Tuesday, July 7, 2026
Homeಜಿಲ್ಲಾ ಸುದ್ದಿಗಳುಚನ್ನಮ್ಕನ ಕಿತ್ತೂರಿನಲ್ಲಿ ಕೆಲವೊಂದು ಇಷ್ಟು ಜನರು BLO ಗಳು ಸರಿಯಾಗಿ SRI ಗಣತಿ ಕಾರ್ಯ ಮಾಡುತ್ತಿಲ್ಲ;...

ಚನ್ನಮ್ಕನ ಕಿತ್ತೂರಿನಲ್ಲಿ ಕೆಲವೊಂದು ಇಷ್ಟು ಜನರು BLO ಗಳು ಸರಿಯಾಗಿ SRI ಗಣತಿ ಕಾರ್ಯ ಮಾಡುತ್ತಿಲ್ಲ; BLO ಗಳು ಮನೆ ಮನೆಗೆ ತೆರಳಿ SIR ಪ್ರಕ್ರಿಯೆ ಮಾಡದೇ ಎಲ್ಲೂ ಕುಳಿತು ಯಾರದೋ ಕೈಗೆ ಫಾರಂ ಕೊಡುತ್ತಿದ್ದಾರೆ..

ಚನ್ನಮ್ಕನ ಕಿತ್ತೂರು : ಚನ್ನಮ್ಮನ ಕಿತ್ತೂರಿನಲ್ಲಿ ಎಸ್ಐಆರ್ (SIR) ಪ್ರಕ್ರಿಯೆ ಪ್ರಾರಂಭವಾಗಿದ್ದು ಕೆಲವೊಂದು BLO ಗಳು ಮನೆಗೆ ಭೇಟಿ ಕೊಡದೆ ಸಿಕ್ಕ ಸಿಕ್ಕವರ ಕಡೆ ಹಾಗೂ ಮಕ್ಕಳ ಕಡೆ ಗಣತಿ ನಮೂನೆಯ ಫಾರಂ ಕೊಡುತ್ತಿದ್ದಾರೆ, ಇದರಿಂದ ಫಾರಂ ತೆಗೆದುಕೊಂಡವರು ಏನು ಮಾಡಬೇಕು ಎಂಬುದು ನಮಗೆ ತಿಳಿಯುತ್ತಿಲ್ಲ ಎಂದು ಫಾರಂ ಪಡೆದುಕೊಂಡು ಕಿತ್ತೂರಿನ ಸಾರ್ವಜನಿಕರು ತಿಳಿಸಿದರು.


ಚುನಾವಣಾ ಆಯೋಗದ ಸೂಚನೆ ಪಾಲನೆ ಮಾಡದೇ ತಮಗೆ ಇಷ್ಟದಂತೆ ಕಾರ್ಯ ನಿರ್ಲಕ್ಷ್ಯ ನಿರ್ವಹಿಸುತ್ತಿರುವರರ BLO ಗಳಿಗೆ ಎಚ್ಚರಿಕೆ ನೀಡಬೇಕು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ಇಡೀ ಕರ್ನಾಟಕದಲ್ಲಿ  ಎಸ್ ಐ ಆರ್ ನಲ್ಲಿ ಸುಮಾರು 59050 ಬಿ ಎಲ್ ಒ ಗಳು ಕೆಲಸ ಮಾಡುತ್ತಿದ್ದಾರೆ ಆದರೆ ದುರದೃಷ್ಟಕರ ಈ ಬಿ ಎಲ್ ಓ (BLO) ಗಳು  ಯಾರದೋ ಮನೆಯ ಒಂದು ಕಟ್ಟೆ ಮೇಲೆ, ಶಾಲೆಯಲ್ಲಿ, ಮಸೀದಿ, ಮಂದಿರ ಹಾಗೂ ಸಭಾಭವನದಲ್ಲಿ ಕುಳಿತು ಅಲ್ಲಿಗೆ  ಜನರನ್ನು ಕರೆಸಿ SIR ಮತದಾರರ ವೋಟರ್ ಐಡಿ ಪ್ರಕ್ರಿಯೆ  ಮಾಡುತ್ತಿದ್ದಾರೆ.


ಸರ್ಕಾರದ ಮಾರ್ಗ ಸೂಚಿ ಪ್ರಕಾರ ಬಿ ಎಲ್ ಒ (BLO) ಗಳು ಪ್ರತಿ ಮನೆಗೆ ಭೇಟಿ ನೀಡಿ ಎಸ್ ಐ ಆರ್ (SIR) ನ ಪರಿಪೂರ್ಣ ಮಾಹಿತಿ ಪಡೆಯಬೇಕು, ಆದರೆ ಈ ಕೆಲಸವನ್ನು ಯಾವ ಬಿ ಎಲ್ ಓ ಗಳು ಮಾಡುತ್ತಿಲ್ಲ ಇದಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು ಕಠಿಣವಾದ ಕ್ರಮವನ್ನು ತೆಗೆದುಕೊಳ್ಳಬೇಕು. ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ವರದಿಗಾರರು: ಕಾಸಿಂ ಸಾಬ್ ಕುಸುಗಲ್

ಸಂಪಾದಕರು: ರಾಮಚಂದ್ರಪ್ಪ ಪೂಜೇರ

ಹೆಚ್ಚಿನ ಸುದ್ದಿ