Friday, October 9, 2026
Homeಜಿಲ್ಲಾ ಸುದ್ದಿಗಳುಯಾದಗಿರಿಅನ್ನಭಾಗ್ಯ ಅಕ್ಕಿಗೆ ಖದೀಮರ ಕಣ್ಣು..!ಕಾಳಸಂತೆಗೆ ಸಾಗುತ್ತಿದ್ದ ಪಡಿತರ ಅಕ್ಕಿ ವಶಕ್ಕೆ…

ಅನ್ನಭಾಗ್ಯ ಅಕ್ಕಿಗೆ ಖದೀಮರ ಕಣ್ಣು..!ಕಾಳಸಂತೆಗೆ ಸಾಗುತ್ತಿದ್ದ ಪಡಿತರ ಅಕ್ಕಿ ವಶಕ್ಕೆ…

ಯಾದಗಿರಿ: ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳತನಕ್ಕೆ ಖದೀಮರ ಯತ್ನ.
ಆಂಧ್ರಪ್ರದೇಶದತ್ತ ಸಾಗುತ್ತಿದ್ದ ಪಡಿತರ ಅಕ್ಕಿ ಪತ್ತೆ.
ಗುರುಮಿಟ್ಕಲ್ ತಾಲೂಕಿನ ಚಪೆಟ್ಲಾ ಗ್ರಾಮದ ಬಳಿ ಆಹಾರ ಇಲಾಖೆ ದಿಢೀರ್ ದಾಳಿ, ದಾಳಿ ವೇಳೆ ಅನ್ನಭಾಗ್ಯ ಅಕ್ಕಿ ವಶಕ್ಕೆ ಪಡೆದು ಪ್ರಕರಣಕ್ಕೆ ಸಂಬಂಧಿಸಿದವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ.

ಯಾದಗಿರಿ ಜಿಲ್ಲೆಯಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಾಟದ ಆರೋಪ.ಸುರಪುರ, ಶಹಾಪುರ, ಗುರುಮಿಟ್ಕಲ್ ಭಾಗಗಳಲ್ಲಿ ಇತ್ತೀಚೆಗೆ ಅಕ್ರಮ ಅಕ್ಕಿ ಸಾಗಾಟದ ಪ್ರಕರಣಗಳು ದಾಖಲು.
ಗುರುಮಿಟ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ರೇಷನ್ ಅಂಗಡಿಗಳಿಂದಲೇ ಫಲಾನುಭವಿಗಳಿಗೆ ನೀಡಬೇಕಾದ ಅಕ್ಕಿ ಅಕ್ರಮವಾಗಿ ಮಾರಾಟವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ತೆರಳಿ ಪಡಿತರ ಅಕ್ಕಿ ಸಂಗ್ರಹಿಸುವ ಜಾಲ ಬಳಿಕ ಅಕ್ಕಿಯನ್ನು ವಾಹನಗಳ ಮೂಲಕ ಕಾಳಸಂತೆಗೆ ಸಾಗಿಸಲಾಗುತ್ತಿದೆ.

ಜಿಲ್ಲೆಯಾದ್ಯಂತ ಇಂತಹ ಅಕ್ರಮ ದಂಧೆ ನಡೆಯುತ್ತಿದೆ.
ದಾಳಿ ನಡೆಸಿ ಅಕ್ಕಿ ವಶಪಡಿಸಿಕೊಳ್ಳುತ್ತಿರುವ ಅಧಿಕಾರಿಗಳು; ಆದರೆ ಅಕ್ರಮದ ಮೂಲ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ.
ಅನ್ನಭಾಗ್ಯ ಅಕ್ಕಿ ಬಡ ಫಲಾನುಭವಿಗಳ ಹೊಟ್ಟೆ ಸೇರಬೇಕೋ, ಕಾಳಸಂತೆ ಪಾಲಾಗಬೇಕೋ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಎದ್ದಿದೆ,

ಹೆಚ್ಚಿನ ಸುದ್ದಿ