Sunday, July 26, 2026
Homeಕ್ರೈಂ ಸುದ್ದಿಗಳುಪೊಲೀಸ್ ಇಲಾಖೆಯ ಕಣ್ಣೆದುರೇ ಅಕ್ರಮಗಳ ಜಾತ್ರೆ! ನಾರಾಯಣಪುರ ಪಿಎಸ್‌ಐ ಮೇಲೆ ಭ್ರಷ್ಟಾಚಾರದ ಆರೋಪ : ಸಾಕ್ಷ್ಯಗಳಿದ್ದರೂ...

ಪೊಲೀಸ್ ಇಲಾಖೆಯ ಕಣ್ಣೆದುರೇ ಅಕ್ರಮಗಳ ಜಾತ್ರೆ! ನಾರಾಯಣಪುರ ಪಿಎಸ್‌ಐ ಮೇಲೆ ಭ್ರಷ್ಟಾಚಾರದ ಆರೋಪ : ಸಾಕ್ಷ್ಯಗಳಿದ್ದರೂ ಕ್ರಮವಿಲ್ಲವೇಕೆ?

ಯಾದಗಿರಿ: ಜಿಲ್ಲೆಯ ನಾರಾಯಣಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆex DX ಹದಗೆಟ್ಟಿದ್ದು, ಸ್ವತಃ ರಕ್ಷಕರೇ ಭಕ್ಷಕರಾಗಿ ಅಕ್ರಮ ದಂಧೆಕೋರರ ಜೊತೆ ಶಾಮೀಲಾಗಿದ್ದಾರೆ. ಮೇಲಿನಗಡ್ಡಿ ರಸ್ತೆಯ ಅಕ್ರಮ ಮರಳು ದಂಧೆ ಮತ್ತು ದೇವರಗಡ್ಡಿ ಜಾತ್ರೆಯ ಅಕ್ರಮಗಳ ಬಗ್ಗೆ ದಾಖಲೆ ಸಮೇತ ದೂರು ನೀಡಿದರೂ ಸಹ ಪೊಲೀಸರು ಅಕ್ರಮ ನಡೆದಿಲ್ಲವೆಂದು ಸುಳ್ಳು ಹಿಂಬರಹ ನೀಡುತ್ತಿರುವ ನಾರಾಯಣಪುರ ಪಿ ಎಸ ಆಯ ಅಯ್ಯಪ್ಪ ನವರ ಮೇಲೆ ಕ್ರಮ ತೆಗೆದುಕೋಳುವಂತೆ ಆಗ್ರಹ.

ಅಕ್ರಮ ಮರಳು ದಾಸ್ತಾನು ಜಾಗ

 ಕಣ್ಣಿಗೆ ಕಾಣದ ಅಕ್ರಮ ಮರಳು ದಾಸ್ತಾನು:
ಮೇಲಿನಗಡ್ಡಿಗೆ ಹೋಗುವ ರಸ್ತೆಯ ಪಕ್ಕದ ಹೊಲಗಳಲ್ಲಿ ನೂರಾರು ಲಾರಿ ಮರಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿದೆ. ನಿತ್ಯ ಇದೇ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುವ
ನಾರಾಯಣಪುರ ಪೊಲೀಸರಿಗೆ ರಸ್ತೆ ಪಕ್ಕದ ಬೃಹತ್ ಮರಳು ಗುಡ್ಡಗಳು ಕಾಣುತ್ತಿಲ್ಲವೇ? ಅಥವಾ ದಂಧೆಕೋರರಿಂದ ಮಾಮೂಲಿ ಪಡೆದು ಕಣ್ಣು ಮುಚ್ಚಿ ಕುಳಿತಿದ್ದಾರೆ ಪಿ ಎಸ ಆಯ್ ಅಯ್ಯಪ್ಪ ನವರು ಜಾತ್ರೆಯಲ್ಲಿ ‌ಅಕ್ರಮವೇ ನೇಡದಿಲ್ಲ ಎಂದು ಹಿಂಬರಹ ನೀಡಿ ಕಾನೂನು ದುರ್ಬಳಕೆ ಮಾಡಿಕೊಂಡಿದ್ದಾರೆ.

ದೇವರಗಡ್ಡಿ ಜಾತ್ರೆಯಲ್ಲಿ ರಾಜ ರೋಷವಾಗಿ ಮಾರಾಟವಾದ ಅಕ್ರಮ ಮದ್ಯ ಮತ್ತು ಗುಳಿ ಗುಳಿ ,ಖುಷಿ ಮರ್ಜಿ ಆಟದ ವಿಡಿಯೋ ಮತ್ತು ಪೋಟೊ ಸಾಕ್ಷಿಗಳು

ದೇವರಗಡ್ಡಿ ಜಾತ್ರೆಯಲ್ಲಿ ಮದ್ಯದ ಹೊಳೆ ಮತ್ತು ಜೂಜಾಟ: 
2026 ವರ್ಷದ ಆರಂಭ ಮೊದಲ ತಿಂಗಳಲ್ಲಿ ನಡೆದ ದೇವರಗಡ್ಡಿ ಜಾತ್ರೆಯಲ್ಲಿ ದೇವಿಯ ದರ್ಶನಕ್ಕೆ ಬಂದ ಭಕ್ತರನ್ನು ಚಿಕ್ಕ ಚಿಕ್ಕ ಮಕ್ಕಳನ್ನು  ಗುರಿಯಾಗಿಸಿಕೊಂಡು ರಾಜಾರೋಷವಾಗಿ ಅಕ್ರಮ ಮದ್ಯ ಮತ್ತು ನಕಲಿ ಮದ್ಯ ಮಾರಾಟ ಮಾಡಲಾಗಿದೆ. ಜೊತೆಗೆ ‘ಗುಳಿಗುಳಿ’ ಖುಷಿ ಮರ್ಜಿ, ಮತ್ತು ಇಸ್ಪಿಟ್‌ನಂತಹ ಜೂಜಾಟಗಳು ಪೊಲೀಸರ ಸಮ್ಮುಖದಲ್ಲೇ ನಡೆದಿವೆ. ಈ ಅಕ್ರಮಗಳ ಬಗ್ಗೆ ನ ಸ್ಪಷ್ಟವಾದ ವಿಡಿಯೋ ಮತ್ತು ಫೋಟೋ ಸಾಕ್ಷ್ಯಗಳಿದ್ದರೂ ಸಹ, ನಾರಾಯಣಪುರ ಪಿಎಸ್‌ಐ ಅಯ್ಯಪ್ಪ ಅವರು “ಜಾತ್ರೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ” ಎಂದು ಹಸಿ ಸುಳ್ಳಿನ ಹಿಂಬರಹ ನೀಡಿ ಅಕ್ರಮ ಮದ್ಯ ಮಾರಾಟಗಾರ ರಕ್ಷಣೆ ಮಾಡಿದ್ದಾರೆ ಇಂತವರಿಂದ ಸಾರ್ವಜನಿಕರು ನ್ಯಾಯ ಪಡೆಯಬಹುದೆ.ಇವರ ಮೇಲೆ ಉನ್ನತ ಮಟ್ಟದ ತನಿಖೆ ಮಾಡಬೇಕು ಎಂದು  ಜಾತ್ರೆಯಲಿ ಮದ್ಯ ಮಾರಾಟ ಅಕ್ರಮ ಚಟುವಟಿಕೆಗಳನ್ನು ತಡೆಯವಂತೆ ಇಲಾಖೆ  ವಿರುದ್ಧ ದೂರು ನೀಡಿದ್ದ ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷರು ಮತ್ತು ಪತ್ರಕರ್ತರಾದ ಅಮರೇಶಣ್ಣ ಕಾಮನಕೇರಿ ಆಗ್ರಸಿದ್ದಾರೆ.

ಜಾತ್ರೆಯಲ್ಲಿ ನೆಡುತ್ತಿರು ಅಕ್ರಮ ಮದ್ಯ ,ಜೂಜಾಟದ ವಿರುದ್ಧ ನಿರಂತರ ದೂರ ನೀಡದ ಪ್ರತಿಗಳು

ಅಕ್ರಮವೇ ನೆಡದಿಲ್ಲ ಎಂದು ಸುಳ್ಳು ನೀಡಿದ ಹಿಂಬರಹ

೩. ಹಣದ ಆಮಿಷಕ್ಕೆ ಬಲಿಯಾದರೇ ಪಿಎಸ್‌ಐ?:
ದೂರುದಾರರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಗೃಹ ಸಚಿವರಿಗೆ ದಾಖಲೆ ಸಮೇತ ದೂರು ನೀಡಿದರೂ ಸಹ, ಸ್ಥಳೀಯ ಪಿಎಸ್‌ಐ ಅಯ್ಯಪ್ಪ ಅವರು ದಂಧೆಕೋರರಿಗೆ ಬೆಂಬಲ ನೀಡುತ್ತಿದ್ದಾರೆ. ಅಕ್ರಮ ಮದ್ಯ ಮಾರಾಟಗಾರರಿಂದ ಹಣ ಪಡೆದು ಇಲಾಖೆಯ ಗೌರವವನ್ನು ಹರಾಜು ಹಾಕಿದ್ದಾರೆ ಜಾತ್ರೆಗೆ ಬಂದ ಮಹಿಳೆಯರು ಕುಡಕರ ಹಾವಳಿಯಿಂದ ಹೈರಾಣ ಆಗಿಹೋಗಿದ್ದಾರೆ ಸಾರ್ವಜನಿಕವಾಗಿ ಬಹಿರಂಗ ಅಕ್ರಮ ಮದ್ಯ ಮಾರಾಟ ಜೂಜಾಟ ಆಡಿಸಿದು ನೇಡಿದ್ದಾರೆ ಇಷ್ಟು ಬಹಿರಂಗವಾಗಿ  ಅಕ್ರಮ ಅಕ್ರಮ ಚಟುವಟಿಕೆಗಳಲ್ಲಿಗೆ ಅವಕಾಶ ಕಲ್ಪಿಸಿ  ಏನು ನಡೆದೆ ಇಲ್ಲ ಎಂದು ಮುಚ್ಚಿ ಹಾಕುವ ಪ್ರಯತ್ನ ಮಾಡಿವ ಇಂತ ಭ್ರಷ್ಟ ಪಿ ಎಸ ಆಯ ಅಯ್ಯಪ್ಪ ನವರಿಂದ ಜನರಿಗೆ ನ್ಯಾಯ ಸಿಗಲು ಸಾಧ್ಯವೇ..?ಡ್ಯಾಂ ಇರುವ ಅತೀ ಸೂಕ್ಷ್ಮ ಪ್ರದೇಶ  ಈ ಪ್ರದೇಶ ನಾರಾಯಣಪುರ ಡ್ಯಾಂ ಇದೆ ಡ್ಯಾಂಗೆ ಬಾಹ್ಯ ಬೆದರಿಕೆಗಳ ಕೂಡ ಇವೆ ಗುಪ್ತಚರ ಮಾಹಿತಿ ಕೂಡ ನಿಖರವಾಗಿ ಕಲೆ ಹಾಕಬೇಕುತ್ತದೆ ಕಣ್ಣೆದುರೆ ಹಣದಾಹಕ್ಕೆ ಬಹಿರಂಗ ಅಕ್ರಮ ಮದ್ಯ ಮಾರಾಟ ಮತ್ತು ಜೂಜಾಟ ಮಾಡಿದರು ನೇಡದಿಲ್ಲ ಎಂದು ಹಿಂಬರ ನೀಡುವದಾನೆ ಎಂದರೆ ಹಣ ನೀಡಿದರೆ ಡ್ಯಾಂ ಗೆ ಅಪಾಯ ಸೃಷ್ಟಿ ಹಿಂಜರಿಯುವದಿಲ್ಲ ಈ ಆಸಾಮಿ ಇಂತ ಭ್ರಷ್ಟ ಪಿ ಎಸ ಆಯ ಮೇಲೆ ಕಾನೂನು ಕ್ರಮ ಕೈಗೊಳ್ಳದಿದ್ದರೆ  ಡ್ಯಾಂ ಭದ್ರತೆಗೂ ಅಪಾಯ ತಪ್ಪಿದಲ್ಲ

ಸಾರ್ವಜನಿಕರ ಆಗ್ರಹ:
ಸಾಕ್ಷ್ಯಗಳಿದ್ದರೂ ದೂರು ದಾಖಲಿಸದ ಮತ್ತು ಸುಳ್ಳು ಮಾಹಿತಿ ನೀಡಿ ಹಿರಿಯ ಅಧಿಕಾರಿಗಳನ್ನು ದಾರಿ ತಪ್ಪಿಸುತ್ತಿರುವ ಪಿಎಸ್‌ಐ ಅಯ್ಯಪ್ಪ ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಅಕ್ರಮ ಮರಳು ಮತ್ತು ಮದ್ಯ ದಂಧೆಯನ್ನು ಮಟ್ಟ ಹಾಕಬೇಕು.ರಾಜರೋಷವಾಗಿ ಅಕ್ರಮ ಮರಳು ಸಾಗಾಟ ಮಾಡುತ್ತುದ್ದಾರೆ ಜಾತ್ರೆಯಲ್ಲಿ ಬಹಿರಂಗ ಸರಾಯ ಮಾರಾಟ ಮಾಡುತ್ತಿದ್ದಾರೆ ಈ ಘಟನೆಗಳು ಪೋಲಿಸ ಇಲಾಖೆ ಮೇಲೆ ಇರುವ ನಂಬಿಕೆ ಕಳೆದುಕೋಳವದಕ್ಕಿಂತ ಮೊದಲು ರಾಜ್ಯ ಪೋಲಿಸ ಮಾಹಾ ನಿರ್ದೇಶಕರು ಕ್ರಮ ಕೈಗೋಳಬೇಕು ಎಂದು ಆಗ್ರಸಿದ್ದಾರೆ.

2025ರಲ್ಲಿ  ಮದ್ಯ ಮಾರಾಟ ತೆಡೆಯಿರಿ ಎಂದು ದೂರು ನೀಡಿದರು  ಅಂದಿನ ಪಿ ಎಸ ಆಯ ರಾಜಶೇಖರ ರಾಠೋಡ ರವರು ಅಕ್ರಮ ಮದ್ಯ ಮಾರಾಟಗಾರರಿಗೆ ಬಂಬಲಿಸಿ ಬಹಿರಂಗ ಅಕ್ರಮ ಮದ್ಯ ಮಾರಾಟ ಮಾಡಿಸಿದರು ಮಾರಾಟದ ವರದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದವು

ಹೆಚ್ಚಿನ ಸುದ್ದಿ