Thursday, August 27, 2026
Homeಜಿಲ್ಲಾ ಸುದ್ದಿಗಳುಯಾದಗಿರಿ ಬ್ರೇಕಿಂಗ್ ನ್ಯೂಸ್: ಗುತ್ತಿಗೆದಾರನಿಗೆ ₹1.90 ಕೋಟಿ ಬಾಕಿ; ಕೋರ್ಟ್ ಅಟ್ಯಾಚ್ಮೆಂಟ್‌ ಬಳಿಕ PWD ಕಚೇರಿ...

ಯಾದಗಿರಿ ಬ್ರೇಕಿಂಗ್ ನ್ಯೂಸ್: ಗುತ್ತಿಗೆದಾರನಿಗೆ ₹1.90 ಕೋಟಿ ಬಾಕಿ; ಕೋರ್ಟ್ ಅಟ್ಯಾಚ್ಮೆಂಟ್‌ ಬಳಿಕ PWD ಕಚೇರಿ ಖಾಲಿ

ಯಾದಗಿರಿ: ಗುತ್ತಿಗೆದಾರನಿಗೆ ಪಾವತಿಸಬೇಕಿದ್ದ ಸುಮಾರು ₹1 ಕೋಟಿ 90 ಲಕ್ಷ ಮೊತ್ತವನ್ನು ನೀಡದ ಹಿನ್ನೆಲೆಯಲ್ಲಿ, ನ್ಯಾಯಾಲಯದ ಆದೇಶದ ಮೇರೆಗೆ ಯಾದಗಿರಿಯ ಲೋಕೋಪಯೋಗಿ ಇಲಾಖೆ (PWD) ಕಚೇರಿಗೆ ಕೋರ್ಟ್ ಅಟ್ಯಾಚ್ಮೆಂಟ್ ಕ್ರಮ ಕೈಗೊಳ್ಳಲಾಗಿದೆ.

ಕೋರ್ಟ್ ಅಟ್ಯಾಚ್ಮೆಂಟ್ ಹಿನ್ನೆಲೆಯಲ್ಲಿ PWD ಕಚೇರಿಯಲ್ಲಿದ್ದ ಕಚೇರಿ ಸಾಮಗ್ರಿಗಳನ್ನು ಸಿಬ್ಬಂದಿಗಳು ಹೊರಗೆ ಸ್ಥಳಾಂತರಿಸಿ, ಕಚೇರಿ ಖಾಲಿ ಮಾಡುವ ಪ್ರಕ್ರಿಯೆ ನಡೆಸುತ್ತಿರುವುದು ಕಂಡುಬಂದಿದೆ.

ಗುತ್ತಿಗೆ ಕಾಮಗಾರಿಗೆ ಸಂಬಂಧಿಸಿದ ಬಾಕಿ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ನ್ಯಾಯಾಲಯದ ಮೊರೆ ಹೋಗಿದ್ದರು ಎನ್ನಲಾಗಿದ್ದು, ನ್ಯಾಯಾಲಯದ ಆದೇಶದ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ.

ಈ ಘಟನೆ ಯಾದಗಿರಿ ಜಿಲ್ಲೆಯಲ್ಲಿ ಸಾರ್ವಜನಿಕ ಹಾಗೂ ಸರ್ಕಾರಿ ವಲಯದಲ್ಲಿ ಗಮನ ಸೆಳೆದಿದ್ದು, ಸುಮಾರು ₹1.90 ಕೋಟಿ ಬಾಕಿ ಉಳಿಯಲು ಕಾರಣವೇನು? ನ್ಯಾಯಾಲಯದ ಆದೇಶದ ಸಂಪೂರ್ಣ ವಿವರವೇನು? ಎಂಬ ಪ್ರಶ್ನೆಗಳು ಇದೀಗ ಚರ್ಚೆಗೆ ಗ್ರಾಸವಾಗಿವೆ.

ಹೆಚ್ಚಿನ ಸುದ್ದಿ