Monday, June 29, 2026
Homeಜಿಲ್ಲಾ ಸುದ್ದಿಗಳುಚೈತನ್ಯ ಐಟಿಐ ಅಂತಿಮ ವರ್ಷದ ವಿದ್ಯಾರ್ಥಿ ತರಬೇತಿದಾರರಿಗೆ ಬೀಳ್ಕೊಡುವ ಸಮಾರಂಭ

ಚೈತನ್ಯ ಐಟಿಐ ಅಂತಿಮ ವರ್ಷದ ವಿದ್ಯಾರ್ಥಿ ತರಬೇತಿದಾರರಿಗೆ ಬೀಳ್ಕೊಡುವ ಸಮಾರಂಭ

ಮೂಡಲಗಿ, 27: ಸೋಶಿಯಲ್ ಜೂ. ಪಟ್ಟಣದ ಚೈತನ್ಯ ವೆಲ್ವೇರ್ ಸೊಸಾಯಿಟಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೈತನ್ಯ ಅಂತಿಮ ವರ್ಷದ , ತರಬೇತಿದಾರರಿಗೆ ಬೀಳ್ಕೊಡುವ ಸಮಾರಂಭವು ನಡೆಯಿತು.

ಚೈತನ್ಯ ಐಟಿಐ ಪ್ರಾಚಾರ್ಯ ಎಸ್.ಬಿ. ಕುಳ್ಳೋಳಿ ಅವರು ಸಂಸ್ಥೆಯ ಸಾಧನೆಗಳನ್ನು ವಿವರಿಸಿದರು. ಕಳೆದ ಆರು ವರ್ಷಗಳಿಂದ ಕೇಂದ್ರ ಸರ್ಕಾರದ ಅಖಿಲ ಭಾರತ ವೃತ್ತಿ ಪರೀಕ್ಷೆಗಳಲ್ಲಿ ಸಂಸ್ಥೆಯು ಶೇ.100 ಫಲಿತಾಂಶ ದಾಖಲಿಸಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಯಬಾಗ ಪಾಲಿಟೆಕ್ನಿಕ್ ಮೆಕ್ಯಾನಿಕಲ್ ಮುಖ್ಯಸ್ಥರಾದ ಕಾಲೇಜಿನ ಎಸ್ ಎಸ್ ನಿಡಗುಂದಿ ಮಾತನಾಡಿ, ಐಟಿಐ ನಂತರದ ಉನ್ನತ ಶಿಕ್ಷಣ, ಹಾಗೂ ಉದ್ಯೋಗಾವಕಾಶಗಳ ಕುರಿತು ತರಬೇತಿದಾರರಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ ಎಸ್‌. ಎಂ.ಕಮದಾಳ ಅವರು ಮಾತನಾಡಿ, ವೃತ್ತಿಪರ ಶಿಕ್ಷಣವು ಯುವಕರಿಗೆ ಸ್ವಾವಲಂಬಿ ಬದುಕಿನ ದಾರಿಯನ್ನು ತೋರಿಸುತ್ತದೆ. ತರಬೇತಿದಾರರು ತಮ್ಮ ಕೌಶಲ್ಯವನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಉದಯಕುಮಾರ ಆರ್. ಜೋಕಿ, ಚೈತನ್ಯ ಅರ್ಬನ್ ಬ್ಯಾಂಕಿನ ಅಧ್ಯಕ್ಷರು. ರಾಜ್ಯ ಸಹಕಾರ ಸಂಘ ಮಹಾಮಂಡಳದ ಸದಸ್ಯ ತಮ್ಮಣ್ಣ ಕೆಂಚರಡ್ಡಿ, ವಿಜಯಎಸ್. ಹೊರಟ್ಟಿ, ತಾಲೂಕಾ ಶಿಕ್ಷಕರ ಸಹಕಾರ ಸಂಘದ ಅದ-ಕ್ಷ ವೈ.ಬಿ. ಪಾಟೀಲ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಆರ್ ವೈ ನಾಯಕ ಸ್ವಾಗತಿಸಿದರು. ಟಿ.ಆರ್. ಝಾರೆ, ಶಿವಾನಂದ ಪೂಜೇರಿ, ದೀಪಾ ಕಲ್ಯಾಣಿ ನಿರೂಪಿಸಿದರು. ಜಿತೇಂದ್ರ ಸಮಾಜೆ ವಂದಿಸಿದರು.

ವರದಿಗಾರರು:ಭರತ ಗೋಣಿ

ಹೆಚ್ಚಿನ ಸುದ್ದಿ