Sunday, February 8, 2026
Homeಕ್ರೀಡೆಕೀರಣ್ ವನಹಳ್ಳಿ ಅಥ್ಲೆಟಿಕ್ ಕ್ರೀಡೆಯಲ್ಲಿ ಹಾವೇರಿ ವಿಶ್ವವಿದ್ಯಾಲಯ ತಂಡಕ್ಕೆ ಆಯ್ಕೆ..

ಕೀರಣ್ ವನಹಳ್ಳಿ ಅಥ್ಲೆಟಿಕ್ ಕ್ರೀಡೆಯಲ್ಲಿ ಹಾವೇರಿ ವಿಶ್ವವಿದ್ಯಾಲಯ ತಂಡಕ್ಕೆ ಆಯ್ಕೆ..

ಶಿಗ್ಗಾಂವಿ: ಶಿಗ್ಗಾಂವಿ ನಗರದಲ್ಲಿರುವ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕ್ರೀಡಾಪಟುಗಳು ಇತ್ತೀಚಿಗೆ   ಟಿ ಎಂ ಎ ಇ ಬಿ.ಪಿಎಡ್ ಮಹಾವಿದ್ಯಾಲಯ, ಹಾವೇರಿನಲ್ಲಿ ನಡೆದ ಅಥ್ಲೆಟಿಕ್ ಕ್ರೀಡೆಯಲ್ಲಿ ಹಾವೇರಿ ವಿಶ್ವವಿದ್ಯಾನಿಲಯ   ತಂಡದ ವಿ ವಿ ಆಯ್ಕೆಯಲ್ಲಿ ಶ್ರೀ ರಂಭಾಪುರಿ ಪದವಿ  ಮಹಾವಿದ್ಯಾಲಯದ ಕ್ರೀಡಾಪಟುಗಳು ಭಾಗವಹಿಸಿ ಪ್ರಥಮ ಬಿ, ಎ ವಿದ್ಯಾರ್ಥಿಯಾದ ಕೀರಣ್ ವನಹಳ್ಳಿ ಹಾವೇರಿ ವಿಶ್ವವಿದ್ಯಾಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ,ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ, ಬೆಂಗಳೂರು ಇವರ ಆಶ್ರಯದಲ್ಲಿ  ಮೂಡುಬಿದಿರೆನಲ್ಲಿ ನಡೆಯುವ ಅಖಿಲ ಭಾರತ  ಅಂತರ ವಿಶ್ವವಿದ್ಯಾನಿಲಯ ಅಥ್ಲೆಟಿಕ್ಸ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಇದು 11-1-2026 ರಿಂದ 17-1-2026 ವರಗೆ  ನಡೆಯಲಿದೆ,
ಈ ವಿದ್ಯಾರ್ಥಿಗೆ ಶ್ರೀಮದ್ ರಂಭಾಪುರಿ ಜಗದ್ಗುರುಗಳು ಅವರು ಶುಭಾ ಆಶೀರ್ವಾದಗಳನ್ನು ತಿಳಿಸಿದ್ದಾರೆ, ಹಾಗೂ  ಆಡಳಿತಾಧಿಕಾರಿಯವರು, ಕಾರ್ಯದರ್ಶಿಯವರು, ಆಡಳಿತ ಮಂಡಳಿಯ ಸದಸ್ಯರುಗಳು, ಪ್ರಾಚಾರ್ಯರು, ದೈಹಿಕ ಶಿಕ್ಷಣ ನಿರ್ದೇಶಕರು, ಬೋಧಕ ಮತ್ತು ಬೋಧಕ್ಕೆತರ ಸಿಬ್ಬಂದಿಯವರು, ಮತ್ತು ವಿದ್ಯಾರ್ಥಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.

ವರದಿಗಾರರು: ಸೋಮಶೇಖರ ಲಮಾಣಿ

ಹೆಚ್ಚಿನ ಸುದ್ದಿ