Thursday, July 16, 2026
HomeUncategorizedಮಾದಕ ವಸ್ತು ಜಾಲಕ್ಕೆ ಬ್ರೇಕ್: ಟೀಮಿಟಿಯನ್ ಕಾಲೋನಿಯಲ್ಲಿ ವಿಶೇಷ ತರಬೇತಿ ಪಡೆದ ಶ್ವಾನದಿಂದ ಕೊರಿಯರ್, ಪೋಸ್ಟ್...

ಮಾದಕ ವಸ್ತು ಜಾಲಕ್ಕೆ ಬ್ರೇಕ್: ಟೀಮಿಟಿಯನ್ ಕಾಲೋನಿಯಲ್ಲಿ ವಿಶೇಷ ತರಬೇತಿ ಪಡೆದ ಶ್ವಾನದಿಂದ ಕೊರಿಯರ್, ಪೋಸ್ಟ್ ಡ್ರಗ್ಸ್ ಸಾಗಾಟದ ಖಡಕ್ ಪರಿಶೀಲನೆ!

ಮುಂಡಗೋಡ: ​ಪೊಲೀಸರ ಕಣ್ಣು ತಪ್ಪಿಸಲು ಕೊರಿಯರ್ ಮತ್ತು ಪೋಸ್ಟ್ ಆಫೀಸ್ ಸೇವೆಗಳ ಮೂಲಕ ಮಾದಕ ವಸ್ತುಗಳನ್ನು (ಡ್ರಗ್ಸ್) ಸಾಗಿಸುವ ಜಾಲ ಇತ್ತೀಚೆಗೆ ಸಕ್ರಿಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ಆದೇಶದ ಮೇರೆಗೆ, ಇಂದು ಟೀಮಿಟಿಯನ್ ಕಾಲೋನಿಯ ಪ್ರಮುಖ ಕೊರಿಯರ್ ಕೇಂದ್ರಗಳು ಮತ್ತು ಅಂಚೆ ಕಚೇರಿಗಳಲ್ಲಿ ವಿಶೇಷ ಪರಿಶೀಲನಾ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಪಾರ್ಸೆಲ್ ಹಾಗೂ ಕೊರಿಯರ್ ಮೂಲಕ ಬರುವ ಮಾದಕ ವಸ್ತುಗಳನ್ನು ಪತ್ತೆ ಹಚ್ಚಲೆಂದೇ ವಿಶೇಷ ಮತ್ತು ಪ್ರತ್ಯೇಕ ತರಬೇತಿ ಪಡೆದ ಪೊಲೀಸ್ ಶ್ವಾನ (ನಾಯಿ). ಈ ಶ್ವಾನದ ಸಹಾಯದಿಂದ ಇಂದು ಟೀಮಿಟಿಯನ್ ಕಾಲೋನಿಯ ಸುತ್ತಮುತ್ತಲಿನ ಭಾಗಗಳಲ್ಲಿ ಬಂದಿದ್ದ ನೂರಾರು ಪಾರ್ಸೆಲ್‌ಗಳು ಹಾಗೂ ಪೋಸ್ಟ್ ಬಾಕ್ಸ್‌ಗಳನ್ನು ತೀವ್ರವಾಗಿ ತಪಾಸಣೆಗೊಳಪಡಿಸಲಾಯಿತು.

ಯಾವುದೇ ಕಾರಣಕ್ಕೂ ನಮ್ಮ ವ್ಯಾಪ್ತಿಯಲ್ಲಿ ಹಾಗೂ ಇಂತಹ ವಸತಿ ಕಾಲೋನಿಗಳ ಆಸುಪಾಸಿನಲ್ಲಿ ಮಾದಕ ವಸ್ತುಗಳ ಜಾಲ ಬೆಳೆಯಲು ಬಿಡುವುದಿಲ್ಲ ಎಂದು ಎಸ್‌ಪಿ ಸಾಹೇಬರು ಖಡಕ್ ಆದೇಶ ನೀಡಿದ್ದಾರೆ.

ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಅಪರಾಧಿಗಳನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ಸದಾ ಸಜ್ಜಾಗಿದೆ.

ಟೀಮಿಟಿಯನ್ ಕಾಲೋನಿಯಲ್ಲಿ ನಡೆದ ಈ ವಿಶೇಷ ಶ್ವಾನ ದಳದ ತಪಾಸಣೆಯಿಂದಾಗಿ ಕೊರಿಯರ್ ಸಂಸ್ಥೆಗಳು, ಅಂಚೆ ಸಿಬ್ಬಂದಿ ಹಾಗೂ ಸ್ಥಳೀಯ ಸಾರ್ವಜನಿಕರಲ್ಲಿ ಜಾಗೃತಿ ಮೂಡಿದಂತಾಗಿದೆ. ಮುಂಬರುವ ದಿನಗಳಲ್ಲೂ ಇಂತಹ ಕಾರ್ಯಾಚರಣೆಗಳು ಜಿಲ್ಲಾದ್ಯಂತ ಮುಂದುವರಿಯಲಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಡಿಯೋ ದೃಶ್ಯಾವಳಿಗಳು

ವರದಿಗಾರರು: ಬಸಯ್ಯ ತೋಟಯ್ಯನವರ

ಹೆಚ್ಚಿನ ಸುದ್ದಿ