Friday, August 7, 2026
Homeಜಿಲ್ಲಾ ಸುದ್ದಿಗಳುಕಾರ್ಯನಿರತ ಪತ್ರಕರ್ತರ ಧ್ವನಿ ಕಿತ್ತೂರು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ:

ಕಾರ್ಯನಿರತ ಪತ್ರಕರ್ತರ ಧ್ವನಿ ಕಿತ್ತೂರು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ:

ಚ ​ಕಿತ್ತೂರು: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ, ಕಿತ್ತೂರು ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ಜರುಗಿತು.
ಸಂಘಟನೆಯ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಬಸವರಾಜ ಚಿನಗುಡಿ ಅವರನ್ನು ಸರ್ವಾನುಮತದಿಂದ ಮುಂದುವರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

​ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಪದಾಧಿಕಾರಿಗಳನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದ್ದು, ಪಟ್ಟಿ ಈ ಕೆಳಗಿನಂತಿದೆ:
​ಗೌರವ ಅಧ್ಯಕ್ಷರು: ಸುರೇಶ ಮುರಡಿಮಠ
​ಅಧ್ಯಕ್ಷರು: ಬಸವರಾಜ ಚಿನಗುಡಿ
ಉಪಾಧ್ಯಕ್ಷರು: ಮಹಾಂತೇಶ ಕರಬಸಣ್ಣವರ
​ಕಾರ್ಯದರ್ಶಿ: ವೀರೇಶ ಹಿರೇಮಠ
​ಖಜಾಂಚಿ: ವಿಠ್ಠಲ ಮಿರಜಕರ

​ಆಯ್ಕೆಯ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ನೂತನ ಅಧ್ಯಕ್ಷ ಬಸವರಾಜ ಚಿನಗುಡಿ ಅವರು, “ಕಿತ್ತೂರಿನ ಪತ್ರಕರ್ತರ ಹಿತದೃಷ್ಟಿಯಿಂದ ಮತ್ತು ಸಂಘಟನೆಯ ಆಡಳಿತಾತ್ಮಕ ಚಟುವಟಿಕೆಗಳಿಗಾಗಿ ಅತೀ ಶೀಘ್ರದಲ್ಲಿಯೇ ಕಿತ್ತೂರು ಪಟ್ಟಣದಲ್ಲಿ ಒಂದು ಸುಸಜ್ಜಿತ ಪತ್ರಿಕಾ ಕಛೇರಿಯನ್ನು ಪ್ರಾರಂಭಿಸಲಾಗುವುದು,” ಎಂದು ಪ್ರಕಟಿಸಿದರು.


​ಬಸವರಾಜ ಚಿನಗುಡಿ ಮಾತನಾಡಿ ಅವರು, “ಜಿಲ್ಲಾ ಮಟ್ಟದ ಅತ್ಯಂತ ಪ್ರಭಾವಿ ವ್ಯಕ್ತಿಯೊಬ್ಬರು ಶೀಘ್ರದಲ್ಲೇ ನಮ್ಮ ಸಂಘಟನೆಗೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದಾರೆ. ಅವರ ಸೇರ್ಪಡೆಯಿಂದ ನಮ್ಮ ಸಂಘಕ್ಕೆ ಆನೆ ಬಲ ಬಂದಂತಾಗಲಿದ್ದು, ಜಿಲ್ಲೆಯಲ್ಲಿ ಪತ್ರಕರ್ತರ ಧ್ವನಿ ಮತ್ತಷ್ಟು ಬಲಿಷ್ಠವಾಗಲಿದೆ,” ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ, ಮುಂಬರುವ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಅತ್ಯಂತ ವೈಭವದಿಂದ ಜರುಗಲಿರುವ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಕಿತ್ತೂರು ಘಟಕದಿಂದ ಸಕ್ರಿಯವಾಗಿ ಭಾಗವಹಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸಮ್ಮೇಳನದ ವೇದಿಕೆಯಲ್ಲಿ ವಿವಿಧ ರಂಗಗಳ ಸಾಧಕರಿಗೆ ಸಂಘಟನೆಯ ವತಿಯಿಂದ ಸನ್ಮಾನಿಸಿ ಗೌರವಿಸುವ ಕುರಿತು ಪದಾಧಿಕಾರಿಗಳು ಮಹತ್ವದ ನಿರ್ಧಾರ ಕೈಗೊಂಡರು.

​ಸಭೆಯಲ್ಲಿ ಜಿಲ್ಲಾ ಪದಾಧಿಕಾರಿ ನಾಗರಾಜ ಜೋರಾಪುರ ಹಾಗು ಕಿತ್ತೂರು ತಾಲೂಕಿನ ಪ್ರಮುಖ ಪತ್ರಕರ್ತರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ