ಮುಂಡಗೋಡ ಡಿಪೋದಿಂದ ಹೊಸದಾಗಿ ಮುಂಡಗೋಡ ರಾಯಚೂರು ಬಸ್ಸಿಗೆ ಮುಂಡಗೋಡ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಕೃಷ್ಣ ಎಚ್ ಹಿರೇಹಳ್ಳಿಅವರು ಹಸಿರು ನಿಶಾನೆ ತೋರಿಸಿ ರಿಬ್ಬನ್ ಕಟ್ ಮಾಡುವ ಮುಖಾಂತರ ಹೊಸ ಬಸ್ಸಿಗೆ ಚಾಲನೆ ನೀಡಿದರು. ಪ್ರತಿದಿನ ಬೆಳಿಗ್ಗೆ 10:00 ಕ್ಕೆ ಮುಂಡಗೋಡದಿಂದ ಹುಬ್ಬಳ್ಳಿ, ಗದಗ್, ಕೊಪ್ಪಳ, ಗಂಗಾವತಿ, ಸಿಂಧನೂರು, ಮಾನ್ವಿ ಮಾರ್ಗವಾಗಿ ರಾಯಚೂರು ಸಾಯಂಕಾಲ 7:00 ಗಂಟೆಗೆ ತಲುಪುತ್ತದೆ. ಮಾರನೆಯ ದಿನ ಬೆಳಗ್ಗೆ 8:00 ಗಂಟೆಗೆ ರಾಯಚೂರು ದಿಂದ ಸಾಯಂಕಾಲ 5:00 ಗಂಟೆಗೆ ಮುಂಡಗೋಡ ತಲುಪುತ್ತದೆ ನೂತನ ಬಸ್ಸಿಗೆ ಚಾಲನೆ ನೀಡಿ ಮಾತನಾಡಿದ ಹಿರೇಹಳ್ಳಿಯವರು ಸರ್ಕಾರ ಇವತ್ತು ಪಂಚ ಗ್ಯಾರೆಂಟಿ ಯೋಜನೆಯ ಜಾರಿ ಮುಖಾಂತರ ಬಡವರಿಗೆ ಕೂಲಿಕಾರರಿಗೆ ನಿರ್ಗತಿಕರಿಗೆ ಬಹಳ ಸಹಾಯವಾಗಿದೆ. ಜೊತೆಗೆ ಮಹಿಳೆಯರಿಗೆ ಶಕ್ತಿ ಯೋಜನೆ ಮುಖಾಂತರ ಫ್ರೀಯಾಗಿ ಬಸ್ಸಿನಲ್ಲಿ ಓಡಾಡುವ ಅವಕಾಶವನ್ನು ಮಾಡಿಕೊಟ್ಟಿದ್ದು ತುಂಬಾ ಒಳ್ಳೆಯ ಕೆಲಸವಾಗಿದೆ ಇವತ್ತು ಮಂತ್ರಾಲಯಕ್ಕೆ ಹೋಗಲು ಮುಂಡಗೋಡದಿಂದ ರಾಯಚೂರುವರೆಗೆ ಕೆ ಎಸ್ ಆರ್ ಟಿ ಸಿ ಮುಂಡಗೋಡ ಡಿಪೋದಿಂದ ಹೊಸಬಸನ್ನು ಬಿಡಲು ತೀರ್ಮಾನಿಸಿದಂತಹ ಸನ್ಮಾನ್ಯ ಶ್ರೀ ಶಿವರಾಮ್ ಹೆಬ್ಬಾರ್ ಅವರಿಗೆ ಧನ್ಯವಾದಗಳು ಅರ್ಪಿಸಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಶಾರದಾ ರಾಠೋಡ ರವರುಮಾತನಾಡಿ ಮಹಿಳೆಯರಿಗೆ ಪಂಚ ಗ್ಯಾರಂಟಿ ಯೋಜನೆ ಜಾರಿ ಮಾಡುವ ಮುಖಾಂತರ ಶಕ್ತಿ ನೀಡಿದಂತಹವಾಗಿದೆ ಇದೇ ಸಂದರ್ಭದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕ ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷರು ಹಾಗೂ ಗ್ಯಾರೆಂಟಿ ಸದಸ್ಯರಾದ ಧರ್ಮರಾಜ ನಡಗೇರ, ಪಂಚ ಗ್ಯಾರಂಟಿ ಸದಸ್ಯರಾದ ಶ್ರೀ ಹನುಮಂತಗೌಡ, ಸಚಿನ್ ಬಾಂದೇಕರ್, ಮಾಜಿ ಪ ಪಂ ಸದಸ್ಯ ಶ್ರೀ ಎಮ್ ಕೆ ರಜಾಕ, ಮುಂಡಗೋಡ ಡಿಪೋ ಮ್ಯಾನೇಜರ್ ಸಲೀಂ ಕುರ್ತುಕೋಟಿ, ಬಸವರಾಜ ಸಂಗಮೇಶ್ವರ ಆಶಿಫ್ ಮಕಾನ್ದಾರ್, ಆಟೋರಿಕ್ಷಾ ಡ್ರೈವರ್, ಬಸ್ ಕಂಡಕ್ಟರ್ ಬಸ್ ಡ್ರೈವರ್ಗಳು , ಸಾರ್ವಜನಿಕರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.
ವರದಿಗಾರರು: ಬಸಯ್ಯ ತೋಟಯ್ಯನವರ
