Tuesday, May 26, 2026
Homeಜಿಲ್ಲಾ ಸುದ್ದಿಗಳುಇತಿಹಾಸ ಬಲ್ಲವರು ಇತಿಹಾಸ ಸೃಷ್ಟಿಸುತ್ತಾರೆ

ಇತಿಹಾಸ ಬಲ್ಲವರು ಇತಿಹಾಸ ಸೃಷ್ಟಿಸುತ್ತಾರೆ

ಚನ್ನಮ್ಮನ ಕಿತ್ತೂರು, ಮೇ19: ಯಾರು ಇತಿಹಾಸ ಬಲ್ಲರೋ ಅವರು ಹೊಸ ಇತಿಹಾಸ ಸೃಷ್ಟಿಸುತ್ತಾರೆ. ಆ ಇತಿಹಾಸವನ್ನು ಜೀವಂತವಾಗಿ ಇಟ್ಟುಕೊಳ್ಳುವ ಕೆಲಸ ವಸ್ತು ಸಂಗ್ರಹಾಲಯಗಳು (ಮ್ಯೂಜಿಯಮ್‍ಗಳು) ಮಾಡುತ್ತವೆ. ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಕಸಾಪ ಮತ್ತು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಕಿತ್ತೂರರಾಣಿ ಚನ್ನಮ್ಮನ ಸ್ಮಾರಕ ಸರ್ಕಾರಿ ವಸ್ತು ಸಂಗ್ರಹಾಲಯ ಸಹಯೋಗದೊಂದಿಗೆ ಕೋಟೆ ಆವರಣದಲ್ಲಿ ಏರ್ಪಡಿಸಿದ್ದ ಅಂತರರಾಷ್ಟ್ರೀಯ ವಸ್ತು ಸಂಗ್ರºಲಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸಿ ಮಾತನಾಡಿದರು. ಕೋಟೆಗೆ ಪ್ರವಾಸಿಗರು ವಿಕ್ಷೀಸಲು ಬಂದಾಗ ಚನ್ನಮ್ಮನ ಇತಿಹಾಸ ಹಾಗೂ ಇಲ್ಲಿಯ ವಸ್ತು ಸಂಗ್ರಹಾಲಯ ಕುರಿತು ರಾಜ್ಯ-ದೇಶಕ್ಕೆ ಪರಿಚಯಿಸುವ ಕೆಲಸ ಕೆಲವೇ ದಿನಗಳಲ್ಲಿ ಆಗುತ್ತದೆ. ಇದರ ಜೊತೆ ಕೋಟೆಯ ಹಳೇ ಗೋಡೆ ಮತ್ತು ಹಳೆ ಅರಮನೆ ನೆಲ ಹಾಸಿಗೆ ಜೀರ್ಣೋದ್ದಾರ ಮಾಡುವ ಕೆಲಸ ಪ್ರಾರಂಭವಾಗಿದೆ. ಅದಕ್ಕೆ ನಿಮ್ಮ ಸಹಕಾರ ಅಗತ್ಯ. ಇದರ ನೆಪದಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಸತ್ಕರಿಸುವುದು ಶ್ಲಾಘನೀಯ. ಇದು ನಮಗೂ, ಶಿಕ್ಷಕರಿಗೂ, ಜಿಲ್ಲೆಗೂ, ತಾಲೂಕಾಡಳಿತಕ್ಕೂ ಹೆಸರು ತರುವಂತ ಕೆಲಸ ಎಂದರು.

ಬೆಳಗಾವಿ ಸಂಗೋಳ್ಳಿ ರಾಯಣ್ಣ ಪ್ರಥಮ ದರ್ಜೆ ಮಹಾವಿದ್ಯಾಲಯದ ಉಪನ್ಯಾಕ ಡಾ. ಸದಾಶಿವ ಮುಗಳಿ ಉಪನ್ಯಾಸ ನೀಡಿದರು.

ರಾಜಗುರು ಸಂಸ್ಥಾನ ಕಲ್ಮಠ ಶ್ರೀ ಮಡಿವಾಳ ರಾಜಯೋಗಿಂದ್ರ ಸ್ವಾಮಿಜೀ ಆರ್ಶೀವಚನ ನೀಡಿ ಮಾತನಾಡಿ ಕಿತ್ತೂರು ವಸ್ತು ಸಂಗ್ರಹಾಲಯಕ್ಕೆ 50 ವರ್ಷ ಗತಿಸಿದ್ದು ಇದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕಾಲದಲ್ಲಿ ಉದ್ಘಾಟನೆಯಾಗಿತ್ತು. ಸರ್ಕಾರಗಳು 50 ವರ್ಷದ ಸಂಭ್ರಮಾಚರಣೆ ಮಾಡಬೇಕು ಅಂದಾಗ ಮಾತ್ರ ಈ ವಸ್ತು ಸಂಗ್ರಹಾಲಯಕ್ಕೆ ಹೆಚ್ಚಿನ ಮೆರಗು ಬರುತ್ತದೆ. ಈ ಭಾಗದ ಜನತೆ ಒತ್ತಾಸೆಯಾಗಿದೆ ಎಂದರು.

ಸಭೆ ಅಧ್ಯಕ್ಷತೆ ಕಸಾಪ ಅಧ್ಯಕ್ಷ ಡಾ. ಎಸ್.ಬಿ.ದಳವಾಯಿ ವಹಿಸಿಕೊಂಡು ಅಂತರ್ರಾಷ್ಟ್ರೀಯ ವಸ್ತು ಸಂಗ್ರಹಾಲಯ ಕುರಿತು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ತಹಶೀಲ್ದಾರ ಕಲ್ಲನಗೌಡ ಪಾಟೀಲ ಮತ್ತು ಸಿಪಿಐ ಶಿವಾನಂದ ಗುಡಗನಟ್ಟಿ ಮಾತನಾಡಿದರು. ಕ್ಯೂರೇಟರ್ ರಾಘವೇಂದ್ರ ಸ್ವಾಗತಿಸಿದರು.

2026ನೇ ಸಾಲಿನ ಎಸ್‍ಎಸ್‍ಎಲ್‍ಸಿಯಲ್ಲಿ ಪ್ರಥಮ ಮತ್ತು ದ್ವಿತೀಯ 125ಕ್ಕೆ 125 ಮತ್ತು 100ಕ್ಕೆ 100 ಅಂಕ ಪಡೆದು ಪಾಸಾದ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕ ಹಾಗೂ ಅಭಿನಂದನಾ ಪತ್ರ ನೀಡಿ.. ಜೊತೆಯಲ್ಲಿ ಅಥಿತಿಗಳನ್ನು ಸತ್ಕರಿಸಲಾಯಿತು.

ಸಭೆಯಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಗಾಯತ್ರಿ ಅಜ್ಜನ್ನವರ, ತಾಪಂ ಇಓ ನಿಂಗಪ್ಪ ಮಸಳಿ, ಶಿಕ್ಷಕ ಮಂಜುನಾಥ ಕಳಸಣ್ಣವರ ನಿರೂಪಿಸಿದರು, ಸರ್ಕಾರಿ ಪದವಿ ಪೂರ್ವ ಕಾಲೇಜ ಪ್ರಾಚಾರ್ಯ ಶ್ರೀ ಹೊಸಮನಿ, ಮಹೇಶ ಹೊಂಗಲ, ಶಿಕ್ಷಕ ವಿವೇಕ ಕುರಗುದ, ಬಿದರಿ ಸರ್, ಮಕ್ಕಳು, ಪೋಷಕರು, ಸಾರ್ವನಿಕರಿದ್ದರು.

ವರದಿಗಾರರು : ಹನಮಂತ ಬಿರಾದಾರಪಾಟೀಲ

ಹೆಚ್ಚಿನ ಸುದ್ದಿ