ಕಿತ್ತೂರು: ಬೈಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲ, ರೋಗಿಗಳಿಗೆ ತುರ್ತು ಚಿಕಿತ್ಸೆ ಎಲ್ಲಿಗೆ ಹೋಗಬೇಕು ಎಂದು ನಮ್ಮ ಕೋಲಿ ನ್ಯೂಸ್ ಟಿವಿ ಚಾನೆಲ್ ನಲ್ಲಿ ಜೂನ್ 03 ವರದಿ ಮಾಡಿತ್ತು, ಆರೋಗ್ಯ ಇಲಾಖೆ ಎಚ್ಚೆತ್ತು ಬೈಲೂರು ಗ್ರಾಮದ ಸಮುದಾಯದ ಆರೋಗ್ಯ ಇಲಾಖೆಗೆ ಡಾ|ಪ್ರಕಾಶ ಪವಾರ ವೈದ್ಯರನ್ನು ನಿಯೋಜನೆ ಮಾಡಿದ್ದಾರೆ..ಆದೇಶ ಪ್ರತಿ ಕೊಡ ಬಿಟ್ಟಿದ್ದಾರೆ
ಅಧೀಕೃತ ಜ್ಞಾಪನಾ ಪತ್ರ ..

ವಿಷಯ: ಪ್ರಾಥಮಿಕ ಆರೋಗ್ಯ ಕೇಂದ್ರ ಬೈಲೂರ ಇಲ್ಲಿಗೆ ವೈದಾಧಿಕಾರಿಗಳ ನಿಯೋಜನೆ ಕುರಿತು.
ಉಲ್ಲೇಖ: ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳು ಬೆಳಗಾವಿ ಇವರ ಪೋನ್ ಕರೆ ಆದೇಶದ ಮೆರೆಗೆ
ಮೇಲ್ಕಾಣಿಸಿದ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂದಿಸಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರ ಬೈಲೂರ ಇಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಈ ಕೆಳಕಾಣಿಸಿದ ಒಂದು ವರ್ಷದ ಗ್ರಾಮೀಣ ಕಡ್ಡಾಯ ಸೇವೆ ವೈದ್ಯರನ್ನು ಕರ್ತವ್ಯ ನಿರ್ವಹಿಸಲು ತಕ್ಷಣ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ನಿಯೋಜಿಸಿ ಆದೇಶಿಸಿದೆ.
ಡಾ|ಪ್ರಕಾಶ ಪವಾರ
ನಮ್ಮ ಕ್ಲಿನೀಕ ಸೋಮವಾರ ಪೇಠ ಕಿತ್ತೂರ ಇಲ್ಲಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಬೈಲೂರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ..
ಸದರಿ ನಿಯೋಜಿತ ವೈದ್ಯಾಧಿಕಾರಿಗಳು ಪ್ರಾಥಮಿಕ ಇವರಲ್ಲಿ ಕರ್ತವ್ಯಕ್ಕೆ ಹಾಜರಾಗಿ ಅವರ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸಲು ಸೂಚಿಸಿದ್ದಾರೆ…
ನಾವು ಜೂನ್ 3 ರಂದು ವರದಿ ಮಾಡಿದ ವರದಿ ಈ ಕೆಳಗೆ ಇದೇ ನೋಡಬಹುದು
ಸಂಪಾದಕರು: ರಾಮಚಂದ್ರಪ್ಪ ಪೂಜೇರ (ಚನ್ನಮ್ಮನ ಕಿತ್ತೂರು)

