Tuesday, August 11, 2026
Homeಶಿಕ್ಷಣಜಾನಪದ ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಅಧಿಕಾರ ವಹಿಸಿಕೊಂಡ ನವೀನ ಹೆಚ್.ವಿ

ಜಾನಪದ ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಅಧಿಕಾರ ವಹಿಸಿಕೊಂಡ ನವೀನ ಹೆಚ್.ವಿ

ಶಿಗ್ಗಾಂವ: ಆಡಳಿತದಲ್ಲಿ ಸುಧೀರ್ಗವಾಗಿ ಸೇವೆ ಸಲ್ಲಿಸಿ ಅನುಭವ ಇರುವ ನವೀನ ಹೆಚ್.ವಿ ಅವರು ನಮ್ಮ ವಿಶ್ವವಿದ್ಯಾಲಯದ ಆಡಳಿತ ಕುಲಸಚಿರಾಗಿ ಅಧಿಕಾರ ವಹಿಸಿಕೊಂಡಿದ್ದು, ಅವರು ವಿಶ್ವವಿದ್ಯಾಲಯದ ಶ್ರೇಯೋಭಿದ್ಧಿ ಕೆಲಸ ಕೈಗೊಳ್ಳಲಿ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ ಎಂ ಭಾಸ್ಕರ್ ಅವರು ಹೇಳಿದರು.

ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೆಟ್ ಸಭಾಂಗಣದಲ್ಲಿ ವಿಶ್ವವಿದ್ಯಾಲಯದ ನೂತನ ಪ್ರಭಾರ ಕುಲಸಚಿವರಾಗಿ ಅಧಿಕಾರ ವಹಿಸಿಕೊಂಡ ನವೀನ ಹೆಚ್ ವಿ, ಕೆ.ಎ.ಎಸ್, ವಿಶೇಷ ಭೂ ಸ್ವಾಧೀನಾಧಿಕಾರಿ ತುಂಗಾ ಮೇಲ್ದಂಡೆ ಯೋಜನೆ ರಾಣೇಬೆನ್ನೂರ ಇವರ ಸ್ವಾಗತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೂತನವಾಗಿ ಕುಲಸಚಿವರಾಗಿ ಅಧಿಕಾರ ವಹಿಸಿಕೊಂಡ ನವೀನ ಹೆಚ್.ವಿ ಅವರು ಮಾತನಾಡಿ, ಸರ್ಕಾರ ನನಗೆ ವಿಶ್ವವಿದ್ಯಾಲಯದ ಪ್ರಗತಿಗೆ ನೀಡಿರುವ ಈ ಜವಾಬ್ದಾರಿಯನ್ನು ಶ್ರದ್ದಾಪೂರ್ವಕವಾಗಿ ನಿರ್ವಹಿಸುತ್ತೇನೆ ಎಂದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರು ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಲಯದ ನೌಕರರ ಸಂಘದ ಅಧ್ಯಕ್ಷರಾದ ಡಾ.ವೆಂಕನಗೌಡ ಪಾಟೀಲ ಅವರು ಮಾತನಾಡಿ ನವೀನ ಹೆಚ್.ವಿ ಅವರು ದಕ್ಷ ಆಡಳಿತಕ್ಕೆ ಅತ್ಯಂತ ಹೆಸರು ವಾಸಿಯಾದವರು, ಅವರು ಹಿಂದೆಲ್ಲ ಸೇವೆ ಸಲ್ಲಿಸಿರುವ ಕಡೆ ಜನಪರವಾದ ಹಾಗೂ ರೈತಪರವಾದ ದಿಟ್ಟ ಹೆಜ್ಜೆಯನ್ನಿಟ್ಟು ಸೇವೆ ಸಲ್ಲಿಸಿದ ದಕ್ಷ ಆಡಳಿತಗಾರರಾಗಿ ಸೇವೆ ಸಲ್ಲಿಸಿರುವುದನ್ನು ಕಂಡಿದ್ದೇವೆ. ನಮ್ಮ ವಿಶ್ವವಿದ್ಯಾಲಯಕ್ಕೆ ಸರ್ಕಾರ ಅವರನ್ನು ನೇಮಿಸಿರುವುದು ನಮಗೆಲ್ಲ ಸಂತಸ ತಂದಿದೆ ಎಂದರು.

ಈ ಸಂದರ್ಭದಲ್ಲಿ ಮೌಲ್ಯಮಾಪನ ಕುಲಸಚಿವರಾದ ಡಾ. ಶಿವಶಂಕರ್ ಕೆ ಮಾತನಾಡಿದರು. ಸಹಾಯಕ ಕುಲಸಚಿವರಾದ ಶಹಜಹಾನ್ ಮುದಕವಿ ಅವರು ಮಾತನಾಡಿ ಕಾರ್ಯಕ್ರಮ ವಂದಿಸಿದರು. ಗ್ರಂಥಪಾಲಕರಾದ ಡಾ.ರಾಜಶೇಖರ ಕುಂಬಾರ, ಸಹಾಯಕ ಗ್ರಂಥಪಾಲಕರಾದ ಶಂಕರಗೌಡ ಮಾಲಿಪಾಟೀಲ, ಸಹಾಯಕ ಸಂಶೋಧನಾಧಿಕಾರಿ ಹಾಗೂ ವಿವಿ ನೌಕರರ ಸಂಘದ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಮಾನ್ಪಡೆ, ಸಹಾಯಕ ಸಂಶೋಧನಾಧಿಕಾರಿ ಡಾ.ನಾಯಕರ ಹುಲಗಪ್ಪ, ಡಾ.ಬಸವರಾಜ ಎಸ್ ಜಿ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ