ಬೆಂಗಳೂರು: ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ (ಯುಬಿಎಲ್), ಕರ್ನಾಟಕದಲ್ಲಿ ತನ್ನ ಬಿಯರ್ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ ಮಾಡುವುದಾಗಿ ಘೋಷಿಸಿದೆ.
ಸಾಮಾನ್ಯ ಹಾಗೂ ಪ್ರೀಮಿಯಂ ವಿಭಾಗಗಳ ಉತ್ಪನ್ನಗಳ ಬೆಲೆಗಳನ್ನು ಕಡಿತಗೊಳಿಸಲಾಗಿದ್ದು, ಕಿಂಗ್ಫಿಷರ್ ಪ್ರೀಮಿಯಂ, ಕಿಂಗ್ಫಿಷರ್ ಅಲ್ಟ್ರಾ ಹಾಗೂ ಹೈನ್ಕೆನ್® ಸೇರಿದಂತೆ ಜನಪ್ರಿಯ ಬ್ರ್ಯಾಂಡ್ಗಳು ರಾಜ್ಯದ ಗ್ರಾಹಕರಿಗೆ ಇನ್ನಷ್ಟು ಕೈಗೆಟುಕುವ ದರದಲ್ಲಿ ಲಭ್ಯವಾಗಲಿವೆ.
ಈ ಕುರಿತು ಕಂಪನಿಯ ವಕ್ತಾರರು ಮಾತನಾಡಿ, “ಬಿಯರ್ ಮೇಲಿನ ತೆರಿಗೆ ಇಳಿಕೆಗೆ ನೆರವಾದ ಎಐಬಿ ಆಧಾರಿತ ತೆರಿಗೆ ವ್ಯವಸ್ಥೆ ಸೇರಿದಂತೆ ಕರ್ನಾಟಕ ಸರ್ಕಾರ ಕೈಗೊಂಡಿರುವ ಇತ್ತೀಚಿನ ಅಬಕಾರಿ ಸುಧಾರಣೆಯನ್ನು ನಾವು ಸ್ವಾಗತಿಸುತ್ತೇವೆ. ವಿಭಾಗದ ದೀರ್ಘಕಾಲೀನ ಬೆಳವಣಿಗೆಗೆ ಬದ್ಧವಾಗಿರುವ ಸಂಸ್ಥೆಯಾಗಿ, ಇದರ ಲಾಭವನ್ನು ಗ್ರಾಹಕರಿಗೆ ನೀಡುತ್ತಿರುವುದು ಸಂತಸದ ವಿಷಯ. ಇದರಿಂದ ಬಿಯರ್ ಇನ್ನಷ್ಟು ಕೈಗೆಟುಕುವ ದರದಲ್ಲಿ ಲಭ್ಯವಾಗುವುದರ ಜೊತೆಗೆ ಜವಾಬ್ದಾರಿಯುತ ಬಳಕೆಯನ್ನು ಉತ್ತೇಜಿಸುವ ನಮ್ಮ ಬದ್ಧತೆಯೂ ಮುಂದುವರಿಯಲಿದೆ,” ಎಂದು ಹೇಳಿದರು.
ಕರ್ನಾಟಕದಲ್ಲಿ ಪರಿಷ್ಕೃತ ಗ್ರಾಹಕ ಬೆಲೆಗಳು: 650 ಮಿ.ಲೀ. ಕಿಂಗ್ಫಿಷರ್ಪ್ರೀಮಿಯಂ 185 ರಿಂದ 110, ಕಿಂಗ್ಫಿಷರ್ಪ್ರೀಮಿಯಂ 225 ರಿಂದ 150, ಹೈನ್ಕೆನ್ ಸಿಲ್ವರ್ 270ರಿಂದ 200, ಹೈನ್ಕೆನ್ ಒರಿಜಿನಲ್l 270 ರಿಂದ 200 ವರೆಗೆ ಇಳಿಸಲಾಗಿದೆ.
