ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನವರ 906 ನೇಯ ಜಯಂತಿಯನ್ನು ಜ.31 ರಂದು ಬೆಳಗಾವಿಯ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಬೆಳಗಾವಿ ಜಿಲ್ಲಾ ಕೋಳಿ-ಬೆಸ್ತ ಸಮಾಜ ಸಂಘದವತಿಯಿಂದ ಆಯೋಜಿಸಲಾಗಿದೆ ಎಂದು ಕೋಳಿ-ಬೆಸ್ತ ಸಮಾಜದ ಹುಕ್ಕೇರಿ ತಾಲೂಕಾ ಅಧ್ಯಕ್ಷರಾದ ಕಿಶೋರ ಶಿರಗೆ ಅವರು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಗಾವಿ ಜಿಲ್ಲಾ ಕೋಳಿ- ಬೆಸ್ತ ಸಮಾಜ ಸಂಘದ ಅಧ್ಯಕ್ಷರಾದ ದಿಲೀಪ್ ಕುರಂದವಾಡಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವು ನಡೆಲಿದ್ದು, ಅಂದು ಬೆಳಿಗ್ಗೆ 7:30ಕ್ಕೆ ಕೋಟೆ ಕೆರೆಯಿಂದ ಕಾರ್ಯಕ್ರಮದ ವೇದಿಕೆ ವರೆಗೂ ಶೋಭಾಯಾತ್ರೆ ನಡೆಯಲಿದೆ. ಇದೇ ಸಂಧರ್ಭದಲ್ಲಿ 8 ರಿಂದ 10 ತರಗತಿಯ ವಿದ್ಯಾರ್ಥಿಗಳಿಗೆ ಶ್ರೀ ಅಂಬಿಗರ ಚೌಡಯ್ಯನವರ ವಚನಗಳು ಮತ್ತು ಅವುಗಳ ಪ್ರಸ್ತುತತೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಕೋಳಿ-ಬೆಸ್ತ ಹಾಗೂ ಅಂಬಿಗ ಸಮಾಜದ ಇತಿಹಾಸ ಮತ್ತು ಪ್ರಸ್ತುತ ಸಿಗಳ ಬಗ್ಗೆ ಪ್ರಬಂಧ ಸ್ಪರ್ಧೆಯಲ್ಲಿನ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಲಿದ್ದು, ಬೆಳಗಾವಿ ಜಿಲ್ಲೆಯ ಕೋಳಿ-ಬೆಸ್ತ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಹಾಜರಾಗಬೇಕಾಗಿ ವಿನಂತಿ ಎಂದರು. ಈ ವೇಳೆ ಸಮಾಜದ ಮುಖಂಡರಾದ ರಾಜು ಕುರಂದವಾಡೆ, ಜೀವನ ಶಿರಗೆ, ವೀರಭದ್ರ ದುಂಡಗೆ, ರಾಜೇಶ್ವರ ಕೋಳಿ, ಶಿವರಾಜ ಕೋಳಿ ಇದ್ದರು.


