Thursday, August 6, 2026
Homeಟಾಪ್ ನ್ಯೂಸ್ಚನ್ನಮ್ಮನ ಕಿತ್ತೂರಿನಲ್ಲಿ ಬೀದಿ ನಾಯಿಗಳು ಹಾವಳಿ; ಪಟ್ಟಣ ಪಂಚಾಯಿತಿಯವರು ಬೀದಿ ನಾಯಿಗಳನ್ನು ಹಿಡಿದು ಬೇರೆ ಕಡೆ...

ಚನ್ನಮ್ಮನ ಕಿತ್ತೂರಿನಲ್ಲಿ ಬೀದಿ ನಾಯಿಗಳು ಹಾವಳಿ; ಪಟ್ಟಣ ಪಂಚಾಯಿತಿಯವರು ಬೀದಿ ನಾಯಿಗಳನ್ನು ಹಿಡಿದು ಬೇರೆ ಕಡೆ ಸ್ಥಳಾಂತರಿಸಲು ಸಾರ್ವಜನಿಕರ ಆಗ್ರಹ…..

ಸುಣಗಾರ ಓಣಿ ಎದುರುಗಡೆ ಕಾಲೇಜು ಮತ್ತು ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಬೀದಿ ನಾಯಿಗಳು ಓಡಾಡುವ ಮತ್ತು ಬೊಗಳುವ ದೃಶ್ಯ

ಚನ್ನಮ್ಮನ ಕಿತ್ತೂರು: ಪಟ್ಟಣದಲ್ಲಿ ಎಲ್ಲಿ ನೋಡಿದರೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಮಕ್ಕಳು, ವಯಸ್ಕರು ರಸ್ತೆಯಲ್ಲಿ ನಡೆದುಕೊಂಡು ಹೋಗಲು ಭಯಪಡುವ ಪರಿಸ್ಥಿತಿ ಎದುರಾಗಿದೆ.
ಇದು ಪಟ್ಟಣದ ಒಂದೆರಡು ಓಣಿಯ ಕಥೆಯಲ್ಲ ಪಟ್ಟಣದ ಸೋಮವಾರಪೇಟೆ ಗುರುವಾರಪೇಟೆ ಎಲ್ಲಾ ಕಡೆ ಈ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆ.
ಈಗಾಗಲೇ ಬೀದಿ ನಾಯಿಗಳು ಸಾಕಷ್ಟು ಜನರಿಗೆ ಕಚ್ಚಿವೆ ಕೆಲವರು ರೋಡಿನಲ್ಲಿ ನಡೆದುಕೊಂಡು ಹೋಗಲು ಭಯಪಡುತ್ತಿದ್ದಾರೆ.

ಪಟ್ಟಣದ ಕೊಂಡವಾಡ ಚೌಕ, ಸುಣಗಾರ ಓಣಿ,ಮೇದಾರ ಓಣಿ, ಭಜಂತ್ರಿ ಓಣಿ, ಬಳಿಗಾರ ಓಣಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೀದಿ ನಾಯಿಗಳು ಇವೆ, ಕಿತ್ತೂರು ಪಟ್ಟಣದಲ್ಲಿ ಮದ್ಯ ರಸ್ತೆಯಾದ ಕಾಲೇಜು ಮತ್ತು ಬಸ್ ನಿಲ್ದಾಣಕ್ಕೆ ಹೋರಾಡುವ ರಸ್ತೆ ಇದಾಗಿದ್ದು ನಿತ್ಯ ಸಂಚರಿಸುವವರು ಈ ಬೀದಿ ನಾಯಿಗಳಿಗೆ ಹೆದರಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ…
ದಿನನಿತ್ಯ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಈ ಬೀದಿ ನಾಯಿಗಳಿಂದ ಕೂಡಿಸಿಕೊಂಡಿದ್ದು ಉಂಟು ಎಂದು ಸ್ಥಳೀಯರು ತಿಳಿಸಿದ್ದಾರೆ..ಹಾಗೂ

ರಾತ್ರಿ ಆದ್ರೆ ಸಾಕು ಎಲ್ಲ ನಾಯಿಗಳು ಒಂದೆಡೆ ಸೇರಿ ಸತತವಾಗಿ ಬೊಗಳುತ್ತವೆ, ಇದರಿಂದ ಸಣ್ಣ ಮಕ್ಕಳು ಹೆದರುತ್ತಿದ್ದಾರೆ ಎಂದು ಸುಣಗಾರ ಓಣಿ, ಮೇದಾರ ಓಣಿ, ಚನ್ನಮ್ಮ ನಗರದ ನಿವಾಸಿಗಳು ನಮ್ಮ ನ್ಯೂಸ್ ಚಾನಲ್ ಗೆ ತಿಳಿಸಿದ್ದಾರೆ.

ಸುಣಗಾರ ಓಣಿ ಮುಂದುಗಡೆ ರಸ್ತೆ ಮೇಲೆ ರಾತ್ರಿ ವೇಳೆ ಹತ್ತು ಹಲವು ನಾಯಿಗಳು ಬರುತ್ತವೆ ಇದರಿಂದ ಅಲ್ಲಿರುವ ನಿವಾಸಿಗಳು ಭಯಭೀತರಾಗಿದ್ದಾರೆ.


ಕಿತ್ತೂರು ಪಟ್ಟಣದ ಪಂಚಾಯಿತಿಯವರು ಈ ಬೀದಿ ನಾಯಿಗಳನ್ನು ಹಿಡಿದು ಬೇರೆ ಕಡೆ ಸ್ಥಳಾಂತರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ ಬೇಗನೆ ಬೀದಿ ನಾಯಿಗಳನ್ನು ಹಿಡಿದುಕೊಂಡು ಹೋಗದೇ ಇದ್ದರೆ ಮುಂದಿನ ದಿನಗಳಲ್ಲಿ ಪಟ್ಟಣದ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ…

ಸಂಬಂಧ ಪಟ್ಟ ಅಧಿಕಾರಿಗಳು ಬೀದಿ ಬದಿಯಲ್ಲಿ ಇರುವ ನಾಯಿಗಳನ್ನು ಆದಷ್ಟು ಬೇಗ ಹಿಡಿದು ಬೇರೆ ಕಡೆ ಸ್ಥಳಾಂತರಿಸಬೇಕು ಎಂದು ಸ್ಥಳೀಯರು ತಿಳಿಸಿದ್ದಾರೆ

ಸಂಬಂಧಿತ ಅಧಿಕಾರಿಗಳು ಕಿತ್ತೂರಿನಲ್ಲಿ ಇರುವ ಎಲ್ಲ ಬೀದಿ ನಾಯಿಗಳಿಂದ ಮುಕ್ತಿ ನೀಡಬೇಕು ಎಂದು ಎಲ್ಲರ ಒತ್ತಾಯವಾಗಿದೆ..

ಸಂಪಾದಕರು: ರಾಮಚಂದ್ರ ಪೂಜೇರ

ಹೆಚ್ಚಿನ ಸುದ್ದಿ