Thursday, May 28, 2026
Homeಜಿಲ್ಲಾ ಸುದ್ದಿಗಳುಉತ್ತರ ಕನ್ನಡಭಟ್ಕಳ ತಟ್ಟೆಹಕ್ಕಲ ಹೊಳೆಯಲ್ಲಿ ಭೀಕರ ದುರಂತ: ಸಾ.ವಿನ ಸಂಖ್ಯೆ 11ಕ್ಕೆ ಏರಿಕೆ, ನಾಪತ್ತೆಯಾಗಿದ್ದ ಮಾದೇವ ನಾಯ್ಕ...

ಭಟ್ಕಳ ತಟ್ಟೆಹಕ್ಕಲ ಹೊಳೆಯಲ್ಲಿ ಭೀಕರ ದುರಂತ: ಸಾ.ವಿನ ಸಂಖ್ಯೆ 11ಕ್ಕೆ ಏರಿಕೆ, ನಾಪತ್ತೆಯಾಗಿದ್ದ ಮಾದೇವ ನಾಯ್ಕ ಶ.ವ ಪತ್ತೆ

​ಭಟ್ಕಳ: ತಾಲೂಕಿನ ತಟ್ಟೆಹಕ್ಕಲ ಹೊಳೆಯಲ್ಲಿ ಚಿಪ್ಪಿಕಲ್ಲು (ಕಪ್ಪೆಚಿಪ್ಪು) ಆರಿಸಲು ಹೋಗಿ ಸಂಭವಿಸಿದ ಭೀಕರ ಜಲ ದುರಂತದಲ್ಲಿ ಸಾ.ವನ್ನಪ್ಪಿದವರ ಸಂಖ್ಯೆ ಇದೀಗ 11ಕ್ಕೆ ಏರಿಕೆಯಾಗಿದೆ.

​ಭಾನುವಾರ ನಡೆದ ದುರಂತದಲ್ಲಿ ನಾಪತ್ತೆಯಾಗಿದ್ದ ಮಾದೇವ ಜಟ್ಟಪ್ಪ ನಾಯ್ಕ ಅವರ ಮೃ. ತದೇಹವನ್ನು ಪತ್ತೆ ಹಚ್ಚುವಲ್ಲಿ ಎನ್‌ಡಿಆರ್‌ಎಫ್ (NDRF) ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಇಂದು ಬೆಳಗ್ಗಿನಿಂದಲೇ ತೀವ್ರ ಶೋಧ ಕಾರ್ಯ ನಡೆಸಿದ್ದ ರಕ್ಷಣಾ ಸಿಬ್ಬಂದಿಗೆ ಮೃ. ತದೇಹ ಸಿಕ್ಕಿದೆ.
ಪತ್ತೆಯಾದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

​ದುರಂತ ಸಂಭವಿಸಿದ್ದು ಹೇಗೆ?
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ತಟ್ಟೆಹಕ್ಕಲ ಬಳಿ ಕಪ್ಪೆಚಿಪ್ಪು ಹೆಕ್ಕಲು ಒಂದೇ ಕುಟುಂಬ ಹಾಗೂ ನೆರೆಹೊರೆಯವರಾಗಿದ್ದ ಒಟ್ಟು 13 ಜನರು ನದಿಗೆ ಇಳಿದಿದ್ದರು. ಈ ವೇಳೆ ಏಕಾಏಕಿ ನೀರಿನ ಹರಿವು ಹೆಚ್ಚಾಗಿ, ಅಲೆಗಳ ಅಬ್ಬರಕ್ಕೆ ಸಿಲುಕಿ ನೀರುಪಾಲಾಗಿದ್ದಾರೆ. ಒಮ್ಮೆಲೆ ನೀರು ಬಂದ ಪರಿಣಾಮ ನೋಡನೋಡುತ್ತಿದ್ದಂತೆಯೇ 11 ಜೀವಗಳು ಜಲಸಮಾಧಿಯಾಗಿವೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆಸ್ಪತ್ರೆಯ ಶವಾಗಾರದ ಎದುರು ಮೃ. ತದೇಹಗಳನ್ನು ಕಂಡು ಕುಟುಂಬಸ್ಥರು ಕಣ್ಣೀರು ಹಾಕುತ್ತಿರುವ ದೃಶ್ಯ ಕಲ್ಲು ಕರಗಿಸುವಂತಿತ್ತು. ಮನೆಯ ಆಧಾರವಾಗಿದ್ದ ಮಹಿಳೆಯರು ಹಾಗೂ ಯುವಕರು ಒಂದೇ ಬಾರಿಗೆ ಶ. ವವಾಗಿ ಬಂದಿರುವುದು ಇಡೀ ಶಿರಾಲಿ ಮತ್ತು ಅಳ್ವೇಕೋಡಿ ಗ್ರಾಮವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಹೆಚ್ಚಿನ ಸುದ್ದಿ