Sunday, September 27, 2026
Homeಜಿಲ್ಲಾ ಸುದ್ದಿಗಳುಅಳವಂಡಿ ಪಿಎಸ್‌ಐ ಆಗಿ ಗೀತಾಂಜಲಿ ಶಿಂಧೆ ಅಧಿಕಾರ...

ಅಳವಂಡಿ ಪಿಎಸ್‌ಐ ಆಗಿ ಗೀತಾಂಜಲಿ ಶಿಂಧೆ ಅಧಿಕಾರ…

ಈ ಹಿಂದೆ ಕೊಪ್ಪಳ ಜಿಲ್ಲೆಯಲ್ಲಿ ಪಿಎಸ್‌ಐ ಆಗಿ ಸೇವೆ ಸಲ್ಲಿಸಿದ್ದ ಗೀತಾಂಜಲಿ ಶಿಂಧೆ ಅಳವಂಡಿ ಪೊಲೀಸ್‌ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಆ ಸ್ಥಾನದಲ್ಲಿದ್ದ ಭ್ರಷ್ಟ ಪಿಎಸ್‌ಐ ಪ್ರಹ್ಲಾದ ನಾಯಕ್‌ ಅವರನ್ನು ವಿಜಯನಗರ ಜಿಲ್ಲೆಯ ಇಟ್ಟಗಿ ಠಾಣೆಗೆ ವರ್ಗಾಯಿಸಲಾಗಿದೆ.

ಗೀತಾಂಜಲಿ ಶಿಂಧೆ ಬಿರುಸು ವ್ಯಕ್ತಿತ್ವದ ಅಧಿಕಾರಿ ಎಂಬ ಖ್ಯಾತಿ ಮತ್ತು ಕುಖ್ಯಾತಿ ಹೊಂದಿದವರು. ಹಿಂದೆ ರಾಯಚೂರು ಜಿಲ್ಲೆಯ ಸಿರವಾರ ಠಾಣೆಯ ವ್ಯಾಪ್ತಿಯಲ್ಲಿ ಯುವಕನೊಬ್ಬನಿಗೆ ಕಿರುಕುಳ ನೀಡಿದ್ದಾರೆಂಬ ಆರೋಪದ ಮೇಲೆ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

ಡೆತ್‌ನೋಟ್ ಬರೆದಿಟ್ಟು ಯುವಕ ನಾಪತ್ತೆಯಾಗಿದ್ದ ಪ್ರಕರಣ ಮತ್ತು ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಅವರನ್ನು 2022ರ ಡಿಸೆಂಬರ್‌ನಲ್ಲಿ ಅಮಾನತು ಮಾಡಲಾಗಿತ್ತು.

ಮರಳು ಅಕ್ರಮಿಗಳ ಜೊತೆ ಕೈ ಜೋಡಿಸುವ ಮೂಲಕ ಕುಖ್ಯಾತವಾಗಿರುವ ಅಳವಂಡಿ ಠಾಣೆಯನ್ನು ಈ ಅಧಿಕಾರಿ ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲ ಜನರಲ್ಲಿದೆ.

ಹೆಚ್ಚಿನ ಸುದ್ದಿ