Sunday, September 27, 2026
Homeದೇಶಕಿತ್ತೂರು ಉತ್ಸವ – 2026ರ ಕುರಿತ ಸೋಮವಾರ ಪೂರ್ವಭಾವಿ ಸಭೆ ಕರೆಯಲಾಗಿದೆ, ಸ್ಥಳ -“ವೀರ ರಾಣಿ...

ಕಿತ್ತೂರು ಉತ್ಸವ – 2026ರ ಕುರಿತ ಸೋಮವಾರ ಪೂರ್ವಭಾವಿ ಸಭೆ ಕರೆಯಲಾಗಿದೆ, ಸ್ಥಳ -“ವೀರ ರಾಣಿ ಕಿತ್ತೂರು ಚನ್ನಮ್ಮ ಸಭಾಭವನ”

ಚನ್ನಮ್ಮನ ಕಿತ್ತೂರು -2026ನೇ ಸಾಲಿನ “ಕಿತ್ತೂರು ಉತ್ಸವ” ಆಚರಿಸುವ ಕುರಿತು ಪೂರ್ವಭಾವಿ ಸಭೆ ನಡೆಯಲಿದೆ.ಸಭೆಯ ಮುಖ್ಯ ವಿವರಗಳು:ಉತ್ಸವದ ಹಿನ್ನೆಲೆ: ಭಾರತ ಸ್ವಾತಂತ್ರ್ಯ ಹೋರಾಟದ ವೀರರಾಣಿ ಕಿತ್ತೂರು ಚೆನ್ನಮ್ಮನವರ ಗೌರವಾರ್ಥವಾಗಿ ಪ್ರತಿ ವರ್ಷ ಕಿತ್ತೂರು ಉತ್ಸವವನ್ನು ಆಚರಿಸಲಾಗುತ್ತದೆ. ಉತ್ಸವದ ದಿನಾಂಕಗಳು: ಅಕ್ಟೋಬರ್ 23, 24 ಮತ್ತು 25, 2026. ಉತ್ಸವ ನಡೆಯುವ ಸ್ಥಳ: ಕಿತ್ತೂರಿನ ಕೋಟೆ ಆವರಣ. ಪೂರ್ವಭಾವಿ ಸಭೆ ನಡೆಯುವ ದಿನಾಂಕ & ಸಮಯ:‌ದಿನಾಂಕ: 28.09.2026 (ಸೋಮವಾರ) ‌ಸಮಯ: ಬೆಳಿಗ್ಗೆ 11:00 ಗಂಟೆಗೆ ‌ಸಭೆಯ ಸ್ಥಳ: ಕಿತ್ತೂರು ಚೆನ್ನಮ್ಮ ವೃತ್ತದ ಹತ್ತಿರವಿರುವ “ವೀರ ರಾಣಿ ಕಿತ್ತೂರು ಚನ್ನಮ್ಮ ಸಭಾಭವನ”. ಕಿತ್ತೂರು ಶಾಸಕರಾದ ಶ್ರೀ ಬಾಬಾಸಾಹೇಬ ಪಾಟೀಲ ಅವರ‌ ನೇತೃತ್ವದಲ್ಲಿ ನಡೆಯಲಿದೆ.ಅಧ್ಯಕ್ಷತೆಯನ್ನು ಸನ್ಮಾನ್ಯ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ವಹಿಸಿಕೊಳ್ಳಲಿದ್ದಾರೆ. ಆಹ್ವಾನ:ತಾಲೂಕಿನ ಎಲ್ಲಾ ಪತ್ರಿಕಾ ಮಾಧ್ಯಮದ ಪ್ರತಿನಿಧಿಗಳು, ಪಟ್ಟಣ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿಬೇಕಾಗಿ ಕೋರಲಾಗಿದೆ

ಹೆಚ್ಚಿನ ಸುದ್ದಿ