Monday, February 16, 2026
HomeUncategorizedಯಾದವಾಡ-ಮುಳಮುತ್ತಲದ ಸಿದ್ದಾರೂಢ ಮಠದಲ್ಲಿ 18ರಿಂದ ಐದು ದಿನಗಳ ಕಾಲ ಪ್ರವಚನ ಕಾರ್ಯಕ್ರಮ

ಯಾದವಾಡ-ಮುಳಮುತ್ತಲದ ಸಿದ್ದಾರೂಢ ಮಠದಲ್ಲಿ 18ರಿಂದ ಐದು ದಿನಗಳ ಕಾಲ ಪ್ರವಚನ ಕಾರ್ಯಕ್ರಮ

ಧಾರವಾಡ: ತಾಲೂಕಿನ ಯಾದವಾಡ-ಮುಳಮುತ್ತಲದ ಆನಂದಧಾಮದ ಸಿದ್ದಾರೂಢ ಮಠದಲ್ಲಿ ಶ್ರೀಮಠದ ಡಾ. ಆನಂದ ಸ್ವಾಮೀಜಿ ಹಾಗೂ ದೇವರಹುಬ್ಬಳ್ಳಿಯ ಸಿದ್ಧಶಿವಯೋಗಿಗಳ ಸಾನ್ನಿಧ್ಯದಲ್ಲಿ ಫೆ. 18ರಿಂದ 22ರ ವರೆಗೆ ನಿತ್ಯ ಸಂಜೆ 6ರಿಂದ ವೇದಾಂತ ಪಂಚಮಿ ಎಂಬ ಪ್ರವಚನ ಆಯೋಜಿಸಲಾಗಿದೆ.

ಫೆ. 18ರ ಬುಧವಾರ ಸುಧಾರಸ ಧಾರೆ ಯಾವುದು ಮಿಗೆ ಮೃದು ವಚನ ವಿಷಯ ಕುರಿತು ಪ್ರವಚನ ನಡೆಯಲಿದ್ದು, ಮುಚಳಂಬ ಮಠದ ಪ್ರಣವಾನಂದ ಸ್ವಾಮೀಜಿ, ಕರಡಿಗುಡ್ಡದ ಶಂಕರಾನಾಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. 19ರಂದು ಸಂಜೆ 6ಕ್ಕೆ ಮತಿಗೆ ಮಂಗಲವಿವುದಾವುದು ಉತ್ತಮ ಸಂಗ ಪ್ರವಚನ ನಡೆಯಲಿದ್ದು, ಗರಗ ಕಲ್ಮಠದ ಆತ್ಮಾರಾಮ ಸ್ವಾಮೀಜಿ ಹಾಗೂ ಶಿಂಗನಹಳ್ಳಿಯ ರಾಚೋಟೇಶ್ವರ ಸ್ವಾಮೀಜಿ ದಿವ್ಯ ಸಾನ್ನಿಧ್ಯ, ಕಾಖಂಡಕಿಯ ಶಿವಯೋಗೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಫೆ. 20ರಂದು ಉಪ್ಪಿನಬೆಟಗೇರಿ ವಿರೂಪಾಕ್ಷ ಸ್ವಾಮೀಜಿ, ನಯಾನಗರ ಸಿದ್ಧಲಿಂಗ ಸ್ವಾಮೀಜಿ ಹಾಗೂ ನಾಗನಸೂರ ಬಸವಲಿಂಗ ಸ್ವಾಮೀಜಿ ದಿವ್ಯ ಸಾನ್ನಿಧ್ಯ, ಚಿಕ್ಕಮುನವಳ್ಳಿ ಶಿವಪುತ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅನುಪಮಾಚಲ ಭಕ್ತಿ ಭಾವಾನುಕೂಲನೆ ಶಂಭುಲಿಂಗ ಪ್ರವಚನ ನಡೆಯಲಿದೆ.

ಫೆ.21ರಂದು ಚಿಕ್ಕಬೆಳ್ಳಿಗಟ್ಟಿ ಸತ್ಯ ದೇವದಾಸ ಮಹಾರಾಜರು, ಬಾಲಗಾವ-ಕಾತ್ರಾಳದ ಅಮೃತಾನಂದ ಸ್ವಾಮೀಜಿ ದಿವ್ಯ ಸಾನ್ನಿಧ್ಯ, ರಾಮಾಪೂರದ ಶಿವಬಸವ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜಾಣನು ಲೌಕಿಕ ಪರಮಾರ್ಥವೆರಡನು ಮಾಣದೆ ಕೂಡಿ ನಡೆಸುತಿಹನಿಂತು ಪ್ರವಚನ ನಡೆಸಿಕೊಡಲಿದ್ದಾರೆ. ಕೊನೆಯ ದಿನ ಫೆ. 22ರಂದು ಇಂಚಲ ಸಾಧು ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿ, ಅಮ್ಮಿನಬಾವಿ ಪಂಚಗೃಹ ಶಾಂತಲಿಂಗ ಸ್ವಾಮೀಜಿ ದಿವ್ಯಸಾನ್ನಿಧ್ಯ ಹಾಗೂ ರೋಣ ಶ್ರವಣಕುಮಾರ ಸ್ವಾಮೀಜಿ, ಚಿಕ್ಕುಂಬಿಯ ನಾಗಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸದ್ಗುರು ಮಹಿಳೆ ಪ್ರವಚನ ನಡೆಯಲಿದೆ. ಐದು ದಿನಗಳ ಕಾಲ ನಡೆಯುವ ಈ ಪ್ರವಚನದಲ್ಲಿ ದಿವ್ಯಸಾನ್ನಿಧ್ಯ, ಸಾನಿಧ್ಯ ಮಾತ್ರವಲ್ಲದೇ ನಾಡಿನ ಹಲವು ಮಠಗಳ ಸ್ವಾಮೀಜಿಗಳ ಸಮ್ಮುಖ ಹಾಗೂ ವಿಶೇಷ ಆಹ್ವಾನಿತರಾಗಿ ಗಣ್ಯರು ಆಗಮಿಸಲಿದ್ದಾರೆ. ನಿತ್ಯ ಪ್ರವಚನಕ್ಕೂ ಮುಂಚೆ ಭಜನೆ ಇರಲಿದ್ದು, ಸುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಸಿದ್ಧಾರೂಢ ಮಠದ ಡಾ.ಆನಂದ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಪಾದಕರು: ರಾಮಚಂದ್ರಪ್ಪ ಪೂಜೇರ (ಚನ್ನಮ್ಮನ ಕಿತ್ತೂರು)

ಹೆಚ್ಚಿನ ಸುದ್ದಿ