Tuesday, October 13, 2026
Homeರಾಜಕೀಯಅರಾಜಕತೆ ಸೃಷ್ಟಿಸಲು ಕಾಂಗ್ರೆಸ್, ಇಂಡಿ ಒಕ್ಕೂಟದಷಡ್ಯಂತ್ರ: ಛಲವಾದಿ ನಾರಾಯಣಸ್ವಾಮಿ

ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್, ಇಂಡಿ ಒಕ್ಕೂಟದಷಡ್ಯಂತ್ರ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಮತ್ತು ಇಂಡಿ ಒಕ್ಕೂಟ ಒಂದು ದೊಡ್ಡ ಷಡ್ಯಂತ್ರ ಮಾಡಿವೆ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.
ಇಂದು ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಎಲ್ಲಾ ಪಕ್ಷಗಳು ಹಿಂದೆ ನಿಂತು ದೇಶದ ಒಳಗಿನ ಮತ್ತು ದೇಶದ ಹೊರಗಿನ ದೇಶವಿರೋಧಿಗಳ ಒಂದು ದುಷ್ಟ ಕೂಟವನ್ನು ಕಟ್ಟಿದೆ. ಈ ದೇಶದ ಸುಭದ್ರತೆಯನ್ನು ಅಭದ್ರಗೊಳಿಸಲಿಕ್ಕೆ ಇವತ್ತು ಈ ದುಷ್ಟಕೂಟ ಕಾದು ಕುಳಿತಿದೆ ಎಂದು ದೂರಿದರು. ಇದೇ ದುಷ್ಟ ಕೂಟ ಇವತ್ತು ಎಸ್.ಐ.ಆರ್ ಅನ್ನು ವಿರೋಧಿಸುತ್ತಿದೆ. ಎಸ್‍ಐಆರ್ ಅನ್ನು ವಿರೋಧಿಸಲಿಕ್ಕೆ ಹೊರದೇಶದಿಂದ ಬಂದ ಇಮ್ರಾನ್ ಖಾನ್ ಯಾರು? ಎಂದು ಕೇಳಿದರು.
ಈ ದುಷ್ಟ ಕೂಟ ಬೇರೆ ಬೇರೆ ರಾಜ್ಯಗಳಲ್ಲಿ ಹೋಗಿ ಎಸ್.ಐಆರ್ ಮಾಡಬಾರದು ಅಂತ ಹೇಳುತ್ತ್ತಾರೆ. 24 ವರ್ಷಗಳಲ್ಲಿ ಅನೇಕರು ಈ ದೇಶದಲ್ಲಿ ನಿಧನ ಹೊಂದಿದ್ದಾರೆ. ಅವರ ಹೆಸರುಗಳು ಚುನಾವಣಾ ಪಟ್ಟಿಯಲ್ಲಿವೆ. ಇವು ತೆಗೆಯಬೇಕಾ? ಬೇಡವಾ? ಎಂದು ಪ್ರಶ್ನಿಸಿದರು. ಅನೇಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಶಿಫ್ಟ್ ಅಥವಾ ಟ್ರಾನ್ಸ್‍ಫರ್ ಆಗಿದ್ದಾರೆ. ಎಲ್ಲಿ ಈಗ ಇದ್ದಾರೋ ಅಲ್ಲಿ ಅವರ ಹೆಸರುಗಳು ಇವೆ. ಹಿಂದೆ ಎಲ್ಲಿ ಇದ್ದರೋ ಅಲ್ಲಿಯೂ ಹೆಸರುಗಳಿದೆ. ಅದನ್ನ ತೆಗೆಯಬೇಕೋ? ಬೇಡವೋ? ಎಂದು ಪ್ರಶ್ನೆ ಹಾಕಿದರು.

ಭಾರತೀಯರಲ್ಲದವರ ಹೆಸರು..
ಅನೇಕರು ನಮ್ಮ ದೇಶದ ಪ್ರಜೆಗಳಲ್ಲದವರ ಹೆಸರುಗಳು ಚುನಾವಣಾ ಪಟ್ಟಿಯಲ್ಲಿವೆ. ಕೆಲವು ರಾಜಕೀಯ ಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ಅಥವಾ ತೃಣಮೂಲ ಕಾಂಗ್ರೆಸ್, ಇಂತಹ ಪಕ್ಷಗಳು ತಮ್ಮ ವೋಟ್ ಬ್ಯಾಂಕ್ ಅನ್ನು ಹೆಚ್ಚಿಸಿಕೊಳ್ಳುವ ಕಾರಣದಿಂದಾಗಿ ಅವುಗಳನ್ನು ಸೇರಿಸಿದ್ದರು. ಇವುಗಳನ್ನು ತೆಗೆಯಬೇಕೋ? ಬೇಡವೋ? ಇದು ದೇಶದ ಮುಂದೆ ಇರತಕ್ಕಂತಹ ಪ್ರಶ್ನೆ ಎಂದು ವಿವರಿಸಿದರು.

ಕೇರಳ, ಕರ್ನಾಟಕದಲ್ಲಿ ಮತಗಳ್ಳತನ ಆಗಿತ್ತೇ?
ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಸಂವಿಧಾನವು ಎಸ್‍ಐಆರ್ ಆಗಿಂದಾಗ್ಗೆ ಮಾಡಬೇಕು ಎಂದಿದೆ. ಆ ಕಾರಣದಿಂದ ಚುನಾವಣಾ ಆಯೋಗ ತನ್ನ ಕಾರ್ಯವನ್ನು ಮಾಡುತ್ತಿದೆ. ಇದು ಕಾನೂನುಬಾಹಿರ ಅಲ್ಲ. ಇಂತಹ ಸ್ಥಿತಿಯಲ್ಲಿ ಕಾಂಗ್ರೆಸ್ ಅನೇಕ ಕಡೆಗಳಲ್ಲಿ ‘ವೋಟ್ ಚೋರಿ, ವೋಟ್ ಚೋರಿ’ ಅಂತ ಹೇಳುತ್ತಿತ್ತು. ಕೇರಳದಲ್ಲಿ ವೋಟ್ ಚೋರಿ ಆಗಿತ್ತಾ? ಎಂಬುದಕ್ಕೆ ಕಾಂಗ್ರೆಸ್ ನವರು ನನಗೆ ಅವರು ಉತ್ತರ ಕೊಡಬೇಕು. ನೀವು ಗೆದ್ದಿದ್ದೀರಿ. ಅಂದಮೇಲೆ ವೋಟ್ ಚೋರಿ ಇಲ್ಲ ಅಂತ ನಿಮ್ಮದಿರಬಹುದು ಎಂದು ನುಡಿದರು. ಕರ್ನಾಟಕದಲ್ಲಿ ವೋಟ್ ಚೋರಿ ಆಗಿತ್ತಾ? ನೀವೇ ಗೆದ್ದಿದ್ದೀರಿ. ವೋಟ್ ಚೋರಿ ಆದರೆ ನೀವು ಗೆಲ್ಲಲಿಕ್ಕೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿ ನಿಮ್ಮ ಸದ್ದಿಲ್ಲ..
ಅದೇ ತೆಲಂಗಾಣದಲ್ಲಿ ವೋಟ್ ಚೋರಿ ಆಗಿತ್ತಾ? ಹಿಮಾಚಲ ಪ್ರದೇಶದಲ್ಲಿ ಮತಗಳ್ಳತನ ಆಗಿತ್ತಾ? ಇಲ್ಲಿ ಮಾತ್ರ ನಿಮ್ಮದು ಸದ್ದಿಲ್ಲ. ತಮಿಳುನಾಡಿನಲ್ಲಿ ನೀವು ಗೆದ್ದಿಲ್ಲ, ನಾವೂ ಗೆದ್ದಿಲ್ಲ, ಅದನ್ನ ವೋಟ್ ಚೋರಿ ಅಂತೀರಾ? ಪಶ್ಚಿಮ ಬಂಗಾಳದಲ್ಲಿ ನಿಮ್ಮದು ಠೇವಣಿ ಬರೋದಿಲ್ಲ, ವೋಟ್ ಚೋರಿ ಅಂತ ಹೇಗೆ ಹೇಳ್ತೀರಿ ನೀವು? ಒಡಿಶಾದಲ್ಲಿ ಎμÉ್ಟೂೀ ಕಾಲ ಆಯ್ತು ನೀವು ಸರ್ಕಾರ ಮಾಡಿ, ಅಂದ್ರೆ ವೋಟ್ ಚೋರಿ? ಗುಜರಾತ್ ನಲ್ಲಿ ನೀವು ಗೆಲ್ಲೋದೇ ಇಲ್ಲ, ವೋಟ್ ಚೋರಿ? ಹರಿಯಾಣ ವೋಟ್ ಚೋರಿ? ಪಂಜಾಬ್ ವೋಟ್ ಚೋರಿ? ಅಂದರೆ ನಿಮಗೆ ಎಲ್ಲೆಲ್ಲಿ ಮತ ಹಾಕಲಿಲ್ಲವೋ ಅಲ್ಲಿ ವೋಟ್ ಚೋರಿ ಅಂತೀರಿ ಎಂದು ಆಕ್ಷೇಪಿಸಿದರು. ದೇಶದಲ್ಲಿ ಮತಗಳ್ಳತನ ಆಗುತ್ತಿಲ್ಲ. ಯಾರ್ಯಾರು ಕಳ್ಳರು ಅಂತ ಜನÀರಿಗೆ ಅನ್ನಿಸ್ತದೆಯೋ ಅವರಿಗೆ ಮತ ಹಾಕುತ್ತಿಲ್ಲ ಎಂದು ವಿಶ್ಲೇಷಿಸಿದರು.

ಮುಸ್ಲಿಮರಿರುವಲ್ಲೂ ಬಿಜೆಪಿ ಗೆಲುವು..
ಮಾತು ಮಾತಿಗೆ ‘ದಲಿತರ ವೋಟು ತೆಗೆದುಬಿಡ್ತಾ ಇದ್ದಾರೆ, ಮುಸಲ್ಮಾನರ ವೋಟು ತೆಗೆದುಬಿಡ್ತಾ ಇದ್ದಾರೆ’ ಅಂತ ಹೇಳುತ್ತೀರಿ. ಪಶ್ಚಿಮ ಬಂಗಾಲದಲ್ಲಿ ಸಂಪೂರ್ಣವಾಗಿ ಮುಸಲ್ಮಾನ್ ಬಂಧುಗಳೇ ಇರತಕ್ಕಂತಹ ಕಡೆಯಲ್ಲೂ ಕೂಡ 1,24,000 ಬಹುಮತದಲ್ಲಿ ಭಾರತೀಯ ಜನತಾ ಪಕ್ಷ ಗೆದ್ದಿದೆ. ಅಂದರೆ ಇದರ ಅರ್ಥ ಏನು? ತಡವಾಗಿ ಆದರೂ ಮುಸಲ್ಮಾನ ಬಂಧುಗಳು ಭಾರತೀಯ ಜನತಾ ಪಕ್ಷವನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ವಿಶ್ಲೇಷಿಸಿದರು.

ನಮಗೆ ಈ ಓಲೈಕೆ ಮಾಡುವವರು, ನಮ್ಮನ್ನ ದಾರಿ ತಪ್ಪಿಸಲಿಕ್ಕೆ ಓಲೈಕೆ ಮಾಡುವಂತ ಕಾಂಗ್ರೆಸ್ ಬೇಕಿಲ್ಲ. ಅಥವಾ ತೃಣಮೂಲ ಕಾಂಗ್ರೆಸ್ ಬೇಕಿಲ್ಲ. ಅಭಿವೃದ್ಧಿ ಮಾಡುವ, ದೇಶವನ್ನು ಸುಭದ್ರಗೊಳಿಸುವ, ದೇಶವನ್ನು ಎಲ್ಲಾ ರಂಗಗಳಲ್ಲೂ ಉನ್ನತ ಸ್ಥಿತಿಗೆ ತಂದಿರುವ ಭಾರತೀಯ ಜನತಾ ಪಕ್ಷ ನಮಗೆ ಬೇಕು ಎಂಬ ಮಾತನ್ನು ಇವತ್ತು ಹೇಳೋದು ಮಾತ್ರ ಅಲ್ಲ, ಅದನ್ನ ಕಾರ್ಯರೂಪಕ್ಕೆ ತಂದು ತೋರಿಸಿಕೊಟ್ಟಿದ್ದಾರೆ. ಅಂದಮೇಲೆ ನಿಮ್ಮ ಯೋಗ್ಯತೆ, ನಿಮ್ಮ ಪರಿಸ್ಥಿತಿ ಈ ದೇಶದಲ್ಲಿ ಏನಿದೆ ಎಂಬುದನ್ನು ಕಾಂಗ್ರೆಸ್ಸಿಗೆ ಜನ ಇವತ್ತು ತೋರಿಸಿಕೊಡ್ತಿದ್ದಾರೆ ಎಂದು ನುಡಿದರು.

ಯುವಜನತೆ ದಾರಿ ತಪ್ಪಿಸಲು ಪ್ರಯತ್ನ..
ಜೆನ್-ಝೀ ಹೆಸರಿನಲ್ಲಿ ಇವತ್ತು ಏನು ಹೋರಾಟ ನಡೀತಾ ಇದೆಯೋ, ಆ ಒಂದು ವಯಸ್ಸಿನ ಜನರ ಮತ ಎಲ್ಲೂ ಒಂದೂ ಕೂಡ ಯಾರೂ ತೆಗೆದಿಲ್ಲ, ತೆಗೆಯೋದೂ ಇಲ್ಲ. ಜೆನ್-ಝೀ ಗಳು ಈ ದೇಶದ ಆಸ್ತಿ. ಆದರೆ ಅವರನ್ನ ದಾರಿ ತಪ್ಪಿಸಲಿಕ್ಕೆ ನೀವು ಪ್ರಯತ್ನ ಮಾಡ್ತಿದ್ದೀರಿ. ದೇಶದ್ರೋಹ ಮಾಡತಕ್ಕಂತ, ಒಳಗಡೆ ಇರತಕ್ಕಂತ ಜನರು ಇವತ್ತು ಯಾರು ಈ ದೇಶದ ವಿರುದ್ಧವಾಗಿ ಕೆಲಸ ಮಾಡ್ತಾರೆ ಅನ್ಯ ದೇಶದವರು, ಅವರ ಜೊತೆಯಲ್ಲಿ ಸೇರಿಕೊಂಡು ಕೆಲಸ ಮಾಡ್ತಿದ್ದೀರಿ ಎಂಬುದು ನಮಗೂ ಗೊತ್ತಿದೆ ಎಂದರು.

ಅಭಿಜಿತ್ ದೀಪ್ಕೆಗೆ ಹಣ ಎಲ್ಲಿಂದ?
ಅಭಿಜೀತ್ ದೀಪ್ಕೆ ಮತ್ತು ಅವರ ಸಂಗಡಿಗರು ವಿಶೇಷ ವಿಮಾನದಲ್ಲಿ ತಿರುಗಾಡಲಿಕ್ಕೆ ಅವಕಾಶ ಕೊಟ್ಟವರು ಯಾರು? ಅವರಿಗೆ ಹಣ ಎಲ್ಲಿಂದ ಬರ್ತಾ ಇದೆ? ಅವರಿಗೆ ವ್ಯವಸ್ಥೆಗಳು ಎಲ್ಲಿಂದ ಬರ್ತಾ ಇದೆ? ಅವರ ನಾಯಕರು ಅಂತ ಯಾರು ಅನಿಸಿಕೊಂಡಿದ್ದಾರೋ ಅವರು ಎಂತೆಂತಹ ಸ್ಥಳಗಳಲ್ಲಿದ್ದಾರೆ? ಅವರಲ್ಲಿ ಅನೇಕರು ನಿರುದ್ಯೋಗಿಗಳು. ಅವರಿಗೆ ಇನ್ನೂ ಕೆಲಸ ಇಲ್ಲ. ಆದರೆ, ಐμÁರಾಮಿ ಜೀವನ ಕೊಡುವವರು ಯಾರು? ಈ ದೇಶವನ್ನು ಗುರಿ ಮಾಡಿ ಹೊರಗಡೆ ಇರತಕ್ಕಂತ ದೇಶದ್ರೋಹಿ ಶಕ್ತಿಗಳು ಅವರಿಗೆ ಇವತ್ತು ಸಹಕಾರ ನಿಂತಿದ್ದಾರೆ. ಯಾಕಂದರೆ ಈ ದೇಶದಲ್ಲಿ ಇವತ್ತು ಗೊಂದಲವನ್ನು ಸೃಷ್ಟಿ ಮಾಡಬೇಕಾಗಿದೆ. ದೇಶ ಉತ್ತಮವಾಗಿ ನಡೀತಾ ಇರುವುದು ಅವರಿಗೆ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಭಾರತದ ಸಾಧನೆಗೆ ಮೆಚ್ಚುಗೆ
ನನ್ನ ದೇಶ ಆತ್ಮನಿರ್ಭರ ಭಾರತ ಆಗಬೇಕು, ನನ್ನ ದೇಶ 2047 ಅಂದರೆ ಸ್ವಾತಂತ್ರ್ಯೋತ್ಸವಕ್ಕೆ ನೂರು ವರ್ಷಗಳು ತುಂಬಿದಾಗ, ಸ್ವಾತಂತ್ರ್ಯ ಬಂದು ನೂರು ವರ್ಷಗಳು ತುಂಬಿದಾಗ ಪ್ರಪಂಚದಲ್ಲಿ ನಂಬರ್ ಒನ್ ಆಗಿರಬೇಕು ಎಂದು ಮೋದೀಜಿಯವರು ಪದೇಪದೇ ಹೇಳ್ತಾರೆ. ಆ ಕಾರಣದಿಂದ ಇವತ್ತು ಎಲ್ಲವೂ ಮೇಕ್ ಇನ್ ಇಂಡಿಯಾ ಅಂತ ಮಾಡಿದ್ದಾರೆ ಎಂದರಲ್ಲದೇ ವ್ಯಾಕ್ಸಿನ್, ಮೊಬೈಲ್ ಉತ್ಪಾದನೆಯಲ್ಲಿ ಭಾರತದ ಸಾಧನೆಯನ್ನು ಪ್ರಶಂಸಿಸಿದರು. ರಿನೀವೇಬಲ್ ಎನರ್ಜಿ, ಟೆಲಿಕಾಂ ಮಾರ್ಕೆಟಿಂಗ್ ಸೇರಿ ಅನೇಕ ಕ್ಷೇತ್ರಗಳಲ್ಲಿ ನಮ್ಮ ಸಾಧನೆ ಪ್ರಶಂಸಾರ್ಹ ಎಂದು ವಿವರಿಸಿದರು.

ಭಾರತ ಇವತ್ತು ಸುಭದ್ರ ದೇಶವಾಗಿದೆ. ಮೋದೀಜಿಯವರು ಮಾಡುವ ಕೆಲಸಗಳು ಪ್ರತಿಯೊಬ್ಬರನ್ನು ಸದೃಢಗೊಳಿಸುತ್ತಿವೆ, ಕಾಂಗ್ರೆಸ್ ಮತ್ತು ಅವರ ಜೊತೆಗಿನ ಪಕ್ಷಗಳು ದೇಶವನ್ನು ಅಭದ್ರಗೊಳಿಸುವ ಕೆಲಸ ಮಾಡುತ್ತಿವೆ ಎಂದು ಟೀಕಿಸಿದರು.

ಯುವಜನರಿಗೆ ಉಜ್ವಲ ಭವಿಷ್ಯ..
ಈ ದೇಶ ಯುವಜನತೆಯನ್ನು ಮುಂದಿಟ್ಟು ದೇಶವನ್ನು ಉಜ್ವಲ ಭವಿಷ್ಯದತ್ತ ಕೊಂಡೊಯ್ಯುವ ಕೆಲಸವನ್ನು ಮೋದೀಜಿಯವರು ಮಾಡ್ತಿದ್ದಾರೆ. ನಿಮ್ಮ ಭವಿಷ್ಯ ಉಜ್ವಲವಾಗಿದೆ ಎಂಬ ಮಾತನ್ನು ನಾನು ಯುವಜನರಿಗೆ, ಜೆನ್-ಝೀಗೆ ಹೇಳುವುದಾಗಿ ತಿಳಿಸಿದರು. ಯಾವ ವಿಚ್ಛಿದ್ರ ಶಕ್ತಿಗಳು, ದೇಶದ್ರೋಹಿ ಶಕ್ತಿಗಳು ನಿಮ್ಮನ್ನು ದಾರಿ ತಪ್ಪಿಸಿ ನಿಮ್ಮಿಂದ ಕೆಟ್ಟ ಒಂದು ಪರಂಪರೆಯನ್ನು ಸೃಷ್ಟಿ ಮಾಡಲಿಕ್ಕೆ ಪ್ರಯತ್ನ ಮಾಡ್ತಿದ್ದಾರೋ ಅವರಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು. ಇವತ್ತು ಕಾಂಗ್ರೆಸ್ ಇಡೀ ದೇಶದಲ್ಲಿ ತಿರಸ್ಕøತ ಪಕ್ಷವಾಗಿದೆ. ಅಲ್ಲಿ ನಾಯಕತ್ವ ಇಲ್ಲವೇ ಇಲ್ಲ ಎಂದು ವಿವರಿಸಿದರು.

ಹೆಚ್ಚಿನ ಸುದ್ದಿ