Monday, August 17, 2026
HomeUncategorizedಶ್ರೀ ಸಂತ ಸೇವಾಲಾಲ್‌ ಜಯಂತ್ಯುತ್ಸವ ಆಚರಣೆ : ಪಿ.ಎಸ್.ಐ. ಸಂಜೀವ ತಿಪ್ಪರೆಡ್ಡಿ

ಶ್ರೀ ಸಂತ ಸೇವಾಲಾಲ್‌ ಜಯಂತ್ಯುತ್ಸವ ಆಚರಣೆ : ಪಿ.ಎಸ್.ಐ. ಸಂಜೀವ ತಿಪ್ಪರೆಡ್ಡಿ

ಮುದ್ದೇಬಿಹಾಳ : ಸಮಾಜದ ಉದ್ಧಾರಕ್ಕೆ ಉದಯಿಸಿದ ದೈವಿಪುರುಷ ಸಂತ ಸೇವಾಲಾಲ್‌ ಎಂದು ಪಿ.ಎಸ್.ಐ. ಸಂಜೀವ ತಿಪ್ಪರೆಡ್ಡಿ ಹೇಳಿದರು.

ಮುದ್ದೇಬಿಹಾಳ ಠಾಣೆಯ ಆವರಣದಲ್ಲಿ 287ನೇ ಜಯಂತ್ಯುತ್ಸವ ಆಚರಣೆ ಮಾಡಲಾಯಿತು ಇದೆ ಸಂಧರ್ಭದಲ್ಲಿ ಮುದ್ದೇಬಿಹಾಳ ಠಾಣೆಯ ಎಸ್.ಐ ಸಂಜೀವ ತಿಪ್ಪರೆಡ್ಡಿ ಮಾತನಾಡಿ ಸಂತ ಸೇವಾಲಾಲ್‌ರು ಬಂಜಾರ ಸಮಾಜದ ಪವಾಡ ಪುರುಷ. ಸಮಾಜದಲ್ಲಿನ ಮೌಢ್ಯತೆ ತೊಡೆದು ಹಾಕಿದ ಸಂತರು ಎಂದರು.

ಇವರು ಕಾಡಿನಲ್ಲಿ ಹಸು ಮೇಯಿಸಲು ಹೋಗುತ್ತಿದ್ದ ಸಂದರ್ಭದಲ್ಲಿ ಕಲ್ಲುಬಂಡೆಗಳನ್ನು ನಗಾರಿಯನ್ನಾಗಿಸಿಕೊಂಡು ತಾಳಿಗರಿಯನ್ನು ತಾಳವಾಗಿಸಿ ಹಾಡು ಕಟ್ಟುತ್ತಿದ್ದರು. ಪ್ರಕೃತಿಯಲ್ಲಿನ ಪ್ರಾಣಿ ಪಕ್ಷಿಗಳೊಂದಿಗೆ ಸಂಭಾಷಣೆ ನಡೆಸುತ್ತಿದ್ದರು. ಮನುಷ್ಯನಿಗೆ ಮಾತ್ರವಲ್ಲ, ಜೀವಜಂತುಗಳಿಗೆ ಒಳ್ಳೆಯದಾಗಲಿ ಎಂಬ ಸಂದೇಶ ಸಾರಿದ್ದರು ಮಾಹಾನ ವ್ಯಕ್ತಿ ಎಂದರು.

ತಾಲೂಕು ಆಡಳಿತ, ತಾ.ಪಂ., ಪೋಲಿಸ ಠಾಣೆಯಲ್ಲಿ ಹಾಗೆ ಇನ್ನು ಅನೇಕ ಇಲಾಖೆಯಲ್ಲಿಯು ಮತ್ತು ಶ್ರೀ ಸೇವಾಲಾಲ್‌ ಬಂಜಾರ ಸಂಘಗಳ ಸಹ ಶ್ರೀ ಸಂತ ಸೇವಾಲಾಲ್‌ ಜಯಂತೋತ್ಸವ ಆಚರಣೆ ಮಾಡಿದ್ದಾರೆ.

ವರದಿ : ಶಿವು ರಾಠೋಡ

ಹೆಚ್ಚಿನ ಸುದ್ದಿ