Wednesday, September 9, 2026
Homeಜಿಲ್ಲಾ ಸುದ್ದಿಗಳುಚನ್ನಮ್ಮನ ಕಿತ್ತೂರು ಬಸ್ ಘಟಕದಿಂದ ಕಿತ್ತೂರಿಂದ ಉಳಿವಿಗೆ ಬಸ್ಸ ಸಂಚಾರ ಬಂದ್ ಆಗಬಾರದು  ನಿರಂತವಾಗಿ ಪ್ರತಿ...

ಚನ್ನಮ್ಮನ ಕಿತ್ತೂರು ಬಸ್ ಘಟಕದಿಂದ ಕಿತ್ತೂರಿಂದ ಉಳಿವಿಗೆ ಬಸ್ಸ ಸಂಚಾರ ಬಂದ್ ಆಗಬಾರದು  ನಿರಂತವಾಗಿ ಪ್ರತಿ ದಿನ ಬಸ್ಸ ಸಂಚಾರ ಪ್ರಾರಂಭ ಮಾಡಬೇಕು ಎಂದು ರಾಣಿ ಚನ್ನಮ್ಮ ನವಭಾರತ ಸೇನೆ ಒತ್ತಾಯ…..

ಚನ್ನಮ್ಮನ ಕಿತ್ತೂರು- ಕಿತ್ತೂರಿನಿಂದ ಉಳವಿಗೆ ಮುಂಜಾನೆ 9-30 ಕ್ಕೆ ಬಸ್ ಬಿಡಲಾಗಿದೆ ಎಂದು ಹೇಳಲಾಗಿತ್ತು.ಒಂದು ದಿನ  ಬಸ್ ಬಿಟ್ಟರು ನಂತರ ಬಸ್ ಸಂಚಾರ ಬಂದ್ ಮಾಡಲಾಗಿತ್ತು.‌ ನಂತರ ಮತ್ತೆ ಬಸ್ ಸಂಚಾರ ಆರಂಭ ಮಾಡಲಾಗಿದೆ ಅಂತ ಮಾಹಿತಿ ಬಂದಿದೆ. ಆದರೆ ಚನ್ನಮ್ಮನ ಕಿತ್ತೂರು  ಬಸ್ ನಿಲ್ದಾಣದಿಂದ  ಉಳವಿಗೆ ಬಸ್ ಸಂಚಾರ ಆರಂಭ ಆಗಿದೆ ಅಂತ ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ಸಿಗುತ್ತಿಲ್ಲ ಕಾರಣ ಇದರ ಬಗ್ಗೆ ಸರಿಯಾಗಿ ಪ್ರಚಾರ ಆಗುತ್ತಿಲ್ಲ ವಾಯುವ್ಯ ಕರ್ನಾಟಕ ಸಾರಿಗೆ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ಕಿತ್ತೂರ ಬಸ್ ನಿಲ್ದಾಣದಲ್ಲಿ  ಪ್ರತಿ ದಿನ ಕಿತ್ತೂರನಿಂದ ಉಳವಿಗೆ ಬಸ್ ಸಂಚಾರ ಪ್ರಾರಂಭ  ಆಗಿದೆ ಅಂತ ವೇಳೆ ಸಮೇತ ಬೋರ್ಡ್ ಹಾಕಬೇಕು. ಎಂದು ರಾಣಿ ಚನ್ನಮ್ಮ ನವಭಾರತ ಸೇನೆ ರಾಜ್ಯ ಸಂಚಾಲಕರಾದ ಬಸವರಾಜ ಭೀಮರಾಣಿ ಅವರು ಹೇಳಿದರು.
ಮನವಿ ಸಲ್ಲಿಸಿ ನಂತರ ಮಾತನಾಡಿದ ರಾಣಿ ಚನ್ನಮ್ಮ ನವಭಾರತ ಸೇನೆ ರಾಜ್ಯ ಉಪಾಧ್ಯಕ್ಷರಾದ ಜಗದೀಶ ಕಡೋಲಿ ಅವರು ಮಾತನಾಡಿ.  ಯಾವುದೇ ಕಾರಣಕ್ಕೂ ಬಸ್ ಸಂಚಾರ ಬಂದ್ ಆಗಬಾರದು.
ಕಿತ್ತೂರಿನಿಂದ ಮುಂಜಾನೆ 9-30 ಬಿಟ್ಟು ಉಳವಿಗೆ ಮಧ್ಯಾಹ್ನ 1-30 ಕ್ಕೆ ತಲುಪುತ್ತದೆ.  ನಂತರ ಅಲ್ಲಿಂದ 2-30 ಕ್ಕೆ ಬಸ್ ಬಿಡುತ್ತದೆ. ಅದಕ್ಕೆ 2-30 ಬದಲಾಗಿ  3 ಘಂಟೆಗೆ ಬಸ್ ಬಿಡಬೇಕು ಭಕ್ತರ ಅನೂಕೂಲಕ್ಕಾಗಿ ವೇಳೆಯನ್ನು ಬದಲಾವಣೆ ಮಾಡಬೇಕು. ಶ್ರಾವಣ ಮಾಸ ಮುಗಿದ ಮೇಲೆ ಕಿತ್ತೂರಿಂದ ಉಳಿವಿಗೆ ಬಸ್ಸ ಸಂಚಾರ ಬಂದ್ ಆಗಬಾರದು  ನಿರಂತವಾಗಿ ಪ್ರತಿ ದಿನ ಬಸ್ಸ ಸಂಚಾರ ಪ್ರಾರಂಭ ಮಾಡಬೇಕು

ಕಿತ್ತೂರಿನಿಂದ ಮುಂಜಾನೆ ಬೋರಣಿಕಿ ಎಲ್ಲಮ್ಮನ ಗುಡ್ಡಕ್ಕೆ ಬಸ್ ಹೋಗುತ್ತಿತ್ತು ಆದರೆ ಈ ಬಸ್ ಸಂಚಾರ ಬಂದ್ ಆಗಿ ಬಹಳ ವರ್ಷ ಆಯ್ತು ಕಿತ್ತೂರಿನಿಂದ ಮತ್ತು ಸುತ್ತಮುತ್ತಲಿನ ಗ್ರಾಮದಿಂದ ಎಲ್ಲಮ್ಮ ಭಕ್ತರು ಎಲ್ಲಮ್ಮನ ಗುಡ್ಡಕ್ಕೆ ಹೊಗುವದಕ್ಕ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಕಿತ್ತೂರಿ ಘಟಕದಿಂದ  ಎಲ್ಲಮ್ಮನ ಗುಡ್ಡಕ್ಕೆ ಬಸ್ ಸಂಚಾರ ಆರಂಭ ಮಾಡಬೇಕು. ಎಂದು ರಾಣಿ ಚನ್ನಮ್ಮ ನವಭಾರತ ಸೇನೆ ಒತ್ತಾಯ. ಬಸವರಾಜ ಭೀಮರಾಣಿ ರಾಜ್ಯ ಸಂಚಾಲಕರು ಮತ್ತು ಜಗದೀಶ ಕಡೋಲಿ ಏಕಾಂಗಿ ಹೋರಾಟಗಾರರು ರಾಜ್ಯ ಉಪಾಧ್ಯಕ್ಷರು ಆಗ್ರಹಿಸಿದರು….

ನಿರಂತರ ಬಸ್ಸ ಸಂಚಾರ ಆರಂಭ ಮಾಡುವದಕ್ಕ ಸಿಬ್ಬಂದಿ ಕೊರತೆ ಇದೆ ಅಂತ ಕಿತ್ತೂರಿನ ಬಸ್ಸ ಡಿಪೋ ಮ್ಯಾನೇಜರ್ ಅವರು ಹೇಳಿದರು.

ಕೊಡಲೇ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಕ ಮಾಡಬೇಕು ಎಂದು ರಾಣಿ ಚನ್ನಮ್ಮ ನವಭಾರತ ಸೇನೆ ಒತ್ತಾಯ

ಹೆಚ್ಚಿನ ಸುದ್ದಿ