*
ಚನ್ನಮ್ಮನ ಕಿತ್ತೂರು ಸರ್ಕಲ್ ನಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನಿಗೆ ಗೌರವ ನಮನ — ಹೋರಾಟದ ಬದುಕು ಸ್ಮರಣೆ

ಚನ್ನಮ್ಮನ ಕಿತ್ತೂರು: ಪಟ್ಟಣದ ಚನ್ನಮ್ಮ ಸರ್ಕಲ್ನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘಟನೆಯ ವತಿಯಿಂದ ಸಂಗೊಳ್ಳಿ ರಾಯಣ್ಣ ಅವರ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿ, ಕೇಕ್ ಕತ್ತರಿಸುವ ಮೂಲಕ ಜನ್ಮ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು. ಜೊತೆಗೆ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಂಗೊಳ್ಳಿ ರಾಯಣ್ಣ ಅವರು ವಹಿಸಿದ ಪಾತ್ರ ಹಾಗೂ ಅವರ ತ್ಯಾಗ, ಶೌರ್ಯ ಮತ್ತು ಹೋರಾಟದ ಬದುಕನ್ನು ಸ್ಮರಿಸಲಾಯಿತು.
ಸಂಘಟನೆಯ ರಾಜ್ಯಾಧ್ಯಕ್ಷ ಮಹಾಂತೇಶ ಕರಬಸನ್ನವರು ಮಾತನಾಡಿ, ಕಿತ್ತೂರು ಐತಿಹಾಸಿಕ ನೆಲ, ಸ್ವಾಭಿಮಾನದ ತವರು, ಕಿತ್ತೂರು ಸಂಸ್ಥಾನದ ಹೋರಾಟಗಾರರ ಕೊಡುಗೆ ಹಾಗೂ ವಿಶೇಷವಾಗಿ ಸಂಗೊಳ್ಳಿ ರಾಯಣ್ಣ ಅವರ ಜೀವನ, ಹೋರಾಟ ಮತ್ತು ದೇಶಪ್ರೇಮದ ಕುರಿತು ವಿವರವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಹಾಗೆ ರಾಯಣ್ಣ ಅವರ ಆದರ್ಶ ಮತ್ತು ಹೋರಾಟದ ಸಂದೇಶವನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವ ಅಗತ್ಯವಿದೆ ಎಂದು ಮಹಾಂತೇಶ ಹೇಳಿದರು.
*ಸಂಗೊಳ್ಳಿ ರಾಯಣ್ಣರ ಆದರ್ಶ ಯುವಜನತೆಗೆ ಮಾದರಿ*
ಸಂಗೊಳ್ಳಿ ರಾಯಣ್ಣ ಅವರು ತೋರಿದ ದೇಶಭಕ್ತಿ, ಧೈರ್ಯ, ಸ್ವಾಭಿಮಾನ ಮತ್ತು ತ್ಯಾಗದ ಬದುಕು ಇಂದಿನ ಪೀಳಿಗೆಗೆ ಸ್ಫೂರ್ತಿಯಾಗಬೇಕು. ಕಿತ್ತೂರಿನ ಇತಿಹಾಸ ಮತ್ತು ಹೋರಾಟಗಾರರ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಶ್ರೀಗಳು, ನಿಚ್ಚಣಕಿ ಪಂಚಾಕ್ಷರಿ ಮಹಾಸ್ವಾಮಿಗಳು ಮಡಿವಾಳೇಶ್ವರ ಮಠ,ಚ. ಕಿತ್ತೂರು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಫ್. ಜಕಾತಿ, ಅಪ್ಪೇಶಿ ದಳವಾಯಿ, ಮತ್ತು ಧಾರವಾಡ ಜಿಲ್ಲಾ ರೈತ ಹೋರಾಟಗಾರರು ನಾಗರತ್ನ ಪಾಟಿಲ್ ಗ್ರಂಥಪಾಲಕ ಬಸವರಾಜ ದಳವಾಯಿ ನಿರೂಪಿಸಿದರು ರಾಜ್ಯ ಸಂಘಟನೆಯ. ಉಪಾಧ್ಯಕ್ಷ ಮಹೇಶ್ ಮಲ್ಲಶೆಟ್ಟಿ ಜಿಲ್ಲಾ ಅಧ್ಯಕ್ಷ ಶಿವಾನಂದ ಎಮ್ಮಿ ಜಿಲ್ಲಾ ಕಾರ್ಯದರ್ಶಿ ಸತೀಶ ನಾಯ್ಕರ್.ಅಶೋಕ ಮಾಳಗಿ ಉಮೇಶ ಉಂಬಿ ಶ್ರೀಶೈಲ ವರಗನ್ನವರ ಮಲ್ಲಿಕಾರ್ಜುನ ಒಕ್ಕೂಂದ ಅಭಿಷೇಕ್ ತಿಳಗಂಜಿ. ಪದಾಧಿಕಾರಿಗಳು, ಮತ್ತು ಕರ್ನಾಟಕ ರಾಜ್ಯ ಕುರುಬರ ಸಂಘ ತಾಲೂಕ ಘಟಕ ಬಸಾಪುರ ಪದಾಧಿಕಾರಿಗಳು ಮತ್ತು. ಹಡಪದ ಸಮಾಜ ರಾಜ್ಯ ಸಮಾಜ ಉಪಾಧ್ಯಕ್ಷರು ಸುರೇಶ ಹಡಪದ ಸಂಗಪ್ಪ ಹಡಪದ ಹಡಪದ ಸಮಾಜ ಕಿತ್ತೂರ ತಾಲೂಕು ಉಪಾಧ್ಯಕ್ಷರು ವಿನಾಯಕ ಹಡಪದ ಹಾಗೂ ಕಿತ್ತೂರು ಮತ್ತು ಸುತ್ತಮುತ್ತಲಿನ ರಾಯಣ್ಣ ಅಭಿಮಾನಿಗಳು ಉಪಸ್ಥಿತರಿದ್ದರು.
