ಚನ್ನಮ್ಮನ ಕಿತ್ತೂರು: ಬೈಲೂರು ಗ್ರಾಮದಲ್ಲಿ ಸರ್ಕಾರ ಸಾರ್ವಜನಿಕರ ಹಿತ ದೃಷ್ಟಿಯಿಂದ ಆರೋಗ್ಯಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿ ಸರ್ಕಾರಿ ಸಮುದಾಯ ಆರೋಗ್ಯ ಆಸ್ಪತ್ರೆಗಳನ್ನು ನಿರ್ಮಾಣ ಮಾಡಿದೆ. ಹಾಗೂ ಈ ಆಸ್ಪತ್ರೆ ಸುಮಾರು 10 ಹಳ್ಳಿಗಳನ್ನು ಒಳಗೊಂಡಿದ್ದೆ. ಆದರೆ ಇಲ್ಲಿ ವೈದ್ಯರು ಇರುವುದಿಲ್ಲ.
ಇಲ್ಲಿ ವೈದ್ಯರೇ ಇಲ್ಲದೇ ಕುರ್ಚಿ ಖಾಲಿಯಿದ್ದು ಆಸ್ಪತ್ರೆಗೆ ಬರುವ ಒಳ ಮತ್ತು ಹೊರ ರೋಗಿಗಳು ಪರದಾಡುವಂತ ಸ್ಥಿತಿ ಉಂಟಾಗಿದೆ. ಆಸ್ಪತ್ರೆಗೆ ಸಮೀಪದ ಊರಿನಲ್ಲಿ ಯಾರಿಗಾದರೂ ತುರ್ತು ಚಿಕಿತ್ಸೆ (Emergency) ರೋಗಿಗಳಿಗೆ ಚಿಕಿತ್ಸೆ ಬೇಕಾದರೆ ಅವರು ಏನು ಮಾಡಬೇಕು.
ಈ ಆಸ್ಪತ್ರೆ ಬಿಟ್ಟರೆ ಸಮೀಪದ ಸುಮಾರು 15 ಕಿ.ಮೀ ದೂರ ಇರುವ ಚನ್ನಮ್ಮನ ಕಿತ್ತೂರಿಗೆ ಬರಬೇಕು ರೋಗಿಗಳು.
ಬೈಲೂರು ಗ್ರಾಮದ ಸಾರ್ವಜನಿಕರು ನಮ್ಮ ಸಮುದಾಯದ ಆಸ್ಪತ್ರೆಗಳಲ್ಲಿ ಒಳ್ಳೋಳ್ಳೆ ವೈದ್ಯರನ್ನು ನೇಮಕ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದಾರೆ ಹಾಗೂ ಬೈಲೂರು ಗ್ರಾಮದಲ್ಲಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಗಮನ ಹರಿಸಿ ವೈದ್ಯರನ್ನು ನೇಮಕ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಆರೋಗ್ಯ ಇಲಾಖೆ ಬೈಲೂರು ಗ್ರಾಮದ ಸಮುದಾಯದ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಕ ಮಾಡಲಿಲ್ಲ ಅಂದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ…
ಆರೋಗ್ಯ ಇಲಾಖೆ ಚನ್ನಮ್ಮನ ಕಿತ್ತೂರು ತಾಲೂಕಿನ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಇರುವ ಸಮುದಾಯದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಕುಂದು ಕೊರತೆಗಳನ್ನು ನೀಗಿಸಬೇಕು ಎಂದು ಸುತ್ತ ಮುತ್ತಲಿನ ಗ್ರಾಮದ ಸಾರ್ವಜನಿಕರು ಆರೋಗ್ಯ ಇಲಾಖೆಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ…
ವರದಿಗಾರ: ಭರತ ಪೂಜಾರಿ
ಸಂಪಾದಕರು: ರಾಮಚಂದ್ರಪ್ಪ ಪೂಜೇರ (ಚನ್ನಮ್ಮನ ಕಿತ್ತೂರು)
