Tuesday, September 22, 2026
Homeಕೃಷಿವಿದ್ಯುತ್ ಖಾಸಗೀಕರಣ ನಿಲ್ಲಿಸುವಂತೆ ಮನವಿ ಸಲ್ಲಿಕೆ.ಚ ಕಿತ್ತೂರು: ವಿದ್ಯುತ್ ಖಾಸಗಿಕರಣ ಗೊಳಿಸುತ್ತಿರುವುದನ್ನು ತೀವ್ರವಾಗಿ ಖಂಡಿಸಿರುವ ಕಿತ್ತೂರು...

ವಿದ್ಯುತ್ ಖಾಸಗೀಕರಣ ನಿಲ್ಲಿಸುವಂತೆ ಮನವಿ ಸಲ್ಲಿಕೆ.ಚ ಕಿತ್ತೂರು: ವಿದ್ಯುತ್ ಖಾಸಗಿಕರಣ ಗೊಳಿಸುತ್ತಿರುವುದನ್ನು ತೀವ್ರವಾಗಿ ಖಂಡಿಸಿರುವ ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘ ಅದನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ತಹಸೀಲ್ದಾರರ ಮುಖಾಂತರ ಮನವಿ ಸಲ್ಲಿಸಿದರು.

ಕಿತ್ತೂರಿನ ತೆಹಸೀಲ್ದಾರ ಕಚೇರಿಯ ಮುಂದೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘದ ಅಧ್ಯಕ್ಷ ಎಂ, ಎಫ, ಜಕಾತಿ,” ಬೆಳೆಗಳಿಗೆ ಸರಿಯಾದ ಬೆಲೆ ಇಲ್ಲದೇ ರೈತ ಈಗಾಗಲೇ ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸುತ್ತಿದ್ದರೂ ಅದನ್ನು ಲೆಕ್ಕಿಸದೇ ಸರಕಾರ ವಿದ್ಯುತ್ ಖಾಸಗೀಕರಣ ಮಾಡಲು ಹೊರಟಿರುವುದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದುವರೆದು ಅವರು ಮಾತನಾಡಿ
“ಒಂದು ವೇಳೆ ನಮ್ಮ ಮನವಿಯನ್ನು ಕಡೆಗಣಿಸಿ ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಕೂಡ್ರಿಸಲು ಬಂದರೆ ಅದನ್ನು ನಾವು ಕಿತ್ತೊಗೆಯುತ್ತೇವೆ” ಎಂದು ಎಚ್ಚರಿಸಿದರು.


ನಂತರ ಕಿತ್ತೂರು ತೇಹಸೀಲ್ದಾರ ಕಲಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.ಪಿಎಸ್ಐ ಭರತ, ಎಸ್, ಹಾಗು ರೈತ ಮುಖಂಡರಾದ ಅಪ್ಪೇಶಿ ದಳವಾಯಿ, ವಿಜಯ ಶಿಂಧೆ, ಬಿಷ್ಟಪ್ಪ ಶಿಂಧೆ, ಕಲ್ಲಪ್ಪ ಕುಗಟಿ, ಪ್ರವೀಣ ಸರದಾರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ