Saturday, July 4, 2026
HomeUncategorizedಹುಣಸಗಿ ಸಹಕಾರಿ ಭಾರತಿವತಿಯಿಂದ ಅಂತಾರಾಷ್ಟ್ರೀಯ ಸಹಕಾರ ದಿನ ಹಾಗೂ ಪತ್ರಿಕಾ ದಿನ ಆಚರಣೆ : ಬಸವರಾಜ...

ಹುಣಸಗಿ ಸಹಕಾರಿ ಭಾರತಿವತಿಯಿಂದ ಅಂತಾರಾಷ್ಟ್ರೀಯ ಸಹಕಾರ ದಿನ ಹಾಗೂ ಪತ್ರಿಕಾ ದಿನ ಆಚರಣೆ : ಬಸವರಾಜ ಮೇಲಿನ ಮನಿ.

ಹುಣಸಗಿ : ಶ್ರೀ ಲಕ್ಷ್ಮಣರಾವ್ ಇನಾಮದಾರ್ (ಜನಪ್ರಿಯವಾಗಿ ‘ವಕೀಲ್ ಸಾಹೇಬ್’ ಎಂದು ಕರೆಯಲ್ಪಡುವವರು) ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಹಿರಿಯ ಪ್ರಚಾರಕರಾಗಿದ್ದರು. ಇವರು 1978-79ರಲ್ಲಿ ದೇಶದಾದ್ಯಂತ ಮೌಲ್ಯಾಧಾರಿತ ಹಾಗೂ ನೈತಿಕ ಸಹಕಾರ ಚಳುವಳಿಯನ್ನು ಬಲಪಡಿಸುವ ಉದ್ದೇಶದಿಂದ ಮುಂಬೈನಲ್ಲಿ “ಸಹಕಾರ ಭಾರತಿ” ಸಂಸ್ಥೆಯನ್ನು ಸ್ಥಾಪಿಸಿದರು.

ಭಾರತದ ಸಹಕಾರಿ ರಂಗದ ಪಿತಾಮಹ ಎಂದು ಪ್ರಸಿದ್ಧರಾದ ಶ್ರೀ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ್ ಅವರು ಏಷ್ಯಾ ಖಂಡದಲ್ಲೇ ಪ್ರಪ್ರಥಮ ಸಹಕಾರಿ ಸಂಘವನ್ನು 1905ರಲ್ಲಿ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ಸ್ಥಾಪಿಸಿದರು..

ಸಹಕಾರ ಭಾರತಿ ಯಾದಗಿರಿ ಹುಣಸಗಿ ತಾಲ್ಲೂಕಿನ ಸಹಕಾರಿ ಭಾರತಿ ವತಿಯಿಂದ ಹಮ್ಮಿಕೊಂಡಿರುವಾಂತ ಅಂತಾರಾಷ್ಟ್ರೀಯ ಸಹಕಾರ ದಿನ ಹಾಗೂ ಪತ್ರಿಕಾ ದಿನ ಸಭೆಯಲ್ಲಿ ಬಸವರಾಜ ಮೇಲಿನ ಮನಿ, ಜಿಲ್ಲಾ ಅಧ್ಯಕ್ಷರು ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡರು,

ಯಾದಗಿರಿ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಸಹಕಾರಿ ಬಗ್ಗೆ ಬಸವರಾಜ ಮೇಲಿನ ಮನಿಯವರು ಸಾರ್ವಜನಿಕರಿಗೆ ತಿಳಿಪಡಿಸುವ ಸಾಹಸ ಮಾಡಿದ್ದಾರೆ. ಸಹಕಾರ ಅಂದರೆ ಸಂಘ, ಸಂಸ್ಥೆ ಹಾಗೂ ಸಾರ್ವಜನಿಕರ ಒಗ್ಗಟ್ಟಿರುವ ಕೆಲಸ ಈ ಸಂಘದ ಮುಖ್ಯ ಉದ್ದೇಶ ಇದಾಗಿದೆ.

ನಾಲ್ಕು ಅಂಶಗಳು : ಸಂಘಟನಾತ್ಮಕ ಕಾರ್ಯಗಳು, ರಚನಾತ್ಮಕ ಕಾರ್ಯಗಳು, ಆಂದೋಲನಾತ್ಮಕ ಕಾರ್ಯಗಳು, ಪ್ರಾತಿನಿತ್ಯತ್ಮಕ ಕಾರ್ಯಗಳು ಈ ರೀತಿಯ ಗುಣಾತ್ಮಕ ದೂರ ದೃಷ್ಟಿಯ ನೆಲೆಯಾಗಿ ಸಹಕಾರ ಭಾರತಿ ಕಾರ್ಯನಿರ್ವಹಿಸುತ್ತಿದೆ.

ಈ ಸಭೆಯಲ್ಲಿ ಸನ್ಮಾನಿತರನಾಗಿ ವೆಂಕಟಗಿರಿ ದೇಶಪಾಂಡೆ, ಬಾಲಪ್ಪ ಕುಪ್ಪಿ, ಗವಿಸಿದ್ದಪ್ಪ ಹೂಗಾರ್, ಶಾಂತಿನಾಥ ಒಣಕುದುರಿ , ಶ್ರೀಮತಿ ರೇಣುಕಾ ಪೌಜಧಾರ್, ಶ್ರೀಮತಿ ಶ್ರೀದೇವಿ ಮೆಟ್ಟಿ,

ಸಹಕಾರ ಭಾರತಿ ಯಾದಗಿರಿ ಹುಣಸಗಿ ತಾಲ್ಲೂಕಿನ ಸಹಕಾರಿ ಭಾರತಿ ವತಿಯಿಂದ ಹಮ್ಮಿಕೊಂಡಿರುವಾಂತ ಅಂತಾರಾಷ್ಟ್ರೀಯ ಸಹಕಾರ ದಿನ ಹಾಗೂ ಪತ್ರಿಕಾ ದಿನ ಸಭೆಯಲ್ಲಿ ಬಸವರಾಜ ಮೇಲಿನ ಮನಿ ಜಿಲ್ಲಾ ಅಧ್ಯಕ್ಷರು ಅದ್ಯಕ್ಷತೆಯನ್ನು ವಹಿಸಿಕೊಂಡರು, ಅತಿಥಿಯಾಗಿ ಹುಣಸಗಿ ತಾಲ್ಲೂಕು ಅಧ್ಯಕ್ಷರು ಶ್ರೀಮತಿ ಲಲಿತಾ. ಎನ್. ವೈಲಿ, ಶ್ರೀಮತಿ ವಿಜಯಲಕ್ಷ್ಮಿ ದೇಸಾಯಿ ಜಿಲ್ಲಾ ಮಹಿಳಾ ಪ್ರಮುಖರು, ದೇವಿಂದ್ರಪ್ಪ ಬಡಿಗೇರಿ ಶಾಹಪುರ್ ತಾಲ್ಲೂಕಿನ ಅಧ್ಯಕ್ಷರು , ಅಮರೇಶ ವೈಲಿ ಜಿಲ್ಲಾ ಪ್ರಧಾನ ಕಾರ್ಯದಶಿ, ಪ್ರಾಥನ ಗೀತೆ ಹಾಡಿದವರು ಧನ್ಯಶ್ರೀ ಮುರಳ, ಸ್ವಾಗತ ಕೋರಿದವರು ಅರ್ಪಿತಾ ವೈಲಿ,ನಿರೂಪಕರು ಮಹಾಂತೇಶ ಮುರಳ ,ವಂದನಾರ್ಪಣೆ ಪ್ರಭು ನೂಲಿನ್, ಹರೀಶ ಹರೀಶ್ ಬೀರಧರ್.ಉಪಸ್ಥಿತರಿದ್ದರು

ಜಿಲ್ಲಾ ವರದಿಗಾರ : ಶಿವು ರಾಠೋಡ.

ಹೆಚ್ಚಿನ ಸುದ್ದಿ