Monday, August 10, 2026
Homeಜಿಲ್ಲಾ ಸುದ್ದಿಗಳುಯಾದಗಿರಿಸಾಲ ಮರುಪಾವತಿಯ ಒನ್‍ಟೈಮ್ಸೆಟಲ್‍ಮೆಂಟ್ (ಓಟಿಎಸ್) ಅಂತಿಮ ದಿನಾಂಕ ಆ.30 ರವರೆಗೆ ವಿಸ್ತರಣೆ

ಸಾಲ ಮರುಪಾವತಿಯ ಒನ್‍ಟೈಮ್ಸೆಟಲ್‍ಮೆಂಟ್ (ಓಟಿಎಸ್) ಅಂತಿಮ ದಿನಾಂಕ ಆ.30 ರವರೆಗೆ ವಿಸ್ತರಣೆ

ಯಾದಗಿರಿ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ಯಾದಗಿರಿ ಜಿಲ್ಲಾ ಕಚೇರಿಯು 2013-14 ರಿಂದ 2018-19ನೇ ಸಾಲಿನವರೆಗೆ ವಿವಿಧ ಯೋಜನೆಗಳಡಿ ಸಾಲ ಪಡೆದ ಫಲಾನುಭವಿಗಳಿಗೆ ಸಾಲ ತೀರುವಳಿ ಮಾಡಲು ನೀಡಲಾಗಿದ್ದ ಒಂದಾವರ್ತಿ ತೀರುವಳಿ ಯೋಜನೆ (ಒನ್‍ಟೈಮ್ ಸೆಟಲ್‍ಮೆಂಟ್ (ಓಟಿಎಸ್) ಕೊನೆಯ ದಿನಾಂಕವನ್ನು ದಿನಾಂಕ: 30-08-2026 ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಈ ಯೋಜನೆಗೆ ಈ ಹಿಂದೆ ದಿನಾಂಕ: 31-07-2026 ಕೊನೆಯ ದಿನಾಂಕವಾಗಿತ್ತು. ಆದರೆ ಈಗ ಸಾರ್ವಜನಿಕರ ಹಿತದೃಷ್ಟಿಯಿಂದ ಸಾಲದ ಖಾತೆ ಮುಕ್ತಾಯಗೊಳಿಸಲು ದಿನಾಂಕವನ್ನು ವಿಸ್ತರಿಸಲಾಗಿದೆ.
ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್ ಹಾಗೂ ಪಾರ್ಸಿ ಜನಾಂಗದವರಿಂದ ಶ್ರಮಶಕ್ತಿ, ಮೈಕ್ರೋ ಸಾಲ (ಮಹಿಳಾ ಸ್ವ-ಸಹಾಯ ಸಂಘ), ಸ್ವಾವಲಂಬನಾ ಮಾರ್ಜಿನ್ ಮನಿ, ಎನ್‍ಎಂಡಿಸಿ ನೇರಸಾಲ, ವಿದೇಶಿ ವಿದ್ಯಾಭ್ಯಾಸ, ಭೂ ಖರೀದಿ, ಮೈಕ್ರೋ ಕೋವಿಡ್-19, ಅರಿವು ಯೋಜನೆ ಮತ್ತು ಪಶುಸಂಗೋಪನಾ ಯೋಜನೆಗಳಡಿ ನೀಡಲಾಗಿರುವ ಸಾಲದ ವಸೂಲಿಗಾಗಿ ಸಾಲದ ಮೊತ್ತವನ್ನು ಪೂರ್ಣವಾಗಿ ಅಸಲು ಪಾವತಿಸಿದ ಫಲಾನುಭವಿಗಳಿಗೆ ಬಡ್ಡಿಯನ್ನು ಮನ್ನಾ ಮಾಡಲು ಮಾರ್ಗ ಸೂಚಿಗಳನ್ವಯ ಒಂದಾವರ್ತಿ ತೀರುವಳಿ ಯೋಜನೆ (ಒನ್‍ಟೈಮ್ ಸೆಟಲ್‍ಮೆಂಟ್ (ಓಟಿಎಸ್) ಜಾರಿಗೊಳಿಸಲಾಗಿದೆ.
ಈ ಯೋಜನೆಯಡಿ ನಿಗದಿಪಡಿಸಿದ ಅವಧಿಯೊಳಗೆ ಸಾಲದ ಅಸಲು ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿದರೆ, ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಲಾಗುತ್ತದೆ ಹಾಗೂ ಸಾಲ ಮುಕ್ತಾಯದ ಪ್ರಮಾಣ ಪತ್ರ ನೀಡಲಾಗುತ್ತದೆ.
ಫಲಾನುಭವಿಗಳು ಆನ್‍ಲೈನ್ ಮೂಲಕ ಸಾಲ ತೀರಿಸಲು ವೆಬ್‍ಸೈಟ್ https://kmdconline.karnataka.gov.in/ ಗೆ ಭೇಟಿ ನೀಡಿ ಯುಪಿಐ/ಕಾರ್ಡ/ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು. ನಿಗದಿಪಡಿಸಿದ ದಿನಾಂಕದೊಳಗೆ ಸಾಲ ಪಾವತಿಸದಿದ್ದರೆ ನಿಯಮಾವಳಿಗಳಂತೆ ಬಡ್ಡಿ ಸಹಿತ ಸಂಪೂರ್ಣ ಸಾಲ ವಸೂಲಾತಿಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಛೇರಿ ದೂರವಾಣಿ ಸಂಖ್ಯೆ: 08473-253785, ಇಲಾಖಾ ಸಹಾಯವಾಣಿ ಸಂಖ್ಯೆ: 8277799990 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ