Thursday, May 28, 2026
Homeಜಿಲ್ಲಾ ಸುದ್ದಿಗಳುಉತ್ತರ ಕನ್ನಡವಿಶ್ವ ಜೇನು ದುಂಬಿ ದಿನದ ಅಂಗವಾಗಿ ವೈಜ್ಞಾನಿಕ ಜೇನು ಬೇಸಾಯ ಪದ್ಧತಿಯ ಕುರಿತು ಜೇನುಕೃಷಿ ಆಸಕ್ತ...

ವಿಶ್ವ ಜೇನು ದುಂಬಿ ದಿನದ ಅಂಗವಾಗಿ ವೈಜ್ಞಾನಿಕ ಜೇನು ಬೇಸಾಯ ಪದ್ಧತಿಯ ಕುರಿತು ಜೇನುಕೃಷಿ ಆಸಕ್ತ ರೈತರಿಗೆ ತರಬೇತಿ ಕಾರ್ಯಕ್ರಮ ನಡೆಸಲಾಯಿತು…

ಮುಂಡಗೋಡ: ವಿಶ್ವ ಜೇನು ದುಂಬಿ ದಿನದ ಅಂಗವಾಗಿ ವೈಜ್ಞಾನಿಕ ಜೇನು ಬೇಸಾಯ ಪದ್ಧತಿಯ ಕುರಿತು ಜೇನುಕೃಷಿ ಆಸಕ್ತ ರೈತರಿಗೆ ತರಬೇತಿ ಕಾರ್ಯಕ್ರಮವನ್ನು ತೋಟಗಾರಿಕೆ ಇಲಾಖೆ, ಮುಂಡಗೋಡ ವತಿಯಿಂದ ದಿನಾಂಕ:27-05-2026 ರಂದು ಆಯೋಜಿಸಲಾಗಿದ್ದು, ಸದರಿ ತರಬೇತಿ ಕಾರ್ಯಕ್ರಮವನ್ನು ಕೆನರಾ ಬ್ಯಾಂಕ ದೇಶಪಾಂಡೆ ಆರ್‌ಸೆಟಿ, ಮುಂಡಗೋಡದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಂಡಗೋಡ ತಾಲೂಕ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀ ಕೃಷ್ಣ ಟಿ. ಕುಳ್ಳೂರ ರವರು ಪ್ರಾಸ್ತಾವಿಕವಾಗಿ ಮಾತನಾಡಿ “ಜೇನು ಸಾಕಾಣಿಕೆಯಿಂದ ರೈತರ ಆರ್ಥಿಕ ಮಟ್ಟ ಸುಧಾರಣೆಯಾಗುತ್ತದೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಜೇನು ಸಾಕಾಣಿಕೆಗೆ ಸಬ್ಸಿಡಿ ರೂಪದಲ್ಲಿ ಆರ್ಥಿಕ ಸಹಾಯ ನೀಡಲಾಗುತ್ತದೆ” ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ತಿಮ್ಮಣ್ಣ ಭಟ್, ಯಲ್ಲಾಪುರ ರವರು ಜೇನು ಕೃಷಿಯ ಕುರಿತು ರೈತರಿಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದರು.
ಅಥಿತಿಗಳಾಗಿ ಭಾಗವಹಿಸಿದ ಶ್ರೀ ಸಂಗಮೇಶ ಕೋಳಾನವರ ರವರು ನ್ಯಾಯವಾದಿಗಳು ಹಾಗೂ ಜೇನು ಕೃಷಿಕರಾಗಿದ್ದು ಜೇನು ಕೃಷಿಯಲ್ಲಿನ ತಮ್ಮ ಸುದೀರ್ಘ ಅನುಭವ, ಅಧ್ಯಯನ ಹಾಗೂ ಜೇನು ಕೃಷಿಯ ಲಾಭಗಳ ಕುರಿತು ರೈತರಿಗೆ ಸವಿವರವಾದ ಮಾಹಿತಿಯನ್ನು ನೀಡಿದರು,
ಇನ್ನೋರ್ವ ಅಥಿತಿಗಳಾಗಿ ಭಾಗವಹಿಸಿದ ಜಿಲ್ಲಾ ನಾರಿಶಕ್ತಿ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಪುಷ್ಪಾ ಗುಲ್ಮಾನವರ ರವರು ಜೇನು ಕೃಷಿಯಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡರು ಹಾಗೂ,
ಮತ್ತೋರ್ವ ಅಥಿತಿಗಳಾಗಿ ಭಾಗವಹಿಸಿದ ಶ್ರೀ ಸುರೇಶ ಕಲ್ಲೋಳ್ಳಿ, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷರು ಮಾತನಾಡಿ ಪರಿಶಿಷ್ಟ ಪಂಗಡದ ಅರಣ್ಯ ಭೂಮಿ ಹಕ್ಕು ಪತ್ರ ಹೊಂದಿರುವ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ನೀಡಲಾದ ಜೇನು ಪೆಟ್ಟಿಗೆ ಸಹಾಯಧನದ ಕುರಿತು ಹರ್ಷ ವ್ಯಕ್ತಪಡಿಸಿದರು,
ಮುಂಡಗೋಡ ತಾಲೂಕಿನ ಕೃಷಿ ಸಖಿಯರು ಹಾಗೂ ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಶ್ರೀ ರಮೇಶ ಜಿ, ಜಮಖಂಡಿ ಹಾಗೂ ರಾಮಪ್ಪ ನಡುವಿನಮನಿ, ಕೆನರಾ ಬ್ಯಾಂಕ ದೇಶಪಾಂಡೆ ಆರ್.ಸೆಟ್ (ರಿ) ಮುಂಡಗೋಡದ ಕ್ಷೇತ್ರಾಧಿಕಾರಿಗಳಾದ ಶ್ರೀ ಶಾಂತಕುಮಾರ ಹಾಗೂ ಜೇನು ಕೃಷಿ ಆಸಕ್ತ ಸುಮಾರು 50 ಕ್ಕೂ ಅಧಿಕ ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ವಿಡಿಯೋ ತುಣುಕು

ಹೆಚ್ಚಿನ ಸುದ್ದಿ