Saturday, May 30, 2026
Homeರಾಜಕೀಯನೂತನ ಸಿಎಂ ಪದಗ್ರಹಣಕ್ಕೆ ಸಿದ್ಧತೆ ಚುರುಕು, ಬೆಂಗಳೂರಿಗೆ ಬರಲಿವೆ 100 ಡಿವಿ ವಾಹನಗಳು

ನೂತನ ಸಿಎಂ ಪದಗ್ರಹಣಕ್ಕೆ ಸಿದ್ಧತೆ ಚುರುಕು, ಬೆಂಗಳೂರಿಗೆ ಬರಲಿವೆ 100 ಡಿವಿ ವಾಹನಗಳು

ರಾಜ್ಯದ ನೂತನ ಸಿಎಂ ಪ್ರಮಾಣ ವಚನ ಸ್ವೀಕಾರದ (Oath taking) ಭವ್ಯ ಸಮಾರಂಭಕ್ಕೆ ರಾಜಧಾನಿ ಬೆಂಗಳೂರು (Bengaluru) ಸಜ್ಜಾಗುತ್ತಿದ್ದು, ಅತಿಥಿಗಳ ಶಿಷ್ಟಾಚಾರ ಪಾಲನೆಗಾಗಿ ಅಗತ್ಯ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ವಿವಿಧ ಪ್ರಾದೇಶಿಕ ವಲಯಗಳಿಂದ ಒಟ್ಟು ನೂರು ವಿಶೇಷ ಭದ್ರತಾ ವಾಹನಗಳನ್ನು (DV Vehicles) ಬೆಂಗಳೂರಿಗೆ ತಕ್ಷಣವೇ ರವಾನಿಸುವಂತೆ ಪ್ರಾದೇಶಿಕ ಮುಖ್ಯಸ್ಥರಿಗೆ ಆಡಳಿತ ಮಂಡಳಿ ಸೂಚಿಸಿದೆ

ಮೇ 31ರ ಸಂಜೆ ನಾಲ್ಕು ಗಂಟೆಯ ಒಳಗಾಗಿ ಈ ಎಲ್ಲಾ ಸಾರಿಗೆ ಸಂಪನ್ಮೂಲಗಳು ನಿಗದಿತ ಕುಮಾರ ಕೃಪ ಅತಿಥಿ ಗೃಹಕ್ಕೆ ತಲುಪಿ ವರದಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.ನಿಯೋಜನೆಗೊಳ್ಳುವ ಎಲ್ಲಾ ಸಾಗಣೆ ವಾಹನಗಳು ಉತ್ತಮ ತಾಂತ್ರಿಕ ಸ್ಥಿತಿಯಲ್ಲಿದ್ದು, ಪೂರ್ಣ ಪ್ರಮಾಣದ ಇಂಧನದೊಂದಿಗೆ ಚಾಲಕರನ್ನು ಒಳಗೊಂಡಿರಬೇಕು. ಯಾವುದೇ ತಾಂತ್ರಿಕ ದೋಷಗಳಿದ್ದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಅವಕಾಶವಿದ್ದು, ಈ ಸಾರ್ವಜನಿಕ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಡಳಿತ ವ್ಯವಸ್ಥೆ ಎಚ್ಚರಿಕೆ ನೀಡಿದೆ.

ಪ್ರಾದೇಶಿಕ ಹಂಚಿಕೆಯ ವಿವರ ಹೀಗಿದೆ: ಬೆಳಗಾವಿಯಿಂದ ಗರಿಷ್ಠ 6 ವಾಹನಗಳು; ಶಿವಮೊಗ್ಗ, ಚಿತ್ರದುರ್ಗ, ಗದಗ, ರಾಯಚೂರು, ಕಲಬುರಗಿ, ಉತ್ತರ ಕನ್ನಡ, ಬಳ್ಳಾರಿ, ದಕ್ಷಿಣ ಕನ್ನಡ, ಮೈಸೂರು, ಧಾರವಾಡ ಹಾಗೂ ಉಡುಪಿಯಿಂದ ತಲಾ 5 ವಾಹನಗಳು; ಚಾಮರಾಜನಗರದಿಂದ 4; ಕೊಪ್ಪಳ, ದಾವಣಗೆರೆ, ಹಾವೇರಿ ಮತ್ತು ತುಮಕೂರಿನಿಂದ ತಲಾ 3 ವಾಹನಗಳು ಬರಲಿವೆ. ಉಳಿದಂತೆ ವಿಜಯಪುರ, ಬಾಗಲಕೋಟೆ, ಹಾಸನ, ಬೀದರ್, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಕೋಲಾರ, ಮಂಡ್ಯ, ವಿಜಯನಗರ ಹಾಗೂ ಯಾದಗಿರಿಯಿಂದ ತಲಾ 2 ಮತ್ತು ಬೆಂಗಳೂರು ದಕ್ಷಿಣದಿಂದ 1 ವಾಹನವನ್ನು ನಿಗದಿಪಡಿಸಲಾಗಿದೆ

ಹೆಚ್ಚಿನ ಸುದ್ದಿ