Friday, July 31, 2026
Homeಜಿಲ್ಲಾ ಸುದ್ದಿಗಳುಯಾದಗಿರಿಸಂಧಾನವೂ ಫೇಲ್… ಆಫೀಸ್ ಚೇರೂ ಜಪ್ತಿ! ಯಾದಗಿರಿ ಪೌರಯುಕ್ತರಿಗೆ ಬಿಗ್ ಶಾಕ್!ಸಂಧಾನದ ಮರುದಿನವೇ ಕುರ್ಚಿ ಮಾಯ:

ಸಂಧಾನವೂ ಫೇಲ್… ಆಫೀಸ್ ಚೇರೂ ಜಪ್ತಿ! ಯಾದಗಿರಿ ಪೌರಯುಕ್ತರಿಗೆ ಬಿಗ್ ಶಾಕ್!ಸಂಧಾನದ ಮರುದಿನವೇ ಕುರ್ಚಿ ಮಾಯ:

ನಿನ್ನೆ ಕುರ್ಚಿಯಲ್ಲಿ ಸಂಧಾನ, ಇಂದು ನೆಲದ ಮೇಲೆ ಆಡಳಿತ?

ಸಂಧಾನ ವಿಫಲ: ನಗರಸಭೆ ಪೌರಾಯುಕ್ತರಿಗೆ ಕುಳಿತುಕೊಳ್ಳಲು ಕುರ್ಚಿಯೇ ಇಲ್ಲ!

ಮುಂದಿನ ನಡೆ ಯಾವ ಕಡೆ

ಸಂಧಾನವೂ ಫೇಲ್… ಆಫೀಸ್ ಚೇರೂ ಜಪ್ತಿ! ಯಾದಗಿರಿ ಪೌರಯುಕ್ತರಿಗೆ ಬಿಗ್ ಶಾಕ್!
​ನಿನ್ನೆ ಕುರ್ಚಿಯಲ್ಲಿ ಸಂಧಾನ, ಇಂದು ನೆಲದ ಮೇಲೆ ಆಡಳಿತ?
​ಸಂಧಾನ ವಿಫಲ: ನಗರಸಭೆ ಪೌರಾಯುಕ್ತರಿಗೆ ಕುಳಿತುಕೊಳ್ಳಲು ಕುರ್ಚಿಯೇ ಇಲ್ಲ; ಮುಂದೆ ಅವರ ನಡೆ ಯಾವ ಕಡೆ?


​ಯಾದಗಿರಿ:
ಸಂಧಾನದ ನಾಟಕವೂ ನಡೆಯಲಿಲ್ಲ, ಕೋರ್ಟ್ ವಾರಂಟ್‌ಗೆ ಕರುಣೆಯೂ ಬರಲಿಲ್ಲ! ನಿನ್ನೆಯಷ್ಟೇ ಕಚೇರಿಯ ತಮ್ಮ ಅಧಿಕೃತ ಕುರ್ಚಿಯಲ್ಲಿ ಕುಳಿತು ಪ್ರಕರಣ ಇತ್ಯರ್ಥಕ್ಕೆ ಸಂಧಾನದ ಮಾತುಕತೆ ನಡೆಸಿದ್ದ ಯಾದಗಿರಿ ನಗರಸಭೆ ಪೌರಾಯುಕ್ತರಿಗೆ ಮಂಗಳವಾರ ಬೆಳಿಗ್ಗೆಯಿಂದಲೇ ಬಿಗ್ ಶಾಕ್ ಎದುರಾಗಿದೆ. ಸಂಧಾನದ ಮರುದಿನವೇ ಕುರ್ಚಿ-ಟೇಬಲ್‌ಗಳು ಗಾಯಾಬ್ ಆಗಿದ್ದು, ಈಗ ಕಚೇರಿಯಲ್ಲಿ ಕುಳಿತುಕೊಳ್ಳಲು ಆಸನವೇ ಇಲ್ಲದೆ ನೆಲದ ಮೇಲೆ ಕುಳಿತು ಕೆಲಸ ನಿರ್ವಹಿಸುವ ವಿಚಿತ್ರ ಪ್ರಸಂಗ ಎದುರಾಗಿದೆ.
​ 40 ವರ್ಷಗಳ ಹೋರಾಟ; ₹2.12 ಕೋಟಿಗೆ ಕುತ್ತು!
​ನಗರದ ನಿವಾಸಿ ಸರಸ್ವತಿ ನಾರಾಯಣರಾವ್ ಅವರಿಗೆ ಸೇರಿದ ಬೆಲೆಬಾಳುವ ಜಾಗವನ್ನು ಸುಮಾರು 40 ವರ್ಷಗಳ ಹಿಂದೆಯೇ ನಗರಸಭೆಯು ತನ್ನದೆಂದು ಸ್ವಾಧೀನಪಡಿಸಿಕೊಂಡಿತ್ತು. ಆದರೆ, ಉರುಳಿದ ನಾಲ್ಕು ದಶಕಗಳಲ್ಲಿ ಸೂಕ್ತ ಪರಿಹಾರ ಧನ ನೀಡದೆ ಸತಾಯಿಸಲಾಗಿತ್ತು. ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಸರಸ್ವತಿಯವರ ಅರ್ಜಿಯನ್ನು ಪುರಸ್ಕರಿಸಿದ್ದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ, ಬರೋಬ್ಬರಿ ₹2.12 ಕೋಟಿ ಪರಿಹಾರ ನೀಡುವಂತೆ ಆದೇಶಿಸಿತ್ತು. ಆದರೂ ಹಣ ಪಾವತಿಸದ ಹಿನ್ನೆಲೆಯಲ್ಲಿ ಜಪ್ತಿ ವಾರಂಟ್ ಜಾರಿಯಾಗಿತ್ತು.
​ ಸಂಧಾನದ ಮರುದಿನವೇ ಜಪ್ತಿ ಕಾರ್ಯಾಚರಣೆ!
​ಸೋಮವಾರ ಸಂಜೆ ನಡೆದ ಮಾತುಕತೆ ಅಪೂರ್ಣಗೊಂಡ ಬೆನ್ನಲ್ಲೇ, ಮಂಗಳವಾರ ಬೆಳಿಗ್ಗೆ ಲಾರಿ ಸಮೇತ ನಗರಸಭೆಗೆ ಎಂಟ್ರಿ ಕೊಟ್ಟ ಕೋರ್ಟ್ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದರು.
​ಕಂಪ್ಯೂಟರ್‌ಗಳು
​ಸಿಸಿಟಿವಿ ಕ್ಯಾಮೆರಾಗಳು
​ಸಾಲು ಸಾಲು ಟೇಬಲ್‌ಗಳು
​ಪೌರಾಯುಕ್ತರ ‘ಪವರ್ ಚೇರ್’ ಸೇರಿದಂತೆ ಪ್ರಮುಖ ಸಾಮಗ್ರಿಗಳನ್ನು ಜಪ್ತಿ ಮಾಡಿ ಲಾರಿಗೆ ತುಂಬಿಕೊಂಡು ತೆರಳಿದ್ದಾರೆ.
​ಪರಿಣಾಮವಾಗಿ, ನಗರಸಭೆ ಕಚೇರಿ ಸಂಪೂರ್ಣ ಖಾಲಿಯಾಗಿದ್ದು, ‘ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಳ್ಳಲಿದೆಯೇ? ಪೌರಾಯುಕ್ತರ ಮುಂದಿನ ನಡೆ ಯಾವ ಕಡೆ?’ ಎನ್ನುವುದೇ ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.
​ “ಹಂತ ಹಂತವಾಗಿ ಕೊಡುವುದಾಗಿ ಹೇಳಿದರೂ ಒಪ್ಪಲಿಲ್ಲ”
“ನ್ಯಾಯಾಲಯದ ಆದೇಶದಂತೆ ಸರಸ್ವತಿಯವರಿಗೆ ಪರಿಹಾರ ನೀಡಬೇಕಿತ್ತು. ಆದರೆ ಒಂದೇ ಬಾರಿಗೆ ಅಷ್ಟೊಂದು ಹಣ ನೀಡಲು ನಗರಸಭೆಯಲ್ಲಿ ಹಣ ಇರಲಿಲ್ಲ. ಹಂತ-ಹಂತವಾಗಿ ಕೊಡುವುದಾಗಿ ವಿನಂತಿಸಿದ್ದೆವು. ಮೊದಲು ₹10 ಲಕ್ಷ ನೀಡಲಾಗಿದ್ದು, ಈಗ ಮತ್ತೆ ₹5 ಲಕ್ಷ ಕೊಡುವುದಾಗಿ ಹೇಳಿದಾಗ ಅವರು ಒಪ್ಪಲಿಲ್ಲ. ಹೀಗಾಗಿ ಕೋರ್ಟ್ ಆದೇಶದಂತೆ ಸಾಮಾನುಗಳನ್ನು ಜಪ್ತಿ ಮಾಡಲಾಗಿದೆ.”
— ಉಮೇಶ್ ಚವ್ಹಾಣ್, ಪೌರಾಯುಕ್ತರು, ನಗರಸಭೆ ಯಾದಗಿರಿ

ಹೆಚ್ಚಿನ ಸುದ್ದಿ