ಉತ್ತರ ಕನ್ನಡ : ಮುಂಡಗೋಡ ತಾಲೂಕಾ ಅನುಧಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟ ಮುಂಡಗೋಡ ಮತ್ತು ಕರ್ನಾಟಕ ಮಾದ್ಯಮಿಕ ಶಾಲಾ ಕಾಲೇಜುಗಳ ನೌಕರರ ಸಂಘ ಮುಂಡಗೋಡ ತಾಲೂಕ ಜಿಲ್ಲೆ : ಉತ್ತರ ಕನ್ನಡ ಇವರು ದಿನಾಂಕ 04-07-2026 ರಂದು ಶನಿವಾರ ಮದ್ಯಾಹ್ನ 1 ಗಂಟೆಗೆ ಎರಡು ಸಂಘಗಳ ಸಂಯುಕ್ತ ಆಶ್ರಯದಲ್ಲಿ ಮನವಿ ಸಲ್ಲಿಸಿದರು.
ಅನುಧಾನಿತ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ದಿನಾಂಕ :01-04-2006 ರಿಂದಾ ನೇಮಕಾತಿ ಹೊಂದಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಪಿಂಚಣಿ ಯೋಜನೆಯನ್ನು ಸರ್ಕಾರ ರದ್ದು ಪಡಿಸಿ NPS ನ್ನು ಜಾರಿಗೆ ತಂದು ನೌಕರರಿಗೆ ಅನ್ಯಾಯ ಮಾಡಿರುತ್ತದೆ.NPS ನ್ನು ರದ್ದು ಪಡಿಸಿ OPS ಅಂದರೆ ಹಳೆ ಪಿಂಚಣಿ ಯೋಜನೆ ಜಾರಿಗೆ ತರುಲು ಸರ್ಕಾರವುನ್ನ ಒತ್ತಾಯಿಸಿ ಮಾನ್ಯ ತಹಸೀಲ್ದಾರ ಮುಂಡಗೋಡ ರವರ ಮೂಲಕ ಮಾನ್ಯ ಮುಖ್ಯ ಮಂತ್ರಿಗಳು ಕರ್ನಾಟಕ ಸರ್ಕಾರ ಬೆಂಗಳೂರ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಎಸ್. ಪಕ್ಕೀರಪ್ಪ ಅಧ್ಯಕ್ಷರು ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟ ಮುಂಡಗೋಡ. ಕರ್ನಾಟಕ ಮಾದ್ಯಮಿಕ ನೌಕರರ ಸಂಘದ ಅಧ್ಯಕ್ಷರಾದ ಎಸ್. ಡಿ. ಮುಡೆಣ್ಣವರ ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸುಭಾಸ್ ಡೋರಿ, DSS ಪದಾಧಿಕಾರಿಗಳಾದ ಹನಮಂತ ಕಟ್ಟಿಮನಿ, ಜೂಜೆ ಸಿದ್ದಿ, ಹುಲಗಪ್ಪ ಬೋವಿವಡ್ಡರ, ಪರಶುರಾಮ ಪೂಜಾರ, ವೈ. ಬಿ. ಲಕ್ಷಮಣ್ಣ,ರಾಜು ಬುಟ್ಟಿಕೊರವರು, ಎನ್.ಎಲ್.ನರಸಿಂಹಮೂರ್ತಿ, ಎಲ್. ಟಿ.ಸುರೇಶ, ಪರಶುರಾಮ್ ಹರಿಜನ, ಅರಿಸಣಗೇರಿ,ಇಮ್ಮಮಸಾಬ್, ಸಿದ್ದಿ ಕೆಂದಲಗೇರಿ, ಈತರರು ಮತ್ತು ಶಾಲಾ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ನೌಕರರು ಉಪಸ್ಥಿತರಿದ್ದರು



ವರದಿಗಾರರು: ಬಸಯ್ಯ ತೋಟಯ್ಯನವರ
