Thursday, August 13, 2026
HomeUncategorizedಕರ್ನಾಟಕ ಯಾದವ ಯುವ ವೇದಿಕೆ ವತಿಯಿಂದ ಯಾದವ ಸಾಧಕರತ್ನ ಪ್ರಶಸ್ತಿಗೆ ಆಯ್ಕೆಯಾದ ಶ್ರೀ ಶಿವ ಯಾದವ್...

ಕರ್ನಾಟಕ ಯಾದವ ಯುವ ವೇದಿಕೆ ವತಿಯಿಂದ ಯಾದವ ಸಾಧಕರತ್ನ ಪ್ರಶಸ್ತಿಗೆ ಆಯ್ಕೆಯಾದ ಶ್ರೀ ಶಿವ ಯಾದವ್ ಅವರಿಗೆ ಅಭಿನಂದನೆ

ಸ್ಟೋರಿ ಬಾಕ್ಸ್ ಸುದ್ದಿ :
ಬೆಂಗಳೂರು: ಕರ್ನಾಟಕ ಯಾದವ ಯುವ ವೇದಿಕೆಯ ವತಿಯಿಂದ ಸಮಾಜ ಸೇವೆ, ಯುವಜನ ಸಂಘಟನೆ, ಮಾಧ್ಯಮ ಕ್ಷೇತ್ರ ಹಾಗೂ ಯಾದವ ಸಮುದಾಯದ ಅಭಿವೃದ್ಧಿಗಾಗಿ ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಶ್ರೀ ಶಿವ ಯಾದವ್ ಅವರನ್ನು ಪ್ರತಿಷ್ಠಿತ “ಯಾದವ ಸಾಧಕರತ್ನ” ಗೌರವಕ್ಕೆ ಆಯ್ಕೆ ಮಾಡಲಾಗಿದೆ.

ಆಗಸ್ಟ್ 23 ರಂದು ನಡೆಯಲಿರುವ ಕರ್ನಾಟಕ ಯಾದವ ಯುವ ವೇದಿಕೆಯ 12ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಪ್ರತಿಷ್ಠಿತ “ಯಾದವ ಸಾಧಕರತ್ನ” ಪ್ರಶಸ್ತಿಯನ್ನು ಶ್ರೀ ಶಿವ ಯಾದವ್ ಅವರಿಗೆ ಪ್ರದಾನ ಮಾಡಲಾಗುವುದು.

ಶ್ರೀ ಶಿವ ಯಾದವ್ ಅವರು ಯಾದವ ಸಮಾಜದ ಏಕತೆ, ಸಂಘಟನೆ, ಯುವಜನರ ಸಬಲೀಕರಣ ಹಾಗೂ ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ವಿವಿಧ ಜನಪರ ಕಾರ್ಯಕ್ರಮಗಳ ಮೂಲಕ ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಯಾದವ ಯುವ ವೇದಿಕೆಯ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು, ಸಮಾಜದ ಮುಖಂಡರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಸ್ನೇಹಿತರು ಹಾಗೂ ಅಭಿಮಾನಿಗಳು ಶ್ರೀ ಶಿವ ಯಾದವ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಸಮಾಜ ಸೇವೆಯಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.

ವರದಿ : ಶಿವು ರಾಠೋಡ

ಹೆಚ್ಚಿನ ಸುದ್ದಿ