Sunday, June 28, 2026
Homeಕ್ರೈಂ ಸುದ್ದಿಗಳುಕಿತ್ತೂರು ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: ಮನೆಗಳ್ಳರ ಬಂಧನ.

ಕಿತ್ತೂರು ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: ಮನೆಗಳ್ಳರ ಬಂಧನ.

ಚನ್ನಮ್ಮನ ಕಿತ್ತೂರು: ಕಿತ್ತೂರು ಸುತ್ತಮುತ್ತಲಿನ ಹಲವಾರು ಗ್ರಾಮಗಳಲ್ಲಿ ಮನೆಗಳ್ಳತನ ಮಾಡಿ ಪರಾರಿಯಾಗುತ್ತಿದ್ದ ಕಳ್ಳರನ್ನು ಕಿತ್ತೂರಿನ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿ ಬಂದಿಸಿದ್ದಾರೆ.

ಇತ್ತೀಚೆಗೆ ಕಿತ್ತೂರು ಸಮೀಪದ ಅವರಾದಿ ಹಾಗೂ ಸಂಗೋಳ್ಳಿ ಗ್ರಾಮಗಳಲ್ಲಿ ನಡೆದ ಮನೆಗಳ್ಳತನ ಪ್ರಕರಣಗಳನ್ನು ಭೇದಿಸಿದ ಪೊಲೀಸರು ಕಳ್ಳರನ್ನು ಹಿಡಿಯುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.

ಹೊಳಿ ನಾಗಲಾಪುರ ಗ್ರಾಮದ ಪತ್ರಯ್ಯ,ನಿಂಗಯ್ಯ, ಹಿರೇಮಠ ಹಾಗು ಬೈಲಹೊಂಗಲ ಗುಂಡ್ಲೂರ ಚಾಳನ ಅನಿಲಕುಮಾರ ಹಿರೇಮಠ ಆರೋಪಿಗಳಾಗಿದ್ದು ಇವರಿಬ್ಬರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ


ಕಳ್ಳರಿಂದ 60 ಗ್ರಾಮ್ ಬಂಗಾರ, ಒಂದು ದ್ವಿಚಕ್ರ ವಾಹನ ಮತ್ತು ಒಂದು ಕಾರನ್ನು ವಶಪಡಿಸಿಕೊಂಡಿದ್ದು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಡಿ, ವಯ್, ಎಸ್, ಪಿ, ವೀರಯ್ಯ ಹಿರೇಮಠ ತಿಳಿಸಿದ್ದಾರೆ.


ಸಿ, ಪಿ, ಐ, ಶಿವಾನಂದ ಗುಡಗನಟ್ಟಿ ,ಪಿಎಸ್ಐ ಭರತ್, ಎಸ್,ಗಂಗಾಧರ ಹಂಪಣ್ಣವರ ಹಾಗು ಇನ್ನೂ ಪೊಲೀಸ್ ಸಿಬ್ಬಂದಿಗಳಾದ ಲಿಂಗರಾಜ ಗಳಿಗಿ. ಸುನಿಲ ಮುರಗೋಡ. ಅದೃಷ್ ಚಿಕ್ಕೇರಿ. ಶರೀಫ್ ದಪೇದಾರ ನಾಗರಾಜ ಕಡಗನ್ನವರ ಮಂಜುನಾಥ ಕಂಬಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಸಂಪಾದಕರು: ರಾಮಚಂದ್ರಪ್ಪ ಪೂಜೇರ

ಹೆಚ್ಚಿನ ಸುದ್ದಿ