Thursday, May 28, 2026
Homeಉದ್ಯೋಗಹೆಚ್ಚುವರಿ 50 ಸಾವಿರ ಸರ್ಕಾರಿ ಹುದ್ದೆ ಭರ್ತಿಗೆ ಆಗ್ರಹ: ವಿಧಾನಸೌಧದಲ್ಲಿ ಡಿಪಿಎಆರ್ ಅಧಿಕಾರಿಗೆ ಮನವಿ

ಹೆಚ್ಚುವರಿ 50 ಸಾವಿರ ಸರ್ಕಾರಿ ಹುದ್ದೆ ಭರ್ತಿಗೆ ಆಗ್ರಹ: ವಿಧಾನಸೌಧದಲ್ಲಿ ಡಿಪಿಎಆರ್ ಅಧಿಕಾರಿಗೆ ಮನವಿ

ಬೆಂಗಳೂರು:ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಪ್ರಸ್ತುತ ನಡೆಯುತ್ತಿರುವ 56,432 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯೊಂದಿಗೆ, ಹೆಚ್ಚುವರಿಯಾಗಿ ಕನಿಷ್ಠ 50,000 ಹುದ್ದೆಗಳಿಗೆ ನೇಮಕಾತಿ ಆರಂಭಿಸಬೇಕೆಂದು ‘ಆಲ್ ಕರ್ನಾಟಕ ಸ್ಟೇಟ್ ಸ್ಟೂಡೆಂಟ್ಸ್ ಅಸೋಸಿಯೇಷನ್’ ಸರ್ಕಾರವನ್ನು ಒತ್ತಾಯಿಸಿದೆ.
ಈ ಕುರಿತು ಸಂಘಟನೆಯ ಅಧ್ಯಕ್ಷ ಕಂಥಕುಮಾರ್ (ಶ್ರೀಕಾಂತ್)ನೇತೃತ್ವದ ನಿಯೋಗವು ವಿಧಾನಸೌಧಕ್ಕೆ ಆಗಮಿಸಿ, ಡಿಪಿಎಆರ್ (DPAR) ಕಾರ್ಯದರ್ಶಿಯವರಿಗೆ ಮನವಿ ಪತ್ರ ಸಲ್ಲಿಸಿತು.

ಪ್ರಮುಖ ಬೇಡಿಕೆಗಳು:

ರಾಜ್ಯದಲ್ಲಿರುವ ನಿರುದ್ಯೋಗಿ ಅರ್ಹ ಅಭ್ಯರ್ಥಿಗಳ ಭವಿಷ್ಯದ ದೃಷ್ಟಿಯಿಂದ, ಸರ್ಕಾರ ಅಗತ್ಯ ಆರ್ಥಿಕ ಅನುಮೋದನೆ ಪಡೆದು ಹೆಚ್ಚುವರಿ 50,000 ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಬೇಕು.

ಕರ್ನಾಟಕ ಲೋಕಸೇವಾ ಆಯೋಗದ (KPSC) ಕಾರ್ಯವೈಖರಿಯಲ್ಲಿ ನಡೆಯುತ್ತಿರುವ ಅಕ್ರಮಗಳು ಮತ್ತು ಭ್ರಷ್ಟಾಚಾರದ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕವಿದೆ.

ಆಡಳಿತದಲ್ಲಿ ಪಾರದರ್ಶಕತೆ, ಜವಾಬ್ದಾರಿ ಮತ್ತು ಸಾರ್ವಜನಿಕ ವಿಶ್ವಾಸವನ್ನು ಮರುಸ್ಥಾಪಿಸಲು, ಈ ಪ್ರಕರಣದ ಕುರಿತು ಕೇಂದ್ರೀಯ ತನಿಖಾ ದಳ (CBI) ಮೂಲಕ ಸಮಗ್ರ ತನಿಖೆ ನಡೆಸಬೇಕು.
ನ್ಯಾಯಸಮ್ಮತ ಮತ್ತು ಉತ್ತಮ ಆಡಳಿತದ ದೃಷ್ಟಿಯಿಂದ ಸರ್ಕಾರವು ಈ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸಂಘಟನೆಯು ಆಗ್ರಹಿಸಿದೆ.

ಹೆಚ್ಚಿನ ಸುದ್ದಿ