Monday, June 29, 2026
Homeಜಿಲ್ಲಾ ಸುದ್ದಿಗಳುಉತ್ತರ ಕನ್ನಡಶಾಲಾ ಕೊಠಡಿ ಕಾಮಗಾರಿಗೆ ಶಾಸಕ ಶಿವರಾಂ ಹೆಬ್ಬಾರ್ ರಿಂದ ಶಂಕು ಸ್ಥಾಪನೆ.

ಶಾಲಾ ಕೊಠಡಿ ಕಾಮಗಾರಿಗೆ ಶಾಸಕ ಶಿವರಾಂ ಹೆಬ್ಬಾರ್ ರಿಂದ ಶಂಕು ಸ್ಥಾಪನೆ.

ಮುಂಡಗೋಡ.23 ತಾಲೂಕಿನ ಮೂರು ಸರ್ಕಾರಿ ಶಾಲೆಗಳಾದ ಸಾಲ್ಗಾವ್ . ಹಿರಿಯ ಪ್ರಾಥಮಿಕ ಶಾಲೆ. ಅಜ್ಜಳಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಚಿಗಳ್ಳಿ ಸರ್ಕಾರಿ ಪ್ರೌಢಶಾಲೆಗೆ ಮಂಜೂರಿಯಾಗಿರುವ ಹೆಚ್ಚುವರೆ ಕೊಠಡಿ ಶಂಕು ಸ್ಥಾಪನೆಯನ್ನು ಶಾಸಕ ಶಿವರಾಂ ಹೆಬ್ಬಾರ್ ನೆರವೇರಿಸಿದರು. ಸರ್ಕಾರಿ ಪ್ರೌಢಶಾಲೆ ಚಿಗಳ್ಳಿಗೆ 30 ಲಕ್ಷ ರೂ. ಹಾಗೂ ಸಾಲ್ಗಾವ್ ಹಿರಿಯ ಪ್ರಾಥಮಿಕ ಶಾಲೆಗೆ ಹಾಗೂ ಅಜ್ಜಿಳಿ ಕಿರಿಯ ಪ್ರಾಥಮಿಕ ಶಾಲೆಗೆ ತಲಾ 15 ಲಕ್ಷ ರೂ. ಮಂಜೂರಿಯಾದ ಕೊಠಡಿಗಳ. ಶಂಕು ಸ್ಥಾಪನೆ ನೆರವೇರಿಸಿ ಶಾಸಕರು ಮಾತನಾಡಿ ಸಿದ್ದರಾಮಯ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲಾಪುರ ಕ್ಷೇತ್ರಕ್ಕೆ 50ಕೋಟಿ ರೂ ಮಂಜೂರಿ ಮಾಡಿದ್ದರು. ಅದರಲ್ಲಿಯೂ 20 ಕೋಟಿ ರೂಗಳನ್ನು ಶಾಲಾ ಅಭಿವೃದ್ಧಿ ಕಾಮಗಾರಿಗಳಾದ ಶೌಚಾಲಯ. ಕಾಂಪೌಂಡ್ ಗೋಡೆ.ಹೆಚ್ಚುವರಿ ಕೊಠಡಿ. ಮೇಲಾವಳ್ಳಿ ಗಳಿಗೆ ನೀಡಿದ್ದೇನೆ.

ಮಕ್ಕಳ ಶಿಕ್ಷಣಕ್ಕೆ ಯಾವುದೇ ಕೊರತೆಯಾಗಬಾರದು ಅಲ್ಲದೆ ಖಾಸಗಿ ಶಾಲೆಗಳಿಗೆ ಮೀರಿಸುವಂತಹ ಅಭ್ಯಾಸ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳಿಗೆ ಸಿದ್ದರ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುತ್ತಾರೆ. ಮಕ್ಕಳು ವಿದ್ಯಾಭ್ಯಾಸ ಮಾಡುವಂತ ಕಟ್ಟಡಗಳಿಗೆ ನೀಡಿರುವ ಹಣವನ್ನು ಸುವಿನಿ ಯೋಗವಾಗಬೇಕು ಎಂದರು. 2025 26 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಅತ್ಯುತ್ತಮವಾಗಿ ಬಂದಿರುವುದು ನನ್ನ ಬಹಳ ಸಂತೋಷವಾಗಿದೆ. ಪ್ರತಿ ಬಾರಿಯೂ ನನ್ನ ಕ್ಷೇತ್ರದ ತಾಲೂಕುಗಳಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಕಡಿಮೆ ಬರುತ್ತಿದ್ದರಿಂದ ಉಳಿದ ಕ್ಷೇತ್ರದ ಶಾಸಕರು ಜನಪ್ರತಿನಿಧಿಗಳು ನಿಮ್ಮ ಕ್ಷೇತ್ರದ ಫಲಿತಾಂಶ ಕಡಿಮೆ ಏಕೆ ಎಂದು ಪ್ರಶ್ನೆಸುತ್ತಿದ್ದರು ಇದರಿಂದ ನನಗೆ ಬಹಳ ಮಜುಗರವಾಗುತ್ತಿತ್ತು ಈ ಬಾರಿಯಂತೆ ಮುಂದಿನ ಬಾರಿಯೂ ರಿಸಲ್ಟ್ ಬಂದರು ಖುಷಿ ಅದಕ್ಕಿಂತಲೂ ಹೆಚ್ಚಿಗೆ ಬಂದರೆ ಮತ್ತಷ್ಟು ಖುಷಿಯಾಗುತ್ತದೆ. ಇಂಥ ಪಲಿತಾಂಶ ಬರಲಿಕ್ಕೆ ಕಾರಣಿಕರ್ತರಾದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಟೀಮ್ ಒಳ್ಳೆಯ ಕೆಲಸ ಮಾಡಿದ್ದಾರೆ . ಅಲ್ಲದೆ ನಾನು ಇಂತಹ ಸಹ ಈ ಕುರಿತಂತೆ ಆಯಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಸಭೆ ನಡೆಸಿ ಉತ್ತಮ ಫಲಿತಾಂಶ ಬರುವಂತೆ ಮಾಡಬೇಕು ಎಂದು ತಾಕಿತ್ತು ನೀಡಿದ್ದು ಸಹ ನಾನು ಧನ್ಯವಾದ ತಿಳಿಸುತ್ತೇನೆ ಎಂದರು .

ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ ಜಿ. ಮಾತನಾಡಿ ನನಗೂ ಸಹ ಫಲಿತಾಂಶ ನೋಡಿ ಆಶ್ಚರ್ಯ ಜೊತೆಗೆ ಅತ್ಯಂತ ಖುಷಿಯಾಯಿತು. ಏಕೆಂದರೆ ನಾನು ಶಾಸಕರಿಗೆ ಮುಂಡಗೋಡ್ ತಾಲೂಕಿನ ಫಲಿತಾಂಶ ಶೇಕಡ 85 ರಷ್ಟು ಆದರೂ ಮಾಡೇ ಮಾಡುತ್ತೇನೆ ಎಂದು ತಿಳಿಸಿದ್ದೆ . ಆದರೆ ಫಲಿತಾಂಶ ನಾನು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಬಂದಿದೆ . ಇದಕ್ಕೆ ಶಾಸಕರು ಶಿಕ್ಷಣಕ್ಕೆ ಅತ್ಯಂತ ಮಹತ್ವ ಕೊಟ್ಟು ಮುಖ್ಯ ಶಿಕ್ಷಕರ ಸಭೆ ಮಾಡಿ ಸಮಾಲೋಚನೆ ನಡೆಸಿ ಇತಿಷ್ಟು ರಿಸಲ್ಟ್ ಬರಲೇಬೇಕು ಎಂದು ಟಾರ್ಗೆಟ್ ನೀಡಿದ್ದರು.

ಎಲ್ಲಾ ಪ್ರೌಢಶಾಲೆಗಳ ಫಲಿತಾಂಶ ಅತ್ಯುತ್ತಮವಾಗಿ ಬಂದಿದೆ . ಇದಕ್ಕೆ ನೇರ ಕಾರಣ ಶಾಸಕರು ಎನ್ನುವುದನ್ನು ಮರೆಯಬಾರದು. ನಮ್ಮ ಶ್ರಮಕ್ಕೆ ನಾವು ಮಾಡುತ್ತಿರುವ ಕೆಲಸಕ್ಕೆ ಮಾಧ್ಯಮದವರು ನೀಡುತ್ತಿರುವ ಬೆಂಬಲದಿಂದ ನಮಗೆ ಮತ್ತಿಷ್ಟು ಪುಷ್ಪ ಬಂದಂತಾಯಿತು. ಉತ್ತಮ ಫಲಿತಾಂಶ ಬರಲು ಮಾಧ್ಯಮದವರು ಸಹ ಎಂದರು.

ಜಿ ಪಂ . ಮಾಜಿ ಉಪಾಧ್ಯಕ್ಷ ಎಲ್. ಟಿ. ಪಾಟೀಲ್. ಅಜ್ಜಿ ಹಳ್ಳಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾತನಾಡಿ ಶಾಲಾ ಕಟ್ಟಡಗಳಿಗೆ ನಾವು ಶಾಸಕರೊಂದಿಗೆ ಇದ್ದಾಗ ನಾವು ವಿವಿಧ ಶಾಲೆಗಳ ಕೊಠಡಿಗಳ ಬೇಡಿಕೆ ಇಟ್ಟಿದ್ದೆವು ಶಾಸಕರು ಮಂಜೂರ್ ಮಾಡಿದ್ದಾರೆ ಅವರಿಗೆ ಹೃತ್ಪೂರ್ವಕ ವಂದನೆಗಳು. ಶಾಸಕರು ಹಾಗೂ ನಮ್ಮ ನಡುವೆ ಯಾವುದೇ ಭೇದ ಭಾವ ಇಲ್ಲ. ನಾವು ಕೇಳಿರುವ ಕೆಲಸಗಳನ್ನು ಶಾಸಕರು ಮಾಡಿಕೊಟ್ಟಿದ್ದಾರೆ. ಮುಂಜೂರಾದ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಕಟ್ಟಡ ಕಟ್ಟಬೇಕು ಎಂದು ಗುತ್ತಿಗೆದಾರರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಕೃಷ್ಣ ಹಿರಿಹಳ್ಳಿ. ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಮ್ ನಾಯಕ್. ರಾಜು ಗುಮ್ಮಕ್ಕನವರ್ . ಕೆ ಚಿಂಚೋಡಿ ಗಲಬಿ ವಿನಯ್ ಸಂಗೂರ ಮಠ. ಸೇರಿದಂತೆ ಆಯಾ ಪಂಚಾಯತಿ ವ್ಯಾಪ್ತಿಯ ಹಿರಿಯರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಿರ್ಮಿತಿ ಯ ಸಹಾಯಕ ಇಂಜಿನಿಯರ್ ಸಂತೋಷ್ ಹಾಜರಿದ್ದರು.

ವರದಿ :. ಬಿ ಎಸ್ ತೋಟಯ್ಯನವರ

.

ಹೆಚ್ಚಿನ ಸುದ್ದಿ