮಾಜ ಸಂಘ, ಚಿಕ್ಕೋಡಿ ಮತ್ತು ವ್ಯಾಸ ಮಹರ್ಷಿ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತಿವರ್ಷದಂತೆ ಈ ವರ್ಷವೂ ಕೂಡ ‘ರಾಜ್ಯ ಮಟ್ಟದ ಕೋಳಿ ಸಮಾಜದ 38 ಪರ್ಯಾಯ ಜಾತಿಗಳ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಎಸ್. ಕೆ. ಹೊಳೆಪ್ಪನವರ ಸಮುದಾಯದ ಬಾಂಧವರಿಗೆ ತಿಳಿಸಿದ್ದಾರೆ.
‘ ಚಿಕ್ಕೋಡಿ ವಿಭಾಗ ಕೋಳಿ ಸಮಾಜ ಸಂಘ, ಚಿಕ್ಕೋಡಿ ಮತ್ತು ವ್ಯಾಸ ಮಹರ್ಷಿ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಗುವುದು.
ನಮ್ಮ ಸಮುದಾಯದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಒಂದೇ ವೇದಿಕೆ ಮೇಲೆ ತಂದು ಪರಿಚಯಿಸುವುದು, ಅವರಿಗೆ ಮುಂದಿನ ಭವಿಷ್ಯಕ್ಕಾಗಿ ಅವರಿಗೆ ಅನುಭವಿ ಉಪನ್ಯಾಸಕರಿಂದ ಸಲಹೆ ನೀಡುವುದು, ಮತ್ತು ಅವರ ವಿಚಾರಗಳನ್ನು ಹಂಚಿಕೊಳ್ಳಲು ಅನುಕೂಲ ಮಾಡಿಕೊಡುವುದು, ಇದಕ್ಕಾಗಿಯೇ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರತಿವರ್ಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಇದು 6ನೇ ವರ್ಷದ ರಾಜ್ಯಮಟ್ಟದ ಪ್ರತಿಭಾವಂತ ಮಕ್ಕಳಿಗೆ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮ ಇದಾಗಿರುತ್ತದೆ , ದಿನಾಂಕ 12-07-2026 ರವಿವಾರ, ಸ್ಥಳ: ಕರ್ನಾಟ ರಾಜ್ಯ ಸರಕಾರಿ ನೌಕರರ ಭವನ ಅಥಣಿಯಲ್ಲಿ ಈ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ.
ಸ್ವವಿವರಗಳೊಂದಿಗೆ ಎರಡು ಭಾವ ಚಿತ್ರ, ಅಂಕಪಟ್ಟಿ ಮತ್ತು ಜಾತಿ ಪ್ರಮಾಣ ಪತ್ರಗಳನ್ನೊಳಗೊಂಡ ಅರ್ಜಿಯನ್ನು ಜೂನ 25 -2026 ಒಳಗೆ ಅಂಚೆಯ ಮೂಲಕ ಅಥವಾ ನೇರವಾಗಿ ಕಳುಹಿಸಬಹುದು ವಿಳಾಸ ಎಸ್. ಕೆ. ಹೊಳೆಪ್ಪನವರ ತಾಲೂಕಾ ಪಂಚಾಯತ ಕಚೇರಿ ಸಮೀಪ, ಬಸವನಗರ ಅಥಣಿ ಜಿಲ್ಲಾ ಬೆಳಗಾವಿ 591304 ಹೆಚ್ಚಿನ ಮಾಹಿತಿಗಾಗಿ ಮೋ. 9448863655, ಶ್ರೀ ಕಿಶೋರ ನಾ. ಶಿರಗೆ, ಅಧ್ಯಕ್ಷರು ವ್ಯಾಸ ಮಹರ್ಷಿ ಹಾಗೂ ನಿಜಶರಣ ಅಂಬಿಗರ ಚೌಡಯ್ಯ, ಯೋಗ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಅಥಣಿ, 9449107947 ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ…
ಕಾರ್ಯಕ್ರಮ ದಿನಾಂಕ 12-07-2026 ರವಿವಾರ, ಸ್ಥಳ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಭವನ ಅಥಣಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಅರ್ಜಿ ಕಳಿಸುವ ಕೊನೆಯ ದಿನಾಂಕ 25-06-2026
ಅರ್ಜಿ ಕಳಿಸುವ ವಿಳಾಸ
ವಿಳಾಸ ಎಸ್. ಕೆ. ಹೊಳೆಪ್ಪನವರ ತಾಲೂಕಾ ಪಂಚಾಯತ ಕಚೇರಿ ಸಮೀಪ, ಬಸವನಗರ ಅಥಣಿ ಜಿಲ್ಲಾ ಬೆಳಗಾವಿ 591304 ದೂರವಾಣಿ ಸಂಖ್ಯೆ 9448863655

ಸಂಪಾದಕರು: ರಾಮಚಂದ್ರಪ್ಪ ಪೂಜೇರ (ಚನ್ನಮ್ಮನ ಕಿತ್ತೂರು)
ವರದಿ : ಭರತ ಪೂಜಾರಿ
